ಹೈದರಾಬಾದ್ ಕಡಿವಾಣ; ಸಿಡಿಯದ ರಾಜಸ್ಥಾನ್; SRH ಗೆಲುವಿಗೆ 155ರ ಗುರಿ
Team Udayavani, Oct 22, 2020, 9:47 PM IST
ದುಬಾೖ: ಸನ್‌ರೈಸರ್ ಹೈದರಾಬಾದ್ ಎದುರಿನ ಗುರುವಾರದ ಮಹತ್ವದ ಪಂದ್ಯದಲ್ಲಿ ಸಾಮಾನ್ಯ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿದ ರಾಜಸ್ಥಾನ್ ರಾಯಲ್ಸ್ 6 ವಿಕೆಟಿಗೆ 154 ರನ್ ಒಟ್ಟುಗೂಡಿಸಿದೆ.
ರಾಬಿನ್ ಉತ್ತಪ್ಪ-ಬೆನ್ ಸ್ಟೋಕ್ಸ್ ಜೋಡಿಯಿಂದ ರಾಜಸ್ಥಾನ್ ಬಿರುಸಿನ ಆರಂಭವೇನೋ ಲಭಿಸಿತು. ಆದರೆ ಇವರಿಂದ ಇನ್ನಿಂಗ್ಸ್ ಬೆಳೆಸಲು ಸಾಧ್ಯವಾಗಲಿಲ್ಲ. 3.3 ಓವರ್‌ಗಳಿಂದ 30 ರನ್ ದಾಖಲಾದ ವೇಳೆ ಉತ್ತಪ್ಪ (19) ರನೌಟ್ ಆಗಿ ನಿರ್ಗಮಿಸಬೇಕಾಯಿತು. 13 ಎಸೆತ ಎದುರಿಸಿದ ಅವರು 2 ಬೌಂಡರಿ, ಒಂದು ಸಿಕ್ಸರ್ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಪವರ್ ಪ್ಲೇ ಅವಧಿಯಲ್ಲಿ ರಾಜಸ್ಥಾನ್ ಒಂದು ವಿಕೆಟಿಗೆ 47 ರನ್ ಮಾಡಿತ್ತು.
ಅನಂತರ ಕ್ರೀಸ್ ಇಳಿದ ಸಂಜು ಸ್ಯಾಮ್ಸನ್ ಕೂಡ ಬಿರುಸಿನ ಆಟಕ್ಕಿಳಿದರು. ಸ್ಟೋಕ್ಸ್‌ಗಿಂತ ಹೆಚ್ಚು ವೇಗದಲ್ಲಿ ಬ್ಯಾಟ್ ಬೀಸತೊಡಗಿದರು. ಅರ್ಧ ಹಾದಿ ಕ್ರಮಿಸುವ ವೇಳೆ ತಂಡದ ಸ್ಕೋರ್ ಒಂದಕ್ಕೆ 74 ರನ್ ಆಗಿತ್ತು. ಮುಂದಿನ 10 ಓವರ್ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.
ಸ್ಯಾಮ್ಸನ್ 26 ಎಸೆತಗಳಿಂದ 36 ರನ್ ಬಾರಿಸಿದರು (3 ಫೋರ್, 1 ಸಿಕ್ಸರ್). ಹೋಲ್ಡರ್ ಎಸೆತವನ್ನು ಮಿಡ್ ವಿಕೆಟ್ ಮೇಲಿಂದ ಸಿಕ್ಸರ್‌ಗೆ ಬಡಿದಟ್ಟಿದ ಖುಷಿ ಸ್ಯಾಮ್ಸನ್ ಅವರಲ್ಲಿ ಹೆಚ್ಚು ಸಮಯ ಉಳಿಯಲಿಲ್ಲ. ಮುಂದಿನ ಎಸೆತದಲ್ಲೇ ಅವರು ಬೌಲ್ಡ್ ಆಗಿ ನಿರ್ಗಮಿಸಿದರು. ಅನಂತರದ ಓವರಿನಲ್ಲಿ ಸ್ಟೋಕ್ಸ್ ಕೂಡ ಔಟಾದರು.
ಸ್ಟೋಕ್ಸ್-ಸ್ಯಾಮ್ಸನ್ ಜೋಡಿ 8.1 ಓವರ್‌ಗಳಿಂದ 56 ರನ್ ಒಟ್ಟುಗೂಡಿಸಿತು. ಸ್ಟೋಕ್ಸ್ ಮತ್ತೆ ನೈಜ ಆಟವಾಡಲು ವಿಫಲರಾದರು. 30 ರನ್ನಿಗೆ ಅವರು 32 ಎಸೆತ ಎದುರಿಸಿದರು. ಹೊಡೆದದ್ದು ಕೇವಲ 2 ಬೌಂಡರಿ. ರಶೀದ್ ಖಾನ್ ಎಸೆತವೊಂದು ಇಂಗ್ಲೆಂಡ್ ಸವ್ಯಸಾಚಿಯನ್ನು ವಂಚಿಸಿತು. ಅವರು ಬೌಲ್ಡ್ ಆಗಿ ವಾಪಸಾಗಬೇಕಾಯಿತು.
ವಿಜಯ್ ಶಂಕರ್, ರಶೀದ್ ಖಾನ್ ಅತ್ಯಂತ ಬಿಗಿ ಬೌಲಿಂಗ್ ನಡೆಸಿ ರಾಜಸ್ಥಾನ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು. 15ನೇ ಓವರಿನಲ್ಲಿ ತಂಡದ 100 ರನ್ ಪೂರ್ತಿಗೊಂಡಿತು. ಇಂಗ್ಲೆಂಡಿನ ಮತ್ತೂಬ್ಬ ಆಟಗಾರ ಜಾಸ್ ಬಟ್ಲರ್ ಕೂಡ ಯಶಸ್ಸು ಕಾಣಲಿಲ್ಲ. ಕೇವಲ 9 ರನ್ ಮಾಡಿ ವಾಪಸಾದರು. ಸ್ಮಿತ್ ಗಳಿಕೆ 15 ಎಸೆತಗಳಿಂದ 19 ರನ್. ಹೋಲ್ಡರ್ ತಮ್ಮ ನೂತನ ಸ್ಪೆಲ್‌ನ ಮೊದಲ ಎಸೆತದಲ್ಲೇ ರಾಜಸ್ಥಾನ್ ಕಪ್ತಾನನನ್ನು ವಾಪಸ್ ಕಳುಹಿಸಿದರು. ಮುಂದಿನ ಎಸೆತದಲ್ಲೇ ರಿಯಾನ್ ಪರಾಗ್ ವಿಕೆಟ್ ಹಾರಿಸಿದರು (12 ಎಸೆತ, 20 ರನ್).
ಜೋಫ್ರ ಆರ್ಚರ್ ಅಂತಿಮ ಎಸೆತವನ್ನು ಸಿಕ್ಸರ್‌ಗೆ ರವಾನಿಸಿ ತಂಡದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿದರು. ಆರ್ಚರ್ 7 ಎಸೆತಗಳಿಂದ ಅಜೇಯ 16 ರನ್ ಹೊಡೆದರು (1 ಬೌಂಡರಿ, 1 ಸಿಕ್ಸರ್). ತೆವಾತಿಯಾಗೆ ಎದುರಿಸಲು ಲಭಿಸಿದ್ದು 3 ಎಸೆತ ಮಾತ್ರ.
ಹೋಲ್ಡರ್ ಆಗಮನ
ಈ ಪಂದ್ಯಕ್ಕಾಗಿ ಹೈದರಾಬಾದ್ ಮಹತ್ವದ ಬದಲಾವಣೆ ಮಾಡಿಕೊಂಡಿತು. ಕೇನ್ ವಿಲಿಯಮ್ಸನ್ ಬದಲು ವೆಸ್ಟ್ ಇಂಡೀಸಿನ ಆಲ್‌ರೌಂಡರ್ ಜಾಸನ್ ಹೋಲ್ಡರ್ ಅವರನ್ನು ಆಡಿಸಿತು. ಗಾಯಾಳು ಮಿಚೆಲ್ ಮಾರ್ಷ್ ಜಾಗಕ್ಕೆ ಬಂದ ಹೋಲ್ಡರ್ ಈ ತನಕ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗೆಯೇ ಬಾಸಿಲ್ ಥಂಪಿ ಬದಲು ಶಾಬಾಜ್ ನದೀಂ ಅವರಿಗೆ ಅವಕಾಶ ನೀಡಿತು.
ರಾಜಸ್ಥಾನ್ ತನ್ನ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.