BSY, ಸಿದ್ದು ನನಗಿಂತಲೂ ಜೂನಿಯರ್ಸ್, ಅವರು ಸಿಎಂ ಆದರು; ನಮ್ಮ ಹಣೆಬರಹ ಇಷ್ಟೇ !: ಹೊರಟ್ಟಿ
Team Udayavani, Oct 22, 2020, 11:50 AM IST
ಬಳ್ಳಾರಿ: ಜೆಡಿಎಸ್ ಅಭ್ಯರ್ಥಿ ಶಿಕ್ಷಕರಾಗಿದ್ದಾರೆ. ಪ್ರಜ್ಞಾವಂತರೆಲ್ಲರೂ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆ ಅವ್ಯವಸ್ಥೆಗೊಂಡಿದೆ. ಸರಕಾರದಲ್ಲಿ ಬೇಡವಾದವರಿಗೆ ಶಿಕ್ಷಣ ಇಲಾಖೆ ಸಚಿವ ಮಾಡ್ತಾರೆ. ಈ ಇಲಾಖೆ ಎಂದರೆ ಎಲ್ಲರಿಗೂ ಬೇಡವಾಗಿದ್ದಾಗಿದೆ. ಆದರೆ, ರಾಜ್ಯಕ್ಕೆ ಏನಾದರೂ ಕೊಡುಗೆ ಕೊಡಲು ಈ ಇಲಾಖೆಯಿಂದಲೇ ಸಾಧ್ಯ. ಹಾಗಾಗಿ ಈ ಕ್ಷೇತ್ರಕ್ಕೆ ಜ್ಞಾನ ಇರುವವರೇ ಬರಬೇಕು ಎಂದರು.
ವಠಾರ ಶಾಲೆ ಶಿಕ್ಷಣ ಶೇ.5 ಮಂದಿಗೆ ಸಿಕ್ಕಿಲ್ಲ. ಅಷ್ಟೇ ಪ್ರಮಾಣ ಕೋವಿಡ್ ದಕ್ಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮೂಲೆಗಟ್ಟಲಾಗಿದೆ. ನೇಮಕಾತಿಯ ಮಾಡಿಲ್ಲ. ನಮ್ಮ ಕಾಲದಲ್ಲಿ ಒಂದೂ ಶಾಲೆಯನ್ನು ಮುಚ್ಚಿರಲಿಲ್ಲ. ಈಗ ನೂರಾರು ಶಾಲೆಗಳನ್ನು ಮುಚ್ಚಲಾಗಿದೆ. ಶಾಸನಸಭೆಗಳೂ ಸಹಿತ, ವಿಧಾನಪರಿಷತ್ ಘನತೆ ಕಳೆಯುತ್ತಿದ್ದಾರೆ. ಸುಧಾರಣೆಗೆ ಪ್ರಯತ್ನಸುತ್ತಿದ್ದೆವೆ. ಸರಕಾರಗಳು ಮಾತು ಕೇಳುವುದಿಲ್ಲ ಎಂದು ಕಿಡಿಕಾರಿದರು.
ಶಿಕ್ಷಕರ ವರ್ಗಾವಣೆ ಅವಶ್ಯಕತೆ ಇದೆ. ಈ ಸಮಯದಲ್ಲಿ ಇಂತಹ ನಿರ್ಧಾರ ಮಾಡುವುದು ಸರಿಯಲ್ಲ. ನೀತಿ ಸಂಹಿತೆ ಉಲ್ಲಂಘನೆಯಾಗಬಹುದು. ರಾಜಕೀಯದಲ್ಲಿ ಪ್ರಾಮಾಣಿಕರು, ಸಚ್ಚಾರಿತ್ರರು ಇರಬೇಕು ಎಂದು ಜನ ಮಾತಾಡುತ್ತಿದ್ದಾರೆ. ಶಿಕ್ಷಣ ಮಂತ್ರಿಯಾಗಿ ಇನ್ನೊಂದಿಷ್ಟು ಕೆಲಸಗಳನ್ನು ಮುಂದುವರೆಸಬಹುದಿತ್ತು. ರಾಜಕೀಯದಲ್ಲಿ ನೈತಿಕತೆ ಪಾಲಿಸುತ್ತಿದ್ದೆವೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.
ದೇವೇಗೌಡರ ಮೇಲೆ ವಿಶ್ವಾಸವಿದೆ. ತಪ್ಪಿದ್ದರೆ ತಪ್ಪೆನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸುಧಾರಣೆ ಕಂಡಿದೆ. ಆದರೆ, ರಾಜ್ಯದಲ್ಲಿ ಸರಕಾರ ಮಾಡಲು ಸಾಧ್ಯ ಎಂದು ಅವರಿಗೆ ಹೇಳಿದ್ದೇನೆ. ಹಿಂದಿನ ಜನತಾ ಪರಿವಾರದಂತೆ ಆಗಬೇಕಿದೆ. ಅಂದಿನ ರಾಜಕೀಯ ಇಲ್ಲ. ಇಂದಿನ ಕಾಲದಲ್ಲಿ ದುಡ್ಡು ಕೊಟ್ಟು ಜನರನ್ನು ಸೇರಿಸುತ್ತಾರೆ. ಯಡಿಯೂರಪ್ಪ, ಸಿದ್ದರಾಮಯ್ಯ ನನಗಿಂತಲೂ ಜೂನಿಯರ್ಸ್, ಅವರ ಅದೃಷ್ಟಕ್ಕೆ ಮುಖ್ಯಮಂತ್ರಿ ಆದರು. ನಮ್ಮ ಹಣೆಬರಹ ಇಷ್ಟಿದೆ.
ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಈಶಾನ್ಯ ಭಾಗದ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ತಿಮ್ಮಯ್ಯ ಪುರ್ಲೆ ಅವರು ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದಾಗ ಶಿಕ್ಷಕರ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸಲಾಗಿದೆ. ಬಿಜೆಪಿ ಹೇಳಿಕೊಳ್ಳುವ ಕೆಲಸಗಳನ್ನು ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರಿಗೆ ಮಾಡಿಲ್ಲ ಎಂದರು.
ಲಂಚವಿಲ್ಲದೆ ಪಾರದರ್ಶಕವಗಿ ನೇಮಕಾತಿ ನಡೆಸಿದ ಸಾಧನೆ ಮಾಡಿದ್ದೇವೆ. ಶಿಕ್ಷಕರ ಮೀಸಲಾತಿಯಲ್ಲಿ ಮಹಿಳೆಯರಿಗೆ ಶೆ.50ರಷ್ಟು ಮೀಸಲು ನೀಡಲಾಗಿದೆ. ಮೊರಾರ್ಜಿ ದೇಸಾಯಿ ಶಾಲೆ ಆರಂಭ ಮಾಡಿದ್ದೇವೆ. ವರ್ಗಾವಣೆಗೆ ಕೌನ್ಸೆಲಿಂಗ್ ಮೂಲಕ ಮಾಡಲು ಆದೇಶ ತರಲಾಗಿತ್ತು. ಸರಕಾರಿ ಶಾಲಾ ಕಾಲೇಜುಗಳನ್ನು ಆರಂಭಿಸಲಾಯಿತು. ಖಾಸಗಿ ಶಾಲೆಗಳ ಅನುದಾನ ವಿಸ್ತರಿಸಲಾಯಿತು. ಇದು 36 ಸಾವಿರ ಜನರಿಗೆ ನೆರವಾಯಿತು.
ಮುಖ್ಯಮಂತ್ರಿಗಳು ಈವರೆಗೆ ಅನುದಾನಿತ ಶಾಲೆಗಳ ಶಿಕ್ಷಕರಿಗೆ ವೇತನ ನೀಡಲಿಲ್ಲ. ಇದರಿಂದ ಶಿಕ್ಷಕರು ಆತ್ಮಹತ್ಯೆಯೂ ಮಾಡಿಕೊಂಡರು. ಕೋವಿಡ್ ಗೂ ಬಲಿಯಾದರು. ಶಿಕ್ಷಕರ ಕ್ಷೇತ್ರಕ್ಕೂ ರಾಜಕಾರಣಿಗಳು ಯಾಕೆ ಬರಬೇಕು ?. ಇದನ್ನಾದರೂ ಶಿಕ್ಷಕರಿಗೆ ಬಿಟ್ಟು ಬಿಡಿ. ಶಿಕ್ಷಕರಾಗಿರುವ ನಮ್ಮ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
“ಕೈ’ ಬಿಡದ ಸಂಡೂರು ಮತದಾರ; ಬಿಜೆಪಿಗೆ ಜಯದ ಕಾತರ: 13 ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ
MUST WATCH
ಹೊಸ ಸೇರ್ಪಡೆ
45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.