80ಕ್ಕೆ ಕಾಲಿಟ್ಟ ಕಾಲ್ಚೆಂಡಿನ ಸರದಾರ
Team Udayavani, Oct 23, 2020, 10:04 PM IST
ಸಾವೋ ಪೌಲೊ (ಬ್ರಝಿಲ್): ಫುಟ್‌ಬಾಲ್ ಲೆಜೆಂಡ್, ಬ್ರಝಿಲ್‌ನ ಪೀಲೆ ಶುಕ್ರವಾರ 80ನೇ ವರ್ಷಕ್ಕೆ ಕಾಲಿಟ್ಟರು. ಆದರೆ ಅನಾರೋಗ್ಯದಿಂದಾಗಿ ಇದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಅವರಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೂರು ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್ ತಂಡದ ಸರದಾರನೆನಿಸಿದ ಪೀಲೆ ಸಾರ್ವಜನಿಕ ಕ್ಷೇತ್ರದಿಂದ ದೂರವಾಗಿದ್ದು, ಪರಿವಾರದ ಸದಸ್ಯರೊಂದಿಗೆ ಸಾವೋ ಪೌಲೋದ ಹೊರವಲಯದ ನಿವಾಸವೊಂದರಲ್ಲಿ ಉಳಿದಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಸಹೋದರ ಜೈರ್ ನಿಧನದಿಂದ ಆಘಾತಕ್ಕೊಳಗಾದ ಪೀಲೆ, ಇದರಿಂದ ಇನ್ನೂ ಹೊರಬಂದಿಲ್ಲ ಎನ್ನಲಾಗಿದೆ.
ಫುಟ್‌ಬಾಲ್‌ನ “ಕಪ್ಪು ಹವಳ’ ಎಂದೇ ಗುರುತಿಸಲ್ಪಡುವ ಪೀಲೆ ಬ್ರಝಿಲ್ ಪರ ಸರ್ವಾಧಿಕ 77 ಗೋಲು ಬಾರಿಸಿದ ದಾಖಲೆ ಹೊಂದಿದ್ದಾರೆ. ಈ ದಾಖಲೆಯನ್ನೀಗ ನೇಯ್ಮರ್ ಸಮೀಪಿಸುತ್ತಿದ್ದಾರೆ (64 ಗೋಲು).
ಫಿಫಾ ಶತಮಾನದ ಫುಟ್ಬಾಲಿಗ
1995-98ರ ಅವಧಿಯಲ್ಲಿ ಬ್ರಝಿಲ್‌ನ ಕ್ರೀಡಾ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದು ಪೀಲೆ ಪಾಲಿನ ಹೆಗ್ಗಳಿಕೆಯಾಗಿದೆ. ಎರಡು ವರ್ಷಗಳ ಬಳಿಕ ಅವರು “ಫಿಫಾ ಶತಮಾನದ ಫುಟ್ಬಾಲಿಗ’ ಗೌರವಕ್ಕೆ ಪಾತ್ರರಾದರು. ಪೀಲೆ ತಂಡ 1958, 1962 ಮತ್ತು 1970ರಲ್ಲಿ ಫಿಫಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಚಾಂಪಿಯನ್ ಆಟಗಾರನ ತಂಡ ಕೊನೆಯ ಸಲ ವಿಶ್ವಕಪ್ ಜಯಿಸಿ ಭರ್ತಿ 50 ವರ್ಷಗಳು ಉರುಳಿವೆ. ಇದರ ಸುವರ್ಣ ಮಹೋತ್ಸವ ಹಾಗೂ ಅವರ 80ನೇ ವರ್ಷದ ಸವಿನೆನಪಿಗಾಗಿ ರಿಯೋ ಡಿ ಜನೈರೋದ “ಮರಕಾನ ಸ್ಟೇಡಿಯಂ’ನಲ್ಲಿ ಈ ಫುಟ್ಬಾಲಿಗನ ಆಳೆತ್ತರದ ಪ್ರತಿಮೆಯೊಂದನ್ನು ಸ್ಥಾಪಿಸಲಾಗಿದೆ. ಆದರೆ ಇದರ ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಲು ಪೀಲೆ ಅವರಿಗೆ ಸಾಧ್ಯವಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.