ಅಪಾಯದಲ್ಲಿದೆ ದೇವಣಗಾಂವ ಸೇತುವೆ!

ಗೇಟ್‌ಗಳ ಸಮಸ್ಯೆಯಿಂದ ಹೆಚ್ಚಾಯ್ತು ನೆರೆ ಹಾವಳಿ?

Team Udayavani, Oct 22, 2020, 4:05 PM IST

gb-tdy-2

ಅಫಜಲಪುರ: ತಾಲೂಕಿನಿಂದ ಸಿಂದಗಿ ತಾಲೂಕು, ವಿಜಯಪುರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸೊನ್ನ ದೇವಣಗಾಂವ ಗ್ರಾಮಗಳ ಮಧ್ಯ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರೀಜ್‌ ಬಿರುಕು ಬಿಟ್ಟು ಅಪಾಯದ ಹಂತದಲ್ಲಿದೆ.

ಪ್ರತಿ ವರ್ಷ ಪ್ರವಾಹ ಬಂದಾಗ ಬ್ರೀಜ್‌ ಹಾನಿಗೀಡಾಗುತ್ತಿದೆ. ದೇವಣಗಾಂವ ಬ್ರೀಜ್‌ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಅನೇಕ ಕಡೆ ಬ್ರೀಜ್‌ ಗೋಡೆಯಲ್ಲಿ ಗಿಡಗಳು ಬೆಳೆದಿವೆ. ಗಿಡಗಳ ಬೇರು ದೊಡ್ಡದಾದಂತೆ ಬಿರುಕು ಹೆಚ್ಚಾಗುತ್ತಿದೆ. ಹೀಗಾಗಿ ಬ್ರೀಜ್‌ ದುರಸ್ತಿಗೊಳಿಸುವ ತುರ್ತು ಅಗತ್ಯವಿದೆ. ಇಲ್ಲದಿದ್ದರೆ ಭಾರಿ ಪ್ರಮಾಣದ ಬೆಲೆ ತೆರಬೇಕಾಗುತ್ತದೆ. ಗೇಟ್‌ಗಳ ಸಮಸ್ಯೆಯಿಂದ ಹೆಚ್ಚಾಯ್ತು

ನೆರೆ ಹಾವಳಿ: ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಅಲ್ಲಿನ ಬ್ಯಾರೇಜ್‌ಗಳು ಭರ್ತಿಯಾಗಿ ಹೆಚ್ಚಾದ ನೀರನ್ನು ಭೀಮಾನದಿಗೆ ಹರಿಬಿಡಲಾಗಿತ್ತು. ಭೀಮಾ ನದಿಗೆ ಹರಿದು ಬಂದ ನೀರು ಅಫಜಲಪುರತಾಲೂಕಿನಾದ್ಯಂತ ಮಹಾ ಪ್ರವಾಹವನ್ನೆ ಸೃಷ್ಟಿಸಿದೆ. ಆದರೆ ಈ “ಮಹಾ’ ಪ್ರವಾಹಕ್ಕೆಕಾರಣ ನೀರು ಬಿಟ್ಟಿದ್ದಲ್ಲ. ಬದಲಾಗಿ ಸೊನ್ನ ಬ್ಯಾರೇಜ್‌ನ 6 ಗೇಟ್‌ಗಳು ತುಕ್ಕು ಹಿಡಿದಿದ್ದು, ಪ್ರವಾಹದ ನೀರು ಬಂದಾಗ ಗೇಟ್‌ಗಳು ಮೇಲೆತ್ತಲಾಗದೆ ನೀರು ಸರಾಗವಾಗಿ ಹರಿದು ಹೋಗದೆ ಹಿನ್ನೀರಾಗಿಸರಿದು ನಿಂತು ಗ್ರಾಮಗಳಿಗೆ ನುಗ್ಗಿದೆ.

ಅಲ್ಲದೆ ಸೊನ್ನ ಬ್ಯಾರೇಜ್‌ ಕೆಳಗಿನ ಘತ್ತರಗಿ, ದೇವಲ ಗಾಣಗಾಪುರ ಮತ್ತು ಚಿನಮಳ್ಳಿ ಗ್ರಾಮಗಳಲ್ಲಿರುವ ಬ್ರೀಜ್‌ ಕಂ ಬ್ಯಾರೇಜ್‌ ಗಳ ಗೇಟ್‌ಗಳನ್ನು ಸಹ ಪ್ರವಾಹದ ಸಂದರ್ಭದಲ್ಲಿ ಎತ್ತಿಲ್ಲ. ಹೀಗಾಗಿ ಹಿನ್ನೀರು ಹೊಲ ಗದ್ದೆಗಳಲ್ಲಿ ನುಗ್ಗಿ ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ. ಗ್ರಾಮಗಳಿಗೆ ನೀರು ನುಗ್ಗಿ ಆಸ್ತಿ-ಪಾಸ್ತಿ ಹಾನಿಯಾಗಿವೆ. ಜನರು ಮನೆ ಬಿಟ್ಟು ಸಂತ್ರಸ್ತರಾಗುವಂತಾಗಿದೆ.

ತುಕ್ಕು ಹಿಡಿದು ವರ್ಷಗಳಾದರೂ ದುರಸ್ತಿ ಇಲ್ಲ: ತಾಲೂಕಿನ ದೊಡ್ಡ ನೀರಾವರಿ ಯೋಜನೆಯಾಗಿರುವ ಸೊನ್ನ ಬ್ಯಾರೇಜ್‌ ನ 29 ಗೇಟ್‌ಗಳ ಪೈಕಿ 6 ಗೇಟ್‌ ಗಳು ತುಕ್ಕು ಹಿಡಿದಿವೆ. ಕಳೆದ ವರ್ಷ ಪ್ರವಾಹ ಬಂದಾಗಲೂ ಈ ಗೇಟ್‌ಗಳು ಮೇಲೆತ್ತಲಾಗದೆ ಸಮಸ್ಯೆಯಾಗಿತ್ತು. ಈ ವರ್ಷವಂತು ಸಮಸ್ಯೆ ತುಸು ಹೆಚ್ಚೆಆಗಿದೆ. ತುಕ್ಕು ಹಿಡಿದ ಗೇಟ್‌ಗಳು ಮೇಲೆತ್ತಲಾಗುತ್ತಿಲ್ಲ. ಇದರಿಂದಾಗಿ ಪ್ರವಾಹದ ನೀರು ಹೊರ ಬಿಡಲಾಗದೆ ನೀರು ಅಪಾರ ಪ್ರಮಾಣದಲ್ಲಿ ನಿಂತು ಹೊಲ ಗದ್ದೆ, ಊರು-ಕೆರಿಗಳಿಗೆ ನುಗ್ಗುವಂತಾಗುತ್ತಿದೆ. ಈಗಲಾದರೂ ತುಕ್ಕು ಹಿಡಿದ ಗೇಟ್‌ಗಳನ್ನುದುರಸ್ತಿ ಮಾಡದಿದ್ದರೆ ಮುಂದಿನ ವರ್ಷ ಮತ್ತಷ್ಟು ಹಾನಿಯಾಗುವುದು ಪಕ್ಕಾ.

ತಾಲೂಕಿನ ದೊಡ್ಡ ನೀರಾವರಿ ಯೋಜನೆಯಾದ ಸೊನ್ನ ಬ್ಯಾರೇಜ್‌ನ ಗೇಟ್‌ಗಳಿಗೆ ಸಮಸ್ಯೆಯಾಗದಂತೆ ದುರಸ್ತಿ ಮಾಡಬೇಕು. ಈಗಾಗಲೇ ನೆರೆಯಿಂದಾದ ಹಾನಿಯನ್ನು ಸರ್ಕಾರ ಭರಿಸಬೇಕು. ಮುಂದೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. -ರಾಜೇಂದ್ರ ಪಾಟೀಲ್‌, ಕಾಂಗ್ರೆಸ್‌ ಮುಖಂಡ

ಬ್ಯಾರೇಜ್‌ನ 6 ಗೇಟ್‌ಗಳುಎತ್ತಲಾಗುತ್ತಿಲ್ಲ. ಹೀಗಾಗಿಪ್ರವಾಹದ ನೀರು ಹೊರ ಬಿಡುವಾಗ ಸ್ವಲ್ಪ ಸಮಸ್ಯೆಯಾಗಿದೆ. ಪ್ರವಾಹ ಇಳಿದ ಮೇಲೆ ಮೊದಲು ಗೇಟ್‌ಗಳನ್ನು ದುರಸ್ತಿ ಮಾಡಲಾಗುತ್ತದೆ. ಮುಂದಿನ ಸಲ ಈ ಸಮಸ್ಯೆ ಕಾಡುವುದಿಲ್ಲ. -ಅಶೋಕ ಕಲಾಲ್‌, ಕೆಎನ್‌ಎನ್‌ಎಲ್‌ ಎಇಇ

 

-ಮಲ್ಲಿಕಾರ್ಜುನ ಹಿರೇಮಠ

ಟಾಪ್ ನ್ಯೂಸ್

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.