ರಾಜಸ್ಥಾನ್ – ಹೈದರಾಬಾದ್ ಮುಖಾಮುಖಿ : ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ಕೆ
Team Udayavani, Oct 22, 2020, 7:00 PM IST
ದುಬೈ : ಐಪಿಎಲ್ ನ 40 ನೇ ಪಂದ್ಯದಲ್ಲಿ ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಆತ್ಮವಿಶ್ವಾದಲ್ಲಿ ರಾಜಸ್ಥಾನ್ :
ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸಂಘಟಿತ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿ ಸ್ಮಿತ್ ಪಡೆ ಸಹಜವಾಗಿಯೇ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. 10 ಪಂದ್ಯಗಳಿಂದ 8 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಆದರೆ ಇನ್ನುಳಿದ ನಾಲ್ಕೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕಿದೆ.
ಆರಂಭದ ಕೆಲವು ಪಂದ್ಯಗಳಲ್ಲಿ ಸ್ಫೋಟಕ ಆಟವಾಡಿದ ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಅನಂತರ ವಿಫಲರಾಗಿರುವುದು ಹಾಗೂ ರಾಬಿನ್ ಉತ್ತಪ್ಪ ಅವರ ಬ್ಯಾಟಿಂಗ್ ಬರಗಾಲ ತೀವ್ರಗೊಂಡಿರುವುದು ರಾಜಸ್ಥಾನ್ ಪಾಲಿನ ಚಿಂತೆಯ ಸಂಗತಿಯಾಗಿದೆ. ಉತ್ತಪ್ಪ ಬದಲು ಮನನ್ ವೋಹ್ರ ಅವಕಾಶ ಪಡೆದರೂ ಅಚ್ಚರಿ ಇಲ್ಲ. ರಾಜಸ್ಥಾನದ ಬೌಲಿಂಗ್ ವಿಭಾಗ ಯುವ ವೇಗಿ ಕಾರ್ತಿಕ್ ತ್ಯಾಗಿ, ಜೋಫ್ರ ಆರ್ಚರ್, ಬೆನ್ ಸ್ಟೋಕ್ಸ್, ಕನ್ನಡಿಗ ಶ್ರೇಯಸ್ ಗೋಪಾಲ್ ಅವರಿಂದ ಉತ್ತಮ ಲಯದಲ್ಲಿದೆ.
ಹೈದರಾಬಾದ್ ಮತ್ತೆ ಪ್ರಯೋಗ ಸಲ್ಲದು :
ಕಳೆದ ಪಂದ್ಯದಲ್ಲಿ ಹೈದರಾಬಾದ್ ನಾಯಕ ವಾರ್ನರ್ ಕೆಲವು ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿದ್ದರು. ಸ್ವತಃ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫಲರಾಗಿದ್ದರು. ವಾರ್ನರ್ ಮತ್ತೆ ಇಂಥ ಪ್ರಯೋಗ ನಡೆಸಿದರೆ ಅದರಿಂದ ತಂಡಕ್ಕೆ ಹಾನಿಯಾಗುವ ಸಂಭವವೇ ಹೆಚ್ಚು. ಪವರ್ ಪ್ಲೇಯಲ್ಲಿ ದಾಖಲಾಗುವ ಮೊತ್ತವೇ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಕಾರಣ ವಾರ್ನರ್-ಬೇರ್‌ಸ್ಟೊ ಆರಂಭಿಕರಾಗಿ ಕಣಕ್ಕಿಳಿಯುವುದೇ ಸೂಕ್ತವೆನಿಸುತ್ತದೆ. ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಹೊರತುಪಡಿಸಿ ಘಾತಕ ಸ್ಪೆಲ್ ನಡೆಸುವಂಥ ಬೌಲರ್ ಹೈದರಾಬಾದ್ ತಂಡದಲ್ಲಿ ಕಾಣುತ್ತಿಲ್ಲ. ಹೀಗಾಗಿ ಅತ್ಯುತ್ತಮ ಮಟ್ಟದ ಬ್ಯಾಟಿಂಗ್ ಪ್ರದರ್ಶನವಷ್ಟೇ ತಂಡದ ಕೈ ಹಿಡಿಯಬೇಕಿದೆ.
ಎರಡು ತಂಡಗಳಿಗೂ ಮುಂದಿನ ಎಲ್ಲಾ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಅನಿವಾರ್ಯವಾದ್ದರಿಂದ ಇಂದಿನ ಪಂದ್ಯ ಹೋರಾಟ ಪ್ರತಿ ಹೋರಾಟದೊಂದಿಗೆ ಸಾಗುವ ನಿರೀಕ್ಷೆಯಿದೆ.
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ಕೀಪರ್), ಪ್ರಿಯಮ್ ಗರ್ಗ್, ಮನೀಶ್ ಪಾಂಡೆ, ವಿಜಯ್ ಶಂಕರ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಶಹಬಾಜ್ ನದೀಮ್, ಸಂದೀಪ್ ಶರ್ಮಾ, ಟಿ ನಟರಾಜನ್
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್ (ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತೇವಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಅಂಕಿತ್ ರಾಜ್‌ಪೂತ್, ಕಾರ್ತಿಕ್ ತ್ಯಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.