ಮಾದಕ ವ್ಯಸನ ಪತ್ತೆಗೂ ಶ್ವಾನದಳ ; ಪೊಲೀಸ್‌ ಇಲಾಖೆಗೆ ಮತ್ತಷ್ಟು ಬಲ


Team Udayavani, Oct 24, 2020, 1:27 AM IST

Swana

ಸ್ನಿಫ‌ರ್‌ ಶ್ವಾನ.

ಉಡುಪಿ: ಹೆಚ್ಚುತ್ತಿರುವ ಮಾದಕ ವ್ಯಸನ ತಡೆಗೆ ಪೊಲೀಸ್‌ ಇಲಾಖೆ ಮುಂದಾಗಿದ್ದು, ಪತ್ತೆ ಕಾರ್ಯಕ್ಕೆ ಶ್ವಾನದಳಗಳನ್ನು ಬಳಸಿಕೊಳ್ಳಲು ಮುಂದಾ ಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಇದಕ್ಕೆಂದೇ ಪ್ರತ್ಯೇಕ ಶ್ವಾನದಳಗಳಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಇಲಾಖೆಯ ಶ್ವಾನಗಳಿಗೆ ತರಬೇತಿ ನೀಡಲು ಇಲಾಖೆ ಚಿಂತಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಡಾಬರ್‌ಮನ್‌, ಜರ್ಮನ್‌ ಶೆಫ‌ರ್ಡ್‌, ಲ್ಯಾಬ್ರೆಡಾರ್‌ ತಳಿ ಗಳಿದ್ದು, ಈ ಪೈಕಿ ಡಾಬರ್‌ಮನ್‌ ಶ್ವಾನಗಳು ಅಪರಾಧ ಪತ್ತೆಗೆ ಹಾಗೂ ಉಳಿದ ಎರಡು ತಳಿಗಳು ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತವೆ.

ಎರಡು ತಿಂಗಳ ಶ್ವಾನಕ್ಕೆ ಬೆಂಗಳೂರಿನಲ್ಲಿ ತರಬೇತಿ
ಶ್ವಾನದಳಕ್ಕೆ ಸೇರ್ಪಡೆಯಾಗಿರುವ ಡಾಬರ್‌ಮನ್‌ ತಳಿಯ ಸ್ನಿಫ‌ರ್‌ ಹೆಸರಿನ 2 ತಿಂಗಳ ಶ್ವಾನವು ಶೀಘ್ರದಲ್ಲಿಯೇ ಬೆಂಗಳೂರಿಗೆ ತೆರಳಲಿವೆ. ಅಲ್ಲಿ ಅಪರಾಧ ಪತ್ತೆಯೊಂದಿಗೆ ಮಾದಕ ವ್ಯಸನಗಳನ್ನು ಪತ್ತೆ ಹಚ್ಚುವ ಬಗ್ಗೆ ಇದಕ್ಕೆ ತರಬೇತಿ ನೀಡಲಾಗು ತ್ತದೆ. ಅಲ್ಲಿ ತರಬೇತಿ ಪಡೆದ ಬಳಿಕ ಉಡುಪಿಗೆ ಕರ್ತವ್ಯಕ್ಕೆ ಹಾಜರಾಗಲಿದೆ. ಅಗತ್ಯಬಿದ್ದರೆ ಇತರ ಜಿಲ್ಲೆಗಳಿಗೂ ಈ ಶ್ವಾನಗಳು ಕರ್ತವ್ಯಕ್ಕೆ ತೆರಳಲಿವೆ.

ಶ್ವಾನಕ್ಕೆ ದಿನಕ್ಕೆ 300 ರೂ.ವೆಚ್ಚ!
ಉಡುಪಿ ಜಿಲ್ಲೆಯಲ್ಲಿ ಶ್ವಾನಗೃಹದಲ್ಲಿ ಒಟ್ಟು 4 ಶ್ವಾನಗಳಿವೆ. ಒಂದು ಶ್ವಾನದ ನಿರ್ವಹಣೆಗೆ ದಿನವೊಂದಕ್ಕೆ ತಗಲುವ ವೆಚ್ಚ 300 ರೂ.ಗಳು. ಊಟ, ವೈದ್ಯ ಕೀಯ ಆರೈಕೆ ಸಹಿತ ಎಲ್ಲವೂ ಇದರಲ್ಲಿ ಒಳಗೊಂಡಿರುತ್ತವೆ. ಒಂದು ಶ್ವಾನವನ್ನು ಇಬ್ಬರು ಹ್ಯಾಂಡ್ಲರ್‌ಗಳು ಆರೈಕೆ ಮಾಡುತ್ತಿದ್ದಾರೆ.

2.5 ಕೋ.ರೂ.ವೆಚ್ಚದ ಯೋಜನೆ
ಶ್ವಾನದಳದ ಬಲವರ್ಧನೆಗಾಗಿ ರಾಜ್ಯ ಪೊಲೀಸ್‌ ಇಲಾಖೆಯು ಸುಮಾರು 2.5 ಕೋ.ರೂ.ವೆಚ್ಚದಲ್ಲಿ ಶ್ವಾನದಳಕ್ಕೆ 50 ಶ್ವಾನಗಳನ್ನು ಸೇರ್ಪಡಿಸುವ ಉದ್ದೇಶ ಹೊಂದಿದೆ. ಸ್ಫೋಟಕ, ಮಾದಕ ವಸ್ತುಗಳು ಹಾಗೂ ಅಪರಾಧಿಗಳ ಪತ್ತೆದಾರಿಕೆಯಲ್ಲಿ ಶ್ವಾನದಳವು ಮಹತ್ತರವಾದ ಪಾತ್ರ ವಹಿಸುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಜರ್ಮನ್‌ ಶೆಫ‌ರ್ಡ್‌, ಲಾಬ್ರೆಡಾರ್‌, ಬೆಲ್ಜಿಯಂ ಮಾಲಿನೋಯಿಸ್‌, ಗೋಲ್ಡನ್‌ ರಿಟ್ರೇವರ್‌ ಹಾಗೂ ಡಾಬರ್‌ಮನ್‌ ತಳಿಗಳ 55 ಶ್ವಾನಗಳಿವೆ. ಮುಂದಿನ ದಿನಗಳಲ್ಲಿ ಮಹಿಳಾ ಪೇದೆಗಳನ್ನು ಈ ದಳಕ್ಕೆ ನೇಮಿಸಲು ಇಲಾಖೆ ಚಿಂತನೆ ನಡೆಸಿದೆ.

ಶ್ವಾನಕ್ಕೆ ತರಬೇತಿ
ಅಪರಾಧ ಪತ್ತೆಯೊಂದಿಗೆ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಶ್ವಾನಗಳನ್ನು ಬಳಸಿಕೊಳ್ಳುವ ಚಿಂತನೆಯಿದೆ. ಉಡುಪಿ ಜಿಲ್ಲೆಯಿಂದ ಸ್ನಿಫ‌ರ್‌ ಹೆಸರಿನ ಶ್ವಾನವನ್ನು ತರಬೇತಿಗೊಳಿಸಿ ಸಿದ್ಧಗೊಳಿಸಲಾಗುವುದು.
-ಕುಮಾರಚಂದ್ರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಉಡುಪಿ

ಟಾಪ್ ನ್ಯೂಸ್

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.