ಶಿಥಿಲಾವಸ್ಥೆಯಲ್ಲಿ 12 ನಾಡ ಕಚೇರಿಗಳು


Team Udayavani, Oct 22, 2020, 4:21 PM IST

ಶಿಥಿಲಾವಸ್ಥೆಯಲ್ಲಿ 12 ನಾಡ ಕಚೇರಿಗಳು

ಸಿಂಧನೂರು: ತಾಲೂಕಿನ ವಿವಿಧೆಡೆಗಳಲ್ಲಿರುವ 12 ನಾಡ ಕಚೇರಿಗಳು ಬಾಡಿಗೆಯ ಕಟ್ಟಡದಲ್ಲೆ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಈ ಹಳೆಯ ಕಟ್ಟಡಗಳು ಶಿಥಿಲಾವಸ್ಥೆಗೊಂಡಿರುವುದರಿಂದ ನಾಡ ಕಚೇರಿಯ ದಾಖಲಾತಿಗಳನ್ನು ಹೇಗೆ ಸಂರಕ್ಷಣೆಯಲ್ಲಿಡಬೇಕೆಂಬುದೇ ತಲೆನೋವಾಗಿ ಪರಿಣಮಿಸಿದೆ.

ಶಾಸಕ ವೆಂಕಟರಾವ್‌ ನಾಡಗೌಡ ಅವರ ಸ್ವಗ್ರಾಮವಾದ ಜವಳಗೇರಾ, ಸಿಂಧನೂರು, ಜಾಲಿಹಾಳ, ಕುನ್ನಟಗಿ, ಬಾದರ್ಲಿ, ಗೊರೇಬಾಳ, ಸಾಲಗುಂದಾ, ವಲ್ಕಂದಿನ್ನಿ, ಹೆಡಗಿನಾಳ, ತುರ್ವಿಹಾಳ, ಗುಂಜಳ್ಳಿ, ಹುಡಾ ಈ ಕಡೆಗಳೆಗಳಲ್ಲಿ ನಾಡ ಕಚೇರಿಗಳಿದ್ದು. ಒಂದೊಂದು ನಾಡ ಕಚೇರಿಗೆ10 ರಿಂದ 4 ಹಳ್ಳಿಗಳು ವ್ಯಾಪ್ತಿಗೆ ಒಳಪಡುತ್ತಿದ್ದು, ಇರುವ ಯಾವ ನಾಡ ಕಚೇರಿಗಳಲ್ಲಿ ಮೂಲ ಸಮಸ್ಯೆಗಳ ತಾಂಡವವಾಡುತ್ತಿವೆ. ಜವಳಗೇರಾ ಹಾಗೂ ಜಾಲಿಹಾಳಗಳಲ್ಲಿ ಹೊಸ ಕಟ್ಟಡಗಳು ಪ್ರಾರಂಭವಾಗಿವೆ. ಇನ್ನೂ ಕಾಮಗಾರಿಗಳು ಮುಗಿಯದೆ ಇರುವುದರಿಂದ ಇನ್ನುಳಿದ ನಾಡ ಕಚೇರಿಗಳನ್ನು ಯಾವ ವರ್ಷದಲ್ಲಿ ನಿರ್ಮಾಣ ಮಾಡುತ್ತಾರೆ ಎಂಬುದು ಅನೇಕ ಗ್ರಾಮಸ್ಥರಿಂದ ಮಾತುಗಳು ಕೇಳಿ ಬರುತ್ತಿವೆ.

ದಾಖಲಾತಿಗಳದ್ದೆ ಚಿಂತೆ: ಶಿಥಿಲಾವಸ್ಥೆಯಲ್ಲಿರುವ ನಾಡ ಕಾರ್ಯಾಲಯಗಳಲ್ಲಿ ದಾಖಲಾತಿಗಳು ನೀರಿನಲ್ಲಿ ತೋಯುತ್ತಿದ್ದು, ಈ ದಾಖಲೆಗಳನ್ನು ಹೇಗೆ ಸಂರಕ್ಷಣೆ ಮಾಡಬೇಕೆನ್ನುವುದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ದೊಡ್ಡ ಚಿಂತೆಯಾಗಿದೆ. ಹೆಚ್ಚಿನ ಜನಸಂದಣಿ ಹೊಂದಿದ ಕ್ಷೇತ್ರದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ವ್ಯವಹಾರಿಕ ದಾಖಲಾತಿಗಳನ್ನು ಪಡೆಯಲು ನಾಡ ಕಚೇರಿ ಮುಖ್ಯವಾಗಿದ್ದು, ಇಂತಹ ಶಿಥಿಲಾವಸ್ಥೆಯಲ್ಲಿನ ನಾಡ ಕಚೇರಿಗಳನ್ನು ಕೂಡಲೇ ಸಂಬಂಧಿಸಿದ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸರಿಪಡಿಸಬೇಕೆಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಸೆಯಾಗಿದೆ.

ತಾಲೂಕಿನಲ್ಲಿ ಒಟ್ಟು 12 ನಾಡ ಕಚೇರಿಗಳು ಬಾಡಿಗೆಯ ಕಟ್ಟಡದಲ್ಲಿವೆ. ಕೆಲವೊಂದು ಶಿಥಿಲಾವಸ್ಥೆಯಲ್ಲಿವೆ. ಅವುಗಳನ್ನು ಸರಿಪಡಿಸಲು ಸಂಬಂಧಿಸಿದ ಮೇಲಿನ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಯಾವುದೇ ದಾಖಲಾತಿ ಹಾಳಾಗದಂತೆ ನೋಡಿಕೊಳ್ಳಲು ಸಿಬ್ಬಂದಿಗೆ ಸೂಚಿಸಲಾಗುವುದು. -ಮಂಜುನಾಥ ಭೋಗಾವತಿ, ತಹಶೀಲ್ದಾರ್‌.

12 ನಾಡ ಕಚೇರಿಗಳ ಪೈಕಿ 2 ನಾಡ ಕಚೇರಿಗಳನ್ನು ಸ್ವಂತ ಕಟ್ಟಡ ಶೀಘ್ರದಲ್ಲೇ ಕಾಮಗಾರಿಗಳು ಮುಗಿಯುತ್ತವೆ. ಪ್ರತಿವರ್ಷ ಮೂರರಿಂದ ನಾಲ್ಕು ಸ್ವಂತ ಕಟ್ಟಡಗಳು ಹಾಗೂ ಅವುಗಳಿಗೆ ಮೂಲ ಸೌಲಭ್ಯ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಾಗಿದೆ. -ವೆಂಕಟರಾವ್‌ ನಾಡಗೌಡ, ಶಾಸಕರು.

 

-ಚಂದ್ರಶೇಖರ್‌ ಯರದಿಹಾಳ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.