ಮನಸ್ಸು ಬಯಸಿದ್ದೆಲ್ಲವ ಕೊಡುವ ಕಲ್ಪವೃಕ್ಷವಾಗುವುದು

Team Udayavani, Oct 24, 2020, 6:10 AM IST

ಮನಸ್ಸು ಬಯಸಿದ್ದೆಲ್ಲವ ಕೊಡುವ ಕಲ್ಪವೃಕ್ಷವಾಗುವುದು

ಸಾಂದರ್ಭಿ ಚಿತ್ರ

ಈ ಭೂಮಿಯ ಮೇಲೆ ಮನುಷ್ಯ ಸೃಷ್ಟಿಸಿದ ಎಲ್ಲವೂ ಮೊದಲು ಮನುಷ್ಯನ ಮಿದುಳಿನಲ್ಲಿ ಆವಿರ್ಭವಿಸಿದವು. ಆ ಬಳಿಕ ಸಾಕಾರ ಗೊಂಡವು. ಯೋಗವು ಸುಸ್ವರೂಪದ ಮನಸ್ಸನ್ನು “ಕಲ್ಪವೃಕ್ಷ’ಕ್ಕೆ ಹೋಲಿಸುತ್ತದೆ. ನಾವು ನಮ್ಮ ಮನಸ್ಸನ್ನು ಒಂದು ನಿರ್ದಿಷ್ಟ ಮಟ್ಟಕ್ಕೆ ಕೊಂಡೊಯ್ದು ಸುವ್ಯವಸ್ಥಿತಗೊಳಿಸಿದರೆ ಪ್ರತಿ ಯಾಗಿ ಅದು ನಮ್ಮ ದೇಹ, ಭಾವನೆಗಳು, ಶಕ್ತಿಸಾಮರ್ಥ್ಯಗಳನ್ನು ವ್ಯವಸ್ಥಿತಗೊಳಿಸುವ ಕೆಲಸವನ್ನು ತಾನಾಗಿ ನಡೆಸುತ್ತದೆ. ಇದು ನಡೆದರೆ ನಮಗೆ ನಾವೇ ಕಲ್ಪವೃಕ್ಷವಾಗಿಬಿಡು ತ್ತೇವೆ. ನಾವು ಏನನ್ನು ಬಯಸುತ್ತೇವೆಯೋ ಅದು ಕೈಗೂಡುತ್ತದೆ.

ಹಿಂದೆ ಹಿರಿಯರು ಹೇಳುತ್ತಿದ್ದ ಒಂದು ಮಾತಿತ್ತು, “ತಮಾಶೆಗಾದರೂ ಕೆಟ್ಟ ಮಾತು ಗಳನ್ನು ಆಡಬಾರದು, ಏಕೆಂದರೆ ಆಕಾಶ ದೇವತೆಗಳು ತಥಾಸ್ತು ಅನ್ನುತ್ತಾ ಇರುತ್ತಾರೆ’. ವ್ಯವಸ್ಥಿತವಾಗಿರದ, ಸುಸ್ವರೂಪದಲ್ಲಿಲ್ಲದ ಮನಸ್ಸು ಏನೇನನ್ನೋ ಬಯಸುತ್ತಿರುತ್ತದೆ. ಹೀಗಾಗಿ ನಾವು ಮನಸ್ಸಿನಲ್ಲಿ ಏನನ್ನು ಬಯಸುತ್ತೇವೆ ಎಂಬ ಬಗ್ಗೆಯೂ ಅತ್ಯಂತ ಎಚ್ಚರಿಕೆ ಬೇಕು.

ಇಲ್ಲೊಂದು ಕಥೆಯಿದೆ. ಒಬ್ಟಾತ ಪಥಿಕ ದೂರದಾರಿ ಯಲ್ಲಿ ನಡೆದುಹೋಗುತ್ತಿ ದ್ದಾಗ ದಣಿವಾಯಿತು. ಹತ್ತಿರದಲ್ಲೇ ಮರವೂ ಅದರ ಕೆಳಗೆ ಹಸುರಾದ ಹುಲ್ಲು ಹಾಸೂ ಕಂಡಿತು. ಅದರ ಕೆಳಗೆ ಆತ ಅಡ್ಡಾದ, ಒಳ್ಳೆಯ ನಿದ್ದೆ ಹತ್ತಿತು. ಎಚ್ಚರವಾದಾಗ ಅವನಿಗೆ ಹಸಿವಾಗಿತ್ತು. “ಒಳ್ಳೆಯ ಊಟ ಸಿಕ್ಕಿದ್ದರೆ ಒಳ್ಳೆಯದಿತ್ತು’ ಅಂದುಕೊಂಡ. ಕ್ಷಣಾರ್ಧ ದಲ್ಲಿ ಅತ್ಯುತ್ತಮ ಭೋಜನ ಅವನೆದುರು ಪ್ರತ್ಯಕ್ಷವಾಯಿತು. ಉಂಡ, ಅಷ್ಟರಲ್ಲಿ ಬಾಯಾರಿತು, “ಕುಡಿಯಲೇನಾದರೂ ಸಿಕ್ಕಿದ್ದರೆ’ ಅಂದುಕೊಂಡ. ಉತ್ತಮವಾದ ಪಾನೀಯಗಳು ಪ್ರತ್ಯಕ್ಷವಾದವು.

ಮನಸ್ಸನ್ನು ಮರ್ಕಟ ಎಂದು ಹೇಳು ವುದೂ ಇದೆ. ಅಂಕೆ ತಪ್ಪಿದ ಮನಸ್ಸು ಹುಚ್ಚು ಹುಚ್ಚಾಗಿ ಯೋಚಿಸುತ್ತದೆ. ಪಥಿಕನಿಗೆ ಬಯಸಿದ್ದೆಲ್ಲ ಕಣ್ಮುಂದೆ ಬರುತ್ತಿರುವುದರಿಂದ ಗಾಬರಿಯಾಯಿತು, ಇಲ್ಲಿ ಭೂತಗಳಿರಬಹುದು ಅಂದುಕೊಂಡ. ಆ ಕ್ಷಣದಲ್ಲಿ ಅವನ ಸುತ್ತ ಭೂತಗಳು ನೆರೆದವು. ಬೆದರಿ, “ಭೂತಗಳು ನನ್ನನ್ನು ಕೊಲ್ಲ ಬಹುದು’ ಎಂದುಕೊಂಡ. ಅದೂ ನೆರವೇ ರಿತು. ಆ ಪಥಿಕ ಮಲಗಿದ್ದು ಒಂದು ಕಲ್ಪವೃಕ್ಷದ ಕೆಳಗೆ! ಮನಸ್ಸು ಕಲ್ಪವೃಕ್ಷವಾಗು ವುದರ ಜತೆಗೆ ಅದರ ಮರ್ಕಟ ಬುದ್ಧಿಯೂ ತೊಲಗಬೇಕು.

ನಾವು ಒಂದು ಕಾರನ್ನು ಚಲಾಯಿಸುತ್ತಿ ದ್ದೇವೆ ಎಂದಿಟ್ಟುಕೊಳ್ಳಿ. ಬ್ರೇಕ್‌, ಕ್ಲಚ್‌, ಆ್ಯಕ್ಸಿಲರೇಟರ್‌ – ಎಲ್ಲವೂ ಸರಿಯಾಗಿವೆ; ಆದರೆ ಸ್ಟಿಯರಿಂಗ್‌ ವೀಲ್‌ ತುಂಡಾಗಿದೆ, ಪರಿಸ್ಥಿತಿ ಹೇಗಿರುತ್ತದೆ? ಅವ್ಯವಸ್ಥಿತವಾದ, ಸುಸ್ವರೂಪದಲ್ಲಿಲ್ಲದ ಮನಸ್ಸಿನಿಂದ ಇಂತಹ ಸ್ಥಿತಿ ಉಂಟಾಗುತ್ತದೆ. ನಮ್ಮ ದೇಹ, ಶಕ್ತಿ ಸಾಮರ್ಥ್ಯಗಳು, ಕ್ರಿಯಾ ತ್ಮಕತೆ, ಸೃಜನಶೀಲತೆ – ಎಲ್ಲವೂ ಸರಿಯಿದ್ದು ಅವುಗಳನ್ನು ಒಳ್ಳೆಯ ಗುರಿಯತ್ತ ಮುನ್ನಡೆಸ ಬೇಕಾದ ಮನಸ್ಸು ಮರ್ಕಟ ನಂತಿದ್ದರೆ ಏನೂ ಮಾಡುವು ದಕ್ಕಾಗುವುದಿಲ್ಲ.

ನಮಗೇನು ಬೇಕು ಎನ್ನು ವುದನ್ನು ಸ್ಪಷ್ಟಪಡಿಸಿಕೊಳ್ಳು ವುದು ಮೊತ್ತಮೊದಲನೆಯ ದಾಗಿ ಆಗಬೇಕಾದದ್ದು. ಪ್ರತಿ ಯೊಬ್ಬ ಮನುಷ್ಯನೂ ಸಂತೋಷ ಮತ್ತು ಪ್ರಶಾಂತ ವಾದ ಬದುಕನ್ನು ಬಯಸು ತ್ತಾನೆ. ಬೇರೆ ಪದಗಳಲ್ಲಿ ಹೇಳುವುದಾದರೆ ನಮ್ಮೊಳಗೂ ಹೊರಗೂ ಸುಖ, ಸಂತೋಷ ಗಳು ಬೇಕು. ಹಾಗಾದರೆ ಇನ್ನೇಕೆ ತಡ? ನಮ್ಮ ಸುತ್ತಮುತ್ತ ಅವುಗಳನ್ನು ಸೃಷ್ಟಿಸುವ ಸಂಕಲ್ಪ ವನ್ನೇ ಮಾಡೋಣ. ಬೆಳಗ್ಗೆ ಏಳುವಾಗ ಸರಳವಾದ ಒಂದು ಸಂಕಲ್ಪವನ್ನು ಮಾಡೋಣ – “ಇವತ್ತು ನಾನು ಎಲ್ಲೇ ಹೋಗಲಿ, ಏನೇ ಮಾಡಲಿ; ನನ್ನ ಸುತ್ತಮುತ್ತ ಪ್ರೀತಿಯ, ಸಂತೋಷದ, ಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತೇನೆ’. ಇದಕ್ಕೆ ನಾವು ಬದ್ಧರಾಗಿದ್ದರೆ ನೂರು ಬಾರಿ ವೈಫ‌ಲ್ಯ ಅನುಭವಿಸಿದರೂ ಸೋಲುವುದಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿ ಅದನ್ನು ಸಾಧಿಸುತ್ತೇವೆ. ಮನಸ್ಸು ಕಲ್ಪವೃಕ್ಷವಾಗುತ್ತದೆ ಆಗ..!

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.