ಪಾಳು ಬಿದ್ದ ಜಿಪಂ ವಸತಿ ಗೃಹ
Team Udayavani, Oct 22, 2020, 12:39 PM IST
ಶಿರಸಿ: ಇಲ್ಲಿನ ಜಿಪಂ ಕಾರ್ಯ ನಿರ್ವಾಹಕ ಅಭಿಯಂತರರ ವಸತಿ ಗೃಹವಾಗಿ ನಗರದ ಪ್ರಮುಖ ಸ್ಥಳದಲ್ಲಿದ್ದು, ಬಳಕೆ ಮಾಡದೇ ಪಾಳು ಕೆಡವಿದ ಘಟನೆ ನಗರದ ರಾಘವೇಂದ್ರ ವೃತ್ತದಲ್ಲಿ ನಡೆದಿದೆ.
ಇಲ್ಲಿನ ಲೋಕೋಪಯೋಗಿ ಇಲಾಖೆ ಪಾರ್ಶ್ವದಲ್ಲೇ ವಿಶಾಲ ಸ್ಥಳದಲ್ಲಿರುವ ಜಿಪಂ ಇಂಜನೀಯರಿಂಗ್ ವಿಭಾಗದ ಇಂಜನೀಯರ್ ವಾಸ್ತವ್ಯಕ್ಕೆ ಬಿಟ್ಟು ಕೊಡಲಾಗಿದ್ದ ಸುಸಜ್ಜಿತ ವಸತಿ ಕಟ್ಟಡ ಕಳೆದ 3 ವರ್ಷಗಳಿಂದ ಬಳಸದೇ ಇಲಾಖೆ ಎಡವಟ್ಟು ಮಾಡಿದೆ. ಲೋಕೋಪಯೋಗಿ ಇಲಾಖೆಗೆ ಮಾಸಿಕ 7-8 ಸಾವಿರ ರೂ. ಸರಕಾರಿ ಬಾಡಿಗೆ ಕೂಡ ಕಟ್ಟದೇ, ಬಳಸದೇ, ವಾಪಸ್ಸೂ ಮಾಡದೇ ಜಿಪಂವಿಭಾಗವು ಸರಕಾರಿ ಕಟ್ಟಡವನ್ನು ನಿರ್ಲಕ್ಷ್ಯ ಮಾಡಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಮೊದಲು ಗುರುಪ್ರಸಾದ, ಶಿವಗಿರಿ ಹಿರೇಮಠ, ಅಂಗಡಿ ಸೇರಿದಂತೆ ಅನೇಕಹಿರಿಯ ಅಧಿಕಾರಿಗಳು ವಾಸ್ತವ್ಯ ಮಾಡಿದ್ದ ಈ ವಸತಿ ಗೃಹ ಕಳೆದ ಮೂರು ವರ್ಷಗಳಿಂದ ಬಳಕೆಯಾಗುತ್ತಿಲ್ಲ. ಈಚೆಗೆ ಸುರಿದ ಮಳೆಗೆ ಒಂದು ಪಾರ್ಶ್ವದ ಗೋಡೆ ಕೂಡ ಕುಸಿದುಹೋಗಿದೆ. ವಾಹನ ಪಾರ್ಕಿಂಗ್ ಸ್ಥಳ, ಮುಂಭಾಗದಲ್ಲಿ ಕಳೆ ಗಿಡಗಳೂ ಬೆಳೆದಿದೆ!
ಮೈಸೂರು ಮೂಲದ ರಮೇಶ, ಈಗಅಧಿಕಾರ ವಹಿಸಿಕೊಂಡ ವಿ.ವಿ. ಜನ್ನು ಅವರು ಕೂಡ ಇಲ್ಲಿ ವಾಸ್ತವ್ಯ ಮಾಡುತ್ತಿಲ್ಲ. ಲೋಕೋಪಯೋಗಿ ಇಲಾಖೆಗೆ ಕೂಡ ವಾಪಸ್ ಕಟ್ಟಡ ಹಸ್ತಾಂತರಿಸಿಲ್ಲ. ನಿರ್ವಹಣೆ ಇಲ್ಲದೇ ರಸ್ತೆ ಪಾರ್ಶ್ವಕ್ಕೆ ಗೋಡೆ ಬಿದ್ದರೆ ಸಾರ್ವಜನಿಕರಿಗೂ, ಪಾದಚಾರಿಗಳಿಗೂ ಕಷ್ಟವಾಗುವ ಸಾಧ್ಯತೆ ಇದೆ. ಈ ಅಪಾಯ ಆದರೆ ಯಾರು ಹೊಣೆ ಎಂಬ ಪ್ರಶ್ನೆ ಕೂಡ ಇದೆ. ಎಷ್ಟೋ ಅಧಿಕಾರಿಗಳಿಗೆ ವಸತಿ ನಿಲಯಗಳು ಇರುವುದಿಲ್ಲ. ಅದಕ್ಕಾಗಿ ಸರಕಾರ ಬಾಡಿಗೆ ಕೂಡ ತೆತ್ತ ಉದಾಹರಣೆ ಕೂಡ ಇದೆ. ಆದರೆ, ಸ್ಪೀಕರ್ ಕಚೇರಿಯಿಂದ ಕೇವಲ ಅರ್ಧ ಫರ್ಲಾಂಗ್ ದೂರವೂ ಇಲ್ಲದಈ ಕಟ್ಟಡ ಅನಾಥ ಆಗಿರುವುದು ಅನೇಕರ ವ್ಯಂಗ್ಯೋಕ್ತಿಗೂ ಕಾರಣವಾಗಿದೆ.
ಸರಕಾರದ ಕಟ್ಟಡ ಸದ್ಭಳಕೆ ಆಗಬೇಕು, ನಿರ್ವಹಣೆಯಲ್ಲಿರಬೇಕು, ಜಿಪಂ ಕಾರ್ಯನಿರ್ವಹಣಾ ಅಭಿಯಂತರರ ವಸತಿ ನಿಲಯ ಉಳಿಸಿಕೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.