IPL 2020: ಪಾಂಡೆ-ಶಂಕರ್ ಅಬ್ಬರ; ಹೈದರಾಬಾದ್‌ಗೆ 8 ವಿಕೆಟ್ ಜಯ
Team Udayavani, Oct 22, 2020, 11:10 PM IST
ದುಬಾೖ: ಮಧ್ಯಮ ಕ್ರಮಾಂಕದ ಆಟಗಾರರಾದ ಮನೀಷ್ ಪಾಂಡೆ(ಅಜೇಯ 83) ಹಾಗೂ ವಿಜಯ್ ಶಂಕರ್ (ಅಜೇಯ 52) ಜೋಡಿಯ ಭರ್ಜರಿ ಅರ್ಧ ಶತಕಗಳ ನೆರವಿನಿಂದ ಗುರುವಾರದ ರಾಜಸ್ಥಾನ್ ರಾಯಲ್ಸ್ ಎದುರಿನ ಮಹತ್ವದ ಪಂದ್ಯದಲ್ಲಿ ಹೈದರಾಬಾದ್ 8 ವಿಕೆಟ್‌ಗಳ ಗೆಲುವಿನ ಸಂಭ್ರಮ ಆಚರಿಸಿತು.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ರಾಜಸ್ಥಾನ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 154 ರನ್ ಗಳಿಸಿ ಸವಾಲೊಡ್ಡಿತು. ಗುರಿ ಬೆನ್ನತ್ತಿದ ಹೈದರಾಬಾದ್ 18.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಹೈದರಾಬಾದ್‌ಗೆ ಆರಂಭಿಕ ಆಘಾತ
ಅಲ್ಪ ಮೊತ್ತದ ಗುರಿ ಬೆನ್ನತ್ತುವಲ್ಲಿ ಆರಂಭಿಕರಾದ ಬೇರ್‌ಸ್ಟೋ (4), ವಾರ್ನರ್ (10) ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ಬಳಿಕ ಆಡಳಿಲಿದ ಮನೀಷ್ ಪಾಂಡೆ ಮತ್ತು ಆಲ್‌ರೌಂಡರ್ ಅವರ ತಾಳ್ಮೆಯುತ ಬ್ಯಾಟಿಂಗ್‌ನಿಂದ ತಂಡ ಮತ್ತೆ ಚೇತರಿಸಿಕೊಂಡಿತು. ಈ ಜೋಡಿ ಮುರಿಯದ ವಿಕೆಟಿಗೆ 140ರನ್ ಒಟ್ಟುಗೂಡಿಸಿ ಅಜೇಯರಾಗಿ ಉಳಿದರು.
ರಾಬಿನ್ ಉತ್ತಪ್ಪ-ಬೆನ್ ಸ್ಟೋಕ್ಸ್ ಜೋಡಿಯಿಂದ ರಾಜಸ್ಥಾನ್ ಬಿರುಸಿನ ಆರಂಭವೇನೋ ಲಭಿಸಿತು. ಆದರೆ ಇವರಿಂದ ಇನ್ನಿಂಗ್ಸ್ ಬೆಳೆಸಲು ಸಾಧ್ಯವಾಗಲಿಲ್ಲ. 3.3 ಓವರ್‌ಗಳಿಂದ 30 ರನ್ ದಾಖಲಾದ ವೇಳೆ ಉತ್ತಪ್ಪ (19) ರನೌಟ್ ಆಗಿ ನಿರ್ಗಮಿಸಬೇಕಾಯಿತು. 13 ಎಸೆತ ಎದುರಿಸಿದ ಅವರು 2 ಬೌಂಡರಿ, ಒಂದು ಸಿಕ್ಸರ್ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಪವರ್ ಪ್ಲೇ ಅವಧಿಯಲ್ಲಿ ರಾಜಸ್ಥಾನ್ ಒಂದು ವಿಕೆಟಿಗೆ 47 ರನ್ ಮಾಡಿತ್ತು.
ಅನಂತರ ಕ್ರೀಸ್ ಇಳಿದ ಸಂಜು ಸ್ಯಾಮ್ಸನ್ ಕೂಡ ಬಿರುಸಿನ ಆಟಕ್ಕಿಳಿದರು. ಸ್ಟೋಕ್ಸ್‌ಗಿಂತ ಹೆಚ್ಚು ವೇಗದಲ್ಲಿ ಬ್ಯಾಟ್ ಬೀಸತೊಡಗಿದರು. ಅರ್ಧ ಹಾದಿ ಕ್ರಮಿಸುವ ವೇಳೆ ತಂಡದ ಸ್ಕೋರ್ ಒಂದಕ್ಕೆ 74 ರನ್ ಆಗಿತ್ತು. ಮುಂದಿನ 10 ಓವರ್ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.
ಸ್ಯಾಮ್ಸನ್ 26 ಎಸೆತಗಳಿಂದ 36 ರನ್ ಬಾರಿಸಿದರು (3 ಫೋರ್, 1 ಸಿಕ್ಸರ್). ಹೋಲ್ಡರ್ ಎಸೆತವನ್ನು ಮಿಡ್ ವಿಕೆಟ್ ಮೇಲಿಂದ ಸಿಕ್ಸರ್‌ಗೆ ಬಡಿದಟ್ಟಿದ ಖುಷಿ ಸ್ಯಾಮ್ಸನ್ ಅವರಲ್ಲಿ ಹೆಚ್ಚು ಸಮಯ ಉಳಿಯಲಿಲ್ಲ. ಮುಂದಿನ ಎಸೆತದಲ್ಲೇ ಅವರು ಬೌಲ್ಡ್ ಆಗಿ ನಿರ್ಗಮಿಸಿದರು. ಅನಂತರದ ಓವರಿನಲ್ಲಿ ಸ್ಟೋಕ್ಸ್ ಕೂಡ ಔಟಾದರು. ಸ್ಟೋಕ್ಸ್-ಸ್ಯಾಮ್ಸನ್ ಜೋಡಿ 8.1 ಓವರ್‌ಗಳಿಂದ 56 ರನ್ ಒಟ್ಟುಗೂಡಿಸಿತು. ಸ್ಟೋಕ್ಸ್ ಮತ್ತೆ ನೈಜ ಆಟವಾಡಲು ವಿಫಲರಾದರು. 30 ರನ್ನಿಗೆ ಅವರು 32 ಎಸೆತ ಎದುರಿಸಿದರು. ಹೊಡೆದದ್ದು ಕೇವಲ 2 ಬೌಂಡರಿ. ರಶೀದ್ ಖಾನ್ ಎಸೆತವೊಂದು ಇಂಗ್ಲೆಂಡ್ ಸವ್ಯಸಾಚಿಯನ್ನು ವಂಚಿಸಿತು.
ಸ್ಕೋರ್ ಪಟ್ಟಿ
ರಾಜಸ್ಥಾನ್ ರಾಯಲ್ಸ್
ರಾಬಿನ್ ಉತ್ತಪ್ಪ ರನೌಟ್ 19
ಬೆನ್ ಸ್ಟೋಕ್ಸ್ ಬಿ ರಶೀದ್ 30
ಸಂಜು ಸ್ಯಾಮ್ಸನ್ ಬಿ ಹೋಲ್ಡರ್ 36
ಜಾಸ್ ಬಟ್ಲರ್ ಸಿ ನದೀಮ್ ಬಿ ಶಂಕರ್ 9
ಸ್ಟೀವನ್ ಸ್ಮಿತ್ ಸಿ ಪಾಂಡೆ ಬಿ ಹೋಲ್ಡರ್ 19
ರಿಯಾನ್ ಪರಾಗ್ ಸಿ ವಾರ್ನರ್ ಬಿ ಹೋಲ್ಡರ್ 20
ರಾಹುಲ್ ತೆವಾತಿಯಾ ಔಟಾಗದೆ 2
ಜೋಫ್ರ ಆರ್ಚರ್ ಔಟಾಗದೆ 16
ಇತರ 3
ಒಟ್ಟು(20 ಓವರ್‌ಗಳಲ್ಲಿ 6 ವಿಕೆಟಿಗೆ) 154
ವಿಕೆಟ್ ಪತನ: 1-30, 2-86, 3-86, 4-110, 5-134, 6-135.
ಬೌಲಿಂಗ್
ಸಂದೀಪ್ ಶರ್ಮ 4-0-31-0
ಜಾಸನ್ ಹೋಲ್ಡರ್ 4-0-33-3
ವಿಜಯ್ ಶಂಕರ್ 3-0-15-1
ಟಿ. ನಟರಾಜನ್ 4-0-46-0
ರಶೀದ್ ಖಾನ್ 4-0-20-1
ಶಾಬಾಜ್ ನದೀಮ್ 1-0-9-0
ಸನ್‌ರೈಸರ್ ಹೈದರಾಬಾದ್
ಡೇವಿಡ್ ವಾರ್ನರ್ ಸಿ ಸ್ಟೋಕ್ಸ್ ಬಿ ಆರ್ಚರ್ 4
ಜಾನಿ ಬೇರ್‌ಸ್ಟೊ ಬಿ ಆರ್ಚರ್ 10
ಮನೀಷ್ ಪಾಂಡೆ ಔಟಾಗದೆ 83
ವಿಜಯ್ ಶಂಕರ್ ಔಟಾಗದೆ 52
ಇತರ 7
ಒಟ್ಟು (18.1 ಓವರ್‌ಗಳಲ್ಲಿ 2 ವಿಕೆಟಿಗೆ) 156
ವಿಕೆಟ್ ಪತನ: 1-4, 2-16.
ಬೌಲಿಂಗ್:
ಜೋಫ್ರ ಆರ್ಚರ್ 4-0-21-2
ಅಂಕಿತ್ ರಜಪೂತ್ 1-0-11-0
ಕಾರ್ತಿಕ್ ತ್ಯಾಗಿ 3.1-0-42-0
ಬೆನ್ ಸ್ಟೋಕ್ಸ್ 2-0-24-0
ಶ್ರೇಯಸ್ ಗೋಪಾಲ್ 4-0-32-0
ರಾಹುಲ್ ತೆವಾತಿಯಾ 4-0-25-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.