ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?


Team Udayavani, Oct 21, 2020, 8:08 PM IST

avalu-tdy-2

ಸಾಂದರ್ಭಿಕ ಚಿತ್ರ

ಪ್ರಗ್ನೆನ್ಸಿಗೂ ಮೊದಲು ನನ್ನ ತೂಕಕಡಿಮೆಯಿತ್ತು. ಹೆರಿಗೆಯ ನಂತರ ಏರಿಕೆಯಾಗಿದ್ದು ಎಷ್ಟೇ ಪ್ರಯತ್ನಿಸಿದರೂ ಮೊದಲಿನ ತೂಕಕ್ಕೆ ಬರಲೇ ಇಲ್ಲ ಅಂದಳು ಅವಳು. ನೀನು ಸ್ವಲ್ಪನಾದರೂ ಹತ್ತಿರಕ್ಕೆ ತಂದಿದ್ದೀಯ, ಆದರೆ ನನ್ನದು ಮೊದಲು ಮತ್ತು ಈಗಿನತೂಕಕ್ಕೆ ಭಾರೀವ್ಯತ್ಯಾಸವಿದೆ ಅಂದಳು ಇವಳು. ನಾನು ಡಯಟ್‌ ಮೊರೆಹೋದರೂ ಏನೂಪ್ರಯೋಜನವಿಲ್ಲ ಎಂದಳುಮತ್ತೂಬ್ಬಳು. ಇದು ಇವರುಗಳ ಕಥೆಯಷ್ಟೇ ಅಲ್ಲ, ಬಹುತೇಕ ಹೆಣ್ಣುಮಕ್ಕಳ ಕೊರಗು, ಸದಾ ಫಿಟ್ನೆಸ್‌ ಮಂತ್ರ.

ನನಗಾಗಿದ್ದು ಸಿಸೇರಿಯನ್‌ ಡೆಲಿವರಿ. ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುವ ದಿನ, ಅಮ್ಮ ನೆಲದ ಮೇಲೆ ಬ್ಯಾಗ್‌ ಇಟ್ಟು ಕೊಂಡು ಬಟ್ಟೆಗಳನ್ನೆಲ್ಲ ತುಂಬಿಸುತ್ತಿದ್ದಳು.ಕೂರಲೂ, ನಿಲ್ಲಲೂ, ನಡೆಯಲೂ ಕಷ್ಟಪಡುತ್ತಿದ್ದ ನಾನು ಅವಳ ಬಳಿ ಹೇಳಿಯೇಬಿಟ್ಟಿದ್ದೆ: ನಿನ್ನ ನೋಡಿದಾಗ ಆಸೆಯಾಗುತ್ತಿದೆ, ನಾನ್ಯಾವಾಗ ಮೊದಲಿನಂತೆ ಆರಾಮ ಆಗುವುದು- ಎಂದು.

ಕೆಲವೊಂದು ಪೇರೆಂಟಿಂಗ್‌ವೆಬ್‌ಸೈಟ್‌, ಅಪ್ಲಿಕೇಶನ್‌ಗಳಲ್ಲಿ ಹೆಣ್ಣುಮಕ್ಕಳು ಡೆಲಿವರಿಯ ನಂತರ ತೂಕ ಇಳಿಸಿಕೊಳ್ಳುವುದು ಹೇಗೆ? ಡೆಲಿವರಿ ಆದ ಎಷ್ಟನೇ ದಿನದಿಂದ ವ್ಯಾಯಾಮ ಮಾಡಬಹುದು? ತೂಕ ಇಳಿಸಲು ಯಾವ ಆಹಾರ ಸೇವಿಸಿದರೆ ಉತ್ತಮ? ಎಂಬಿತ್ಯಾದಿ ಪ್ರಶ್ನೆಕೇಳಿರುತ್ತಾರೆ. ಎಲ್ಲದಕ್ಕೂ ಉತ್ತರ ಸಮಯ! ಇದು ಎಲ್ಲರಿಗೂ ತಿಳಿದಿದೆ. ಆದರೂ ಅನಾವಶ್ಯಕ ಹೆದರಿಕೆ. ಮ್ಯಾರಥಾನ್‌, ಟ್ರೆಕ್ಕಿಂಗ್‌, ಹೈಕಿಂಗ್‌ ಎಂದೆಲ್ಲ ಓಡಾಡುವ ಹೆಣ್ಣುಮಕ್ಕಳು, ಡೆಲಿವರಿ ಆದಮೇಲೆ ಬರುವ ಸಣ್ಣದಾದ ಬೆನ್ನು ನೋವಿಗೂ ಬೇಸರಿಸುತ್ತಾರೆ. ಹೇಗಿದ್ದವಳು ಹೇಗಾಗಿಬಿಟ್ಟೆ ಎಂದು ಕೊರಗುತ್ತಾರೆ.

ಆದರೆ, ಇಂಥದೊಂದು ದೈಹಿಕ ಬದಲಾವಣೆ ಆಗಿದ್ದು ಒಂದು ಜೀವವನ್ನು ಭೂಮಿಗೆ ಪರಿಚಯಿಸಿದ ಮೇಲೆ ಎಂಬುದನ್ನು ಮರೆಯಬಾರದು. ಹಾಗೆ ನೋಡಿದರೆ ಇಂದಿನ ಹೆಣ್ಣು ಮಕ್ಕಳಿಗೆ ಫಿಟ್ನೆಸ್‌ ಟ್ರೆಂಡ್‌ ಜಾಸ್ತಿಯಾಗಿ, ಹಲವು ಬಾರಿ ಅದೇ ಒಂದು ಚಿಂತೆಯಾಗಿ ಪರಿಣಮಿಸುತ್ತದೆ. ದೇಹ ಪೂರ್ತಿಯಾಗಿ ಚೇತರಿಸಿಕೊಳ್ಳುವ ತನಕ ಯಾವುದೇ ರೀತಿಯ ಅಡ್ಡಪರಿಣಾಮ ಬೀರುವ ವ್ಯಾಯಾಮಗಳನ್ನುಮಾಡದಿರುವುದೇ ಒಳಿತು.ಹೀಗೆ ಮಾಡದೇ ಹೋದರೆ,ಒಂದು ನೋವಿಗೆ ಹತ್ತು ನೋವುಗಳು ಜೊತೆಯಾದೀತು. ಬಾಣಂತಿಯಾಗಿದ್ದಾಗ ಬಾಣಂತಿ ಪಥ್ಯವಿರಲಿ, ಒಂಬತ್ತು ತಿಂಗಳು

ಜೀವವೊಂದನ್ನು ಹೊತ್ತಿದ್ದ ದೇಹಕ್ಕೆ ರೆಸ್ಟ್ ಬೇಕು. ಎದೆ ಹಾಲುಣಿಸುವ ತಾಯಂದಿರಿಗೆ ಹಸಿವು ಜಾಸ್ತಿ.ಮೊದಲ ಕೆಲವು ತಿಂಗಳುಗಳು, ಜಾಸ್ತಿ ತಿಂದರೆ ಎಲ್ಲಿ ದಪ್ಪ ಆಗುವೆನೋ ಎಂದು ಆಲೋಚಿಸದೆ, ಮಗು ಹಾಗೂ ತನ್ನ ಆರೋಗ್ಯದ ದೃಷ್ಟಿಯಿಂದ ತಾಯಿಯಾದವಳು ಹೆಚ್ಚು ಆಹಾರ ಸೇವಿಸಬೇಕು. ಕನಿಷ್ಠ 3 ತಿಂಗಳಾದರೂ ರೆಸ್ಟ್ ಅತ್ಯಗತ್ಯ. ಇದು 6 ತಿಂಗಳವರೆಗೆ ಮುಂದುವರಿದರೂ ಅಡ್ಡಿಯಿಲ್ಲ. ತದನಂತರ ಮೊದಲಿನಂತಾಗಲು ಚೈತನ್ಯ ಬರುವುದು. ಹಲವರಿಗೆ ಅವೆಷ್ಟು ಕ್ರೀಮ್‌ ಅಥವಾ ಆಯಿಲ್‌ ಹಚ್ಚಿದರೂ ಬರುವ ಸ್ಟ್ರೆಚ್‌ ಮಾರರ್ಕ್ಸ್, ತಲೆಕೂದಲು ಹೆಚ್ಚೆಚ್ಚು ಉದುರುವುದು, ಇನ್ನೂ ಏನೇನೋ ದೈಹಿಕ ಬದಲಾವಣೆಗಳು. ಇವು ಯಾವುದಕ್ಕೂ ಅಸಹ್ಯ ಪಡದೆ, ಏನೇ ಆದರೂ ನಮ್ಮ ದೇಹವನ್ನು ಇಷ್ಟಪಡುವ, ಪ್ರೀತಿಸುವ ನಿಲುವು ಎಲ್ಲಾ ಹೆಣ್ಣುಮಕ್ಕಳದ್ದಾಗಬೇಕು.

 

-ಸುಪ್ರೀತಾ ವೆಂಕಟ್

ಟಾಪ್ ನ್ಯೂಸ್

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.