ನೌಕಾದಳ ಮುಖ್ಯಸ್ಥ ಅಡ್ಮಿರಲ್ ಕರಮ್ ಬೀರ್ ಸಿಂಗ್ ಕಾರವಾರ ನೌಕಾನೆಲೆಗೆ ಭೇಟಿ
Team Udayavani, Oct 22, 2020, 6:54 PM IST
ಕಾರವಾರ : ನೌಕಾದಳ ಮುಖ್ಯಸ್ಥ ಆಡ್ಮಿರಲ್ ಕರಮ್ ಬೀರ್ ಸಿಂಗ್ ಕಾರವಾರ ನೌಕಾನೆಲೆಗೆ ಭೇಟಿ ನೀಡಿದರು. ಅವರನ್ನು ಕರ್ನಾಟಕದ ನೌಕಾದಳದ ಕಮಾಂಡರ್ ಹಾಗೂ ಇತರ ಅಧಿಕಾರಿಗಳು ನೇವಿ ಸಂಪ್ರದಾಯದಂತೆ ಸ್ವಾಗತಿಸಿದರು.
ಐಎನ್‌ಎಸ್ ಕದಂಬ ನೌಕಾನೆಲೆಯ ವಿಶೇಷಗಳು ಹಾಗೂ ಶಿಪ್ ಲಿಫ್ಟ್ ಯಾರ್ಡ್ ಗಳಿಗೆ ಭೇಟಿ ನೀಡಿದ ನೌಕಾದಳ ಮುಖ್ಯಸ್ಥ ಆಡ್ಮಿರಲ್ ಕರಮ್ ಬೀರ್ ಸಿಂಗ್ ನೆಲೆಯ ಮಾಹಿತಿ ತಿಳಿದರು. ಎರಡನೇ ಹಂತದ ಕಾಮಗಾರಿಗಳು ಹಾಗೂ ಭವಿಷ್ಯದಲ್ಲಿ ನೌಕಾದಳದ ಕಾರ್ಯ ಚಟುವಟಿಕೆಯನ್ನು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದರು. ಶಿಪ್ ಲಿಫ್ಟ್ ಯಾರ್ಡ್ ನ ಮಹತ್ವ ತಿಳಿದು, ಅದನ್ನು ವೀಕ್ಷಿಸಿದ ಆಡ್ಮಿರಲ್ ಕರಮ್ ಬೀರ್ ಸಿಂಗ್ , ಕೋವಿಡ್ ಸಮಯದಲ್ಲಿ ನೌಕಾದಳದ ಶಿಪ್‌ಗಳು ಹಾಗು ಸಬ್‌ಮರೀನ್‌ಗಳು ತಾಂತ್ರಿಕ ನೆರವು ಹಾಗೂ ರಿಪೇರಿಯಾದ ಬಗ್ಗೆ ತಿಳಿದು ಕೊಂಡರು.
ನೌಕಾನೆಲೆಯ ಅಗತ್ಯಗಳನ್ನು ಹಾಗೂ ಮುಂದೆ ಶತ್ರು ರಾಷ್ಟ್ರ ಗಳಿಂದ ರಕ್ಷಣೆ ಪಡೆಯಲು ನೆಲೆಯಲ್ಲಿ ಆಗಬೇಕಾದ ಕೆಲಸಗಳ ಮಾಹಿತಿ ಪಡೆದರು. ಅದರ ನೀಲ ನಕಾಶೆಯನ್ನು, ಭಾರತೀಯ ನೌಕಾನೆಲೆ ಬಲಪಡಿಸಲು ಇರುವ ಕಾರ್ಯತಂತ್ರಗಳನ್ನು ಸೂಕ್ಷ್ಮವಾಗಿ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದರು.
ನಂತರ ಐಎನ್‌ಎಸ್ ಪತಂಜಲಿ ಬಗ್ಗೆ ಮಾಹಿತಿ ಪಡೆದರು. ಉತ್ತರ ಕನ್ನಡದಲ್ಲಿ ಕೋವಿಡ್ ಪೀಡಿತ ಸಾರ್ವಜನಿಕರಿಗೆ ಮೊಟ್ಟ ಮೊದಲ ಬಾರಿಗೆ ದೇಶದ ರಕ್ಷಣಾ ಪಡೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಗ್ಗೆ, ಕೋವಿಡ್ ಪೀಡಿತರು ಗುಣಮುಖರಾದ ಬಗ್ಗೆ ಸಹ ಮಾಹಿತಿ ಪಡೆದು, ಆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ನಂತರ ನೇವಿ ಸಿಬ್ಬಂದಿ ಕೋವಿಡ್ ನಿಂದ ಜಾಗೃತವಾಗಿರಬೇಕು ಎಂದು ಎಚ್ಚರಿಸಿದರಲ್ಲದೇ, ದಸರಾ ಹಬ್ಬದ ಸಂಭ್ರಮವನ್ನು ಸವಿಯುವಂತೆ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.