IPL 2020 : ಸಿಡಿದು ನಿಂತ ಸಿರಾಜ್; ಆರ್‌ಸಿಬಿ ಜಯಭೇರಿ
Team Udayavani, Oct 21, 2020, 10:28 PM IST
ಅಬುಧಾಬಿ: ಮೊಹಮ್ಮದ್ ಸಿರಾಜ್ ಅವರ ಸಿಡಿಗುಂಡಿನಂಥ ಎಸೆತಗಳಿಗೆ ದಿಕ್ಕಾಪಾಲಾದ ಕೆಕೆಆರ್, ಬುಧವಾರದ ಆರ್‌ಸಿಬಿ ಎದುರಿನ ಪಂದ್ಯದಲ್ಲಿ 8ವಿಕೆಟ್ ಸೋಲಿಗೆ ಸಿಲುಕಿದೆ. ಈ ಜಯದೊಂದಿಗೆ ಕೊಹ್ಲಿ ಪಡೆ 14 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ನೆಗೆದಿದೆ.
ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ಕೈಗೊಂಡ ಕೆಕೆಆರ್ 8 ವಿಕೆಟಿಗೆ ಬರೀ 84 ರನ್ ಗಳಿಸಿತು. ಇದು ಐಪಿಎಲ್‌ನಲ್ಲಿ ಕೋಲ್ಕತಾ ತಂಡದ ದ್ವಿತೀಯ ಕನಿಷ್ಠ ಗಳಿಕೆಯಾಗದೆ. ಜವಾಬಿತ್ತ ಆರ್‌ಸಿಬಿ 13.3 ಓವರ್‌ಗಳಲ್ಲಿ 2 ವಿಕೆಟಿಗೆ 85 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಸಿರಾಜ್ ಕೇವಲ 8 ರನ್ನಿತ್ತು 3 ವಿಕೆಟ್ ಉಡಾಯಿಸಿದರು. ಜತೆಗೆ ವಾಷಿಂಗ್ಟನ್ ಸುಂದರ್, ಚಹಲ್, ಮಾರಿಸ್, ಸೈನಿ ಕೂಡ ಅಪಾಯಕಾರಿಯಾಗಿ ಪರಿಣಮಿಸಿದರು. ಇವರೆಲ್ಲ ಸೇರಿ 4 ಓವರ್ ಮೇಡನ್ ಮಾಡಿದರು. ಇದು ಐಪಿಎಲ್ ದಾಖಲೆಯಾಗಿದೆ. ಬಿಟ್ಟುಕೊಟ್ಟದ್ದು 5 ಬೌಂಡರಿ, 2 ಸಿಕ್ಸರ್ ಮಾತ್ರ.
ಆರ್‌ಸಿಬಿ ಪರ ಆರಂಭಿಕರಾದ ದೇವದತ್ ಪಡೀಕ್ಕಲ್ ಮತ್ತು ಆರನ್ ಫಿಂಚ್ ಮೊದಲ ವಿಕೆಟಿಗೆ 46 ರನ್ ಒಟ್ಟುಗೂಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಫಿಂಚ್ (16) ಕಳೆದ ಪಂದ್ಯದ ಹೀರೋ ಲಾಕಿ ಫರ್ಗ್ಯುಸನ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ಪಡಿಕ್ಕಲ್(25) ಕೂಡ ಇಲ್ಲದ ರನ್ ಕದಿಯಲು ಯತ್ನಿಸಿ ರನೌಟ್‌ಗೆ ಬಲಿಯಾದರು. ಅನಂತರ ಆಡಳಿಲಿದ ಗುರುಕೀರತ್ ಸಿಂಗ್ (ಅಜೇಯ 21) ಮತ್ತು ನಾಯಕ ವಿರಾಟ್ ಕೊಹ್ಲಿ (ಅಜೇಯ 18)ರಕ್ಷಣಾತ್ಮಕ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.
ಸಿರಾಜ್ ಬೌಲಿಂಗ್ ಅಬ್ಬರ
ಶಾಬಾಜ್ ಅಹ್ಮದ್ ಬದಲು ಆಡಲಿಳಿದ ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ ಘಾತಕ ಬೌಲಿಂಗ್ ದಾಳಿ ಮೂಲಕ ಕೆಕೆಆರ್ ಪಾಳೆಯದಲ್ಲಿ ನಡುಕ ಹುಟ್ಟಿಸಿದರು. ದ್ವಿತೀಯ ಓವರ್‌ನ ಸತತ ಎಸೆತಗಳಲ್ಲಿ ರಾಹುಲ್ ತ್ರಿಪಾಠಿ (1) ಮತ್ತು ನಿತೀಶ್ ರಾಣಾ (0) ಅವರನ್ನು ಪೆವಿಲಿಯನ್ನಿಗೆ ರವಾನಿಸಿದರು. ಆಗ ಕೆಕೆಆರ್ ಕೇವಲ 3 ರನ್ ಮಾಡಿತ್ತು.
ಮುಂದಿನ ಓವರಿನಲ್ಲಿ ಸಿರಾಜ್ ಮತ್ತೂಂದು ಬೇಟೆಯಾಡಿದರು. ಅಪಾಯಕಾರಿ ಟಾಮ್ ಬ್ಯಾಂಟನ್ (10) ಅವರ ಆಟಕ್ಕೆ ತೆರೆ ಎಳೆದರು. ಸಿರಾಜ್ ಅವರ ಈ ಎರಡೂ ಓವರ್ ಮೇಡನ್ ಆಗಿತ್ತೆಂಬುದು ವಿಶೇಷ. ಇದರೊಂದಿಗೆ ಐಪಿಎಲ್ ಪಂದ್ಯವೊಂದರಲ್ಲಿ 2 ಮೇಡನ್ ಓವರ್ ಎಸೆದ ಪ್ರಥಮ ಬೌಲರ್ ಎಂಬ ವಿಶಿಷ್ಟ ಸಾಧನೆ ಸಿರಾಜ್ ಅವರದಾಯಿತು. 3ನೇ ಓವರ್ ಮುಗಿಸಿದಾಗ ಸಿರಾಜ್ ಅವರ ಬೌಲಿಂಗ್ ಫಿಗರ್ ಇಷ್ಟೊಂದು ಆಕರ್ಷಕವಾಗಿತ್ತು: 3-2-2-3. ಅಂತಿಮವಾಗಿ ಅವರು 8 ರನ್ನಿತ್ತು 3 ವಿಕೆಟ್ ಉರುಳಿಸಿದ ಸಾಧನೆಗೈದರು.
ಸಿರಾಜ್ ದಾಳಿಯ ನಡುವೆ ನವದೀಪ್ ಸೈನಿ ಕೂಡ ಅಪಾಯಕಾರಿಯಾಗಿ ಗೋಚರಿಸಿದರು. ಪಂದ್ಯದ ಮೂರನೇ ಓವರಿನಲ್ಲಿ ಆರಂಭಕಾರ ಶುಭಮನ್ ಗಿಲ್ (1) ವಿಕೆಟ್ ಉಡಾಯಿಸಿದರು. ಮೂರಕ್ಕೆ 3 ವಿಕೆಟ್ ಕಳೆದುಕೊಂಡ ಕೆಕೆಆರ್, 14 ರನ್ ಮಾಡಿದ ವೇಳೆ 4ನೇ ವಿಕೆಟ್ ಉದುರಿಸಿಕೊಂಡಿತು.
ಐಪಿಎಲ್‌ನಲ್ಲಿ ತಂಡವೊಂದು 3 ರನ್ನಿಗೆ 3 ವಿಕೆಟ್ ಉದುರಿಸಿಕೊಂಡ 3ನೇ ನಿದರ್ಶನ ಇದಾಗಿದೆ. ಕೆಕೆಆರ್ ಇಂಥದೊಂದು ಸಂಕಟಕ್ಕೆ ಸಿಲುಕಿದ್ದು ಇದೇ ಮೊದಲು. ಪವರ್ ಪ್ಲೇ ಅವಧಿಯಲ್ಲಿ ಕೋಲ್ಕತಾ ಸ್ಕೋರ್ 4ಕ್ಕೆ 17 ರನ್. ಇದು ಪವರ್ ಪ್ಲೇಯಲ್ಲಿ ಕೆಕೆಆರ್ ತಂಡದ ಈ ವರೆಗಿನ ಕನಿಷ್ಠ ಗಳಿಕೆಯಾಗಿದೆ.
ಮಾರ್ಗನ್ ಪಡೆಯ ಸಂಕಟ ಇಲ್ಲಿಗೇ ಕೊನೆಗೊಳ್ಳಲಿಲ್ಲ. 9ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ (4) ಲೆಗ್‌ಸ್ಪಿನ್ನರ್ ಚಹಲ್ ಎಸೆತಕ್ಕೆ ಲೆಗ್ ಬಿಫೋರ್ ಆದರು. ಡಿಆರ್‌ಎಸ್ ರಿವ್ಯೂ ಪಡೆದ ಆರ್‌ಸಿಬಿಗೆ ದೊಡ್ಡ ಯಶಸ್ಸು ಲಭಿಸಿತ್ತು. ಅರ್ಧ ಹಾದಿ ಕ್ರಮಿಸುವಾಗ ಕೋಲ್ಕತಾ 36ಕ್ಕೆ 5 ವಿಕೆಟ್ ಉರುಳಿಸಿಕೊಂಡಿತ್ತು. ಇದು ಐಪಿಎಲ್‌ನ ಮೊದಲ 10 ಓವರ್‌ಗಳಲ್ಲಿ ತಂಡವೊಂದು ಗಳಿಸಿದ 3ನೇ ಕನಿಷ್ಠ ಗಳಿಕೆ. 2009ರಲ್ಲಿ ಡೆಕ್ಕನ್ ವಿರುದ್ಧ ಕೆಕೆಆರ್ ತಂಡವೇ 3ಕ್ಕೆ 31 ರನ್ ಗಳಿಸಿದ್ದು ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
50 ರನ್ನಿಗೆ 15 ಓವರ್!
ಕೆಕೆಆರ್ 50 ರನ್ ಪೂರ್ತಿಗೊಳಿಸಲು ಭರ್ತಿ 15 ಓವರ್ ತೆಗೆದುಕೊಂಡಿತು. ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು 50 ರನ್ ಗಳಿಸಲು ತೆಗೆದುಕೊಂಡ ಅತ್ಯಧಿಕ ಓವರ್ ಆಗಿದೆ. 2009ರ ಚೆನ್ನೈ ಎದುರಿನ ಡರ್ಬನ್ ಪಂದ್ಯದಲ್ಲಿ ಪಂಜಾಬ್ 13.1 ಓವರ್ ಆಡಿದ್ದು ಹಿಂದಿನ ದಾಖಲೆ. 30 ರನ್ ಮಾಡಿದ ನಾಯಕ ಮಾರ್ಗನ್ ಕೆಕೆಆರ್‌ನ ಗರಿಷ್ಠ ಸ್ಕೋರರ್. ಫರ್ಗ್ಯುಸನ್ ಔಟಾಗದೆ 19 ರನ್ ಗಳಿಸಿದರು.
ಮಾರ್ಗನ್ 300 ಟಿ20
ಈ ಮುಖಾಮುಖೀ ವೇಳೆ ಕೋಲ್ಕತಾ ಕಪ್ತಾನ ಇಯಾನ್ ಮಾರ್ಗನ್ ನೂತನ ಎತ್ತರ ತಲುಪಿದರು. ಇದು ಅವರ 300ನೇ ಟಿ20 ಪಂದ್ಯವಾಗಿತ್ತು. ಈ ಸಾಧನೆಗಾಗಿ ಕೆಕೆಆರ್ ತನ್ನ ನಾಯಕನನ್ನು ಅಭಿನಂದಿಸಿದೆ. ಮಾರ್ಗನ್ ಈ ಸಾಧನೆಗೈದ ಮೂರನೇ ಇಂಗ್ಲೆಂಡ್ ಕ್ರಿಕೆಟಿಗ. ಉಳಿದಿಬ್ಬರೆಂದರೆ ರವಿ ಬೊಪಾರ ಮತ್ತು ಲ್ಯೂಕ್ ರೈಟ್.
ಸಿರಾಜ್ ಸೇರ್ಪಡೆ
ಈ ಪಂದ್ಯಕ್ಕಾಗಿ ಆರ್‌ಸಿಬಿ ಒಂದು ಬದಲಾವಣೆ ಮಾಡಿಕೊಂಡಿತು. ಶಾಬಾಜ್ ಅಹ್ಮದ್ ಬದಲು ಮೊಹಮ್ಮದ್ ಸಿರಾಜ್ ಅವರನ್ನು ಆಡಿಸಿತು. ಕೆಕೆಆರ್ ತಂಡದಲ್ಲಿ ಎರಡು ಪರಿವರ್ತನೆ ಸಂಭವಿಸಿತು. ಶಿವಂ ಮಾವಿ ಮತ್ತು ಆ್ಯಂಡ್ರೆ ರಸೆಲ್ ಬದಲು ಪ್ರಸಿದ್ಧ್ ಕೃಷ್ಣ ಮತ್ತು ಟಾಮ್ ಬ್ಯಾಂಟನ್ ಆಡಲಿಳಿದರು.
ಸ್ಕೋರ್ ಪಟ್ಟಿ
ಕೋಲ್ಕತಾ ನೈಟ್ ರೈಡರ್
ಶುಭಮನ್ ಗಿಲ್ ಸಿ ಮಾರಿಸ್ ಬಿ ಸೈನಿ 1
ರಾಹುಲ್ ತ್ರಿಪಾಠಿ ಸಿ ಡಿ ವಿಲಿಯರ್ ಬಿ ಸಿರಾಜ್ 1
ನಿತೀಶ್ ರಾಣಾ ಬಿ ಸಿರಾಜ್ 0
ಟಾಮ್ ಬ್ಯಾಂಟನ್ ಸಿ ಡಿ ವಿಲಿಯರ್ ಬಿ ಸಿರಾಜ್ 10
ದಿನೇಶ್ ಕಾರ್ತಿಕ್ ಎಲ್‌ಬಿಡಬ್ಲ್ಯು ಬಿ ಚಹಲ್ 4
ಮಾರ್ಗನ್ ಸಿ ಗುರುಕೀರತ್ ಬಿ ಸುಂದರ್ 30
ಪ್ಯಾಟ್ ಕಮಿನ್ಸ್ ಸಿ ಪಡಿಕ್ಕಲ್ ಬಿ ಚಹಲ್ 4
ಕುದೀಪ್ ಯಾದವ್ ರನೌಟ್ 12
ಲಾಕಿ ಫರ್ಗ್ಯುಸನ್ ಔಟಾಗದೆ 19
ಇತರ 3
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 84
ವಿಕೆಟ್ ಪತನ: 1-3, 2-3, 3-3, 4-14, 5-32, 6-40, 7-57, 8-84.
ಬೌಲಿಂಗ್:
ಕ್ರಿಸ್ ಮಾರಿಸ್ 4-1-16-0
ಮೊಹಮ್ಮದ್ ಸಿರಾಜ್ 4 -2-8-3
ನವದೀಪ್ ಸೈನಿ 3-0-23-1
ಇಸುರು ಉದಾನ 1-0-6-0
ಯಜುವೇಂದ್ರ ಚಹಲ್ 4-0-15-2
ವಾಷಿಂಗ್ಟನ್ ಸುಂದರ್ 4-1-14-1
ರಾಯಲ್ ಚಾಲೆಂಜರ್ ಬೆಂಗಳೂರು
ದೇವದತ್ ಪಡಿಕ್ಕಲ್ ರನೌಟ್ 25
ಆರನ್ ಫಿಂಚ್ ಸಿ ಕಾರ್ತಿಕ್ ಬಿ ಫರ್ಗ್ಯುಸನ್ 16
ಗುರುಕೀರತ್ ಸಿಂಗ್ ಔಟಾಗದೆ 21
ವಿರಾಟ್ ಕೊಹ್ಲಿ ಔಟಾಗದೆ 18
ಇತರ 5
ಒಟ್ಟು (13.3 ಓವರ್‌ಗಳಲ್ಲಿ 2 ವಿಕೆಟಿಗೆ) 85
ವಿಕೆಟ್ ಪತನ:1-46-, 2-46.
ಬೌಲಿಂಗ್: ಪ್ಯಾಟ್ ಕಮಿನ್ಸ್ 3-0-18-0
ಪ್ರಸಿದ್ಧ್ ಕೃಷ್ಣ 2.3-0-20-0
ವರುಣ್ ಚಕ್ರವರ್ತಿ 4-0-28-0
ಲಾಕಿ ಫರ್ಗ್ಯುಸನ್ 4-0-17-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.