ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು
Team Udayavani, Oct 24, 2020, 2:30 PM IST
ಹೊಸಕೋಟೆ: ವಿಜಯದಶಮಿ ಆಚರಣೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಗೌರಿ ಗಣೇಶ ಹಬ್ಬಕ್ಕೆ ಹೋಲಿಸಿದಲ್ಲಿ ಕೆಲವು ಹೂಗಳ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲ ಏರಿಕೆಯಾಗಿರುವ ಕಾರಣ ವಹಿವಾಟು ಕುಂಠಿತ ಗೊಂಡಿದ್ದು, ವ್ಯಾಪಾರಿಗಳಿಗೂ ನಿರಾಸೆಯಾಗಿದೆ.
ನಿರಂತರವಾಗಿ ಮಳೆಯಾಗುತ್ತಿರುವ ಕಾರಣಹೂಗಳನ್ನು ಹೆಚ್ಚು ಕಾಲ ಶೇಖರಣೆ ಮಾಡಿದಲ್ಲಿ ಹಾಳಾಗುವ ಸಾಧ್ಯತೆಯಿಂದ ವ್ಯಾಪಾರಿಗಳು ಕಡಿಮೆ ಪ್ರಮಾಣದಲ್ಲಿ ಮಾರಾಟ ಮಾಡಿ ನಷ್ಟ ನಿವಾರಿಸಿಕೊಳ್ಳಬೇಕಿದೆ.
ಆದಾಯ ಕುಂಠಿತಗೊಂಡಿರುವ ಕಾರಣ ಗ್ರಾಹಕರು ಸಹ ಹಬ್ಬದ ಆಚರಣೆಗೆನಿರ್ಬಂಧಗಳನ್ನು ವಿಧಿಸಿಕೊಂಡು ಸರಳವಾಗಿ ಆಚರಿಸಲು ನಿರ್ಧರಿಸಿರುವುದು ವ್ಯಾಪಾರದ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ. ಸಿಹಿ ತಿನಿಸುಗಳ ಮಾರಾಟಗಾರರುಆಯುಧಪೂಜೆಗಾಗಿ ರಿಯಾಯಿತಿ ದರ ಪ್ರಕಟಿಸಿದರೂ ಗ್ರಾಹಕರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ.
ಹೂ (ದರ ಪ್ರತಿ ಕೆಜಿಗೆ): ಕನಕಾಂಬರ 1,000 ರೂ., ಮಲ್ಲಿಗೆ, ಕಾಕಡ 1,200 ರೂ., ಮೇರಿಗೋಲ್ಡ್ 240 ರೂ., ಬಿಳಿ, ಹಳದಿ ಶ್ಯಾಮಂತಿಗೆ 160 ರೂ., ರೋಸ್ 260 ರೂ., ಚೆಂಡು, 80 ರೂ.ಗಳಂತೆ ಮಾರಾಟವಾಗುತ್ತಿದೆ.
ಹಣ್ಣುಗಳು: ದಾಳಿಂಬೆ, ಸೀತಾಫಲ, ಸೇಬು 100 ರೂ., ಏಲಕ್ಕಿ ಬಾಳೆಹಣ್ಣು 80 ರೂ., ಫೈನಾಪಲ್ 2ಕ್ಕೆ 50 ರೂ., ಸಾಮಾನ್ಯ ಗಾತ್ರದ ಬಾಳೆ ಕಂದು 50 ರೂ.ಗಳಾಗಿತ್ತು.
ದಸರಾ: ಬೆಲೆ ಏರಿಕೆ ಬಿಸಿ :
ದೊಡ್ಡಬಳ್ಳಾಪುರ: ಈ ಬಾರಿ ಹಬ್ಬ ಉತ್ಸವಗಳಿಗೆ ಕೋವಿಡ್ ಕಂಕಟವಿದ್ದರೂ, ಹೂ, ಹಣ್ಣು, ಬಾಳೆಕಂದು, ಬೂದು ಕುಂಬಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ದುಬಾರಿಯಾಗಿವೆ.
ತಾಲೂಕಿನಲ್ಲಿ ಆಯುಧ ಪೂಜೆ, ವಿಜಯದಶಮಿ ಹಬ್ಬಕ್ಕೆ ಸ್ವಾಗತ ನಡೆದಿದ್ದು,ನಗರದ ಮಾರುಕಟ್ಟೆ ಪ್ರದೇಶದಲ್ಲಿಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ಆದರೆ,ಹೂ, ಬೂದು ಕುಂಬಳದ ಬೆಲೆ ಗಗನಕ್ಕೇರಿವೆ. ಬೂದು ಕುಂಬಳಕಾಯಿಕೆಜಿಗೆ 30ರಿಂದ 40ರೂ ಇದೆ. ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿಗೆ 700ರಿಂದ 800 ರೂ. ವರೆಗಿದ್ದರೆ, ಕನಕಾಂಬರ 1,400ರೂ. ಶಾಮಂತಿಗೆ, ಬಟನ್ಸ್ , ಗುಲಾಬಿ ಮೊದಲಾದ ಹೂವಿನ ಬೆಲೆಗಳು ಕೆ.ಜಿಗೆ 200 ದಾಟಿವೆ. ಬಾಳೆ ಹಣ್ಣು ಕೆಜಿಗೆ 30 ರಿಂದ 80ರೂ, ಸೇರಿದಂತೆ ಇತರಹಣ್ಣುಗಳ ಬೆಲೆಗಳೂ ಕೆಜಿಗೆ ಶೇ.20 ರಿಂದ 30 ರಷ್ಟು ಹೆಚ್ಚಾಗಿವೆ. ಬಾಳೆಕಂದುಗಳ ಬೆಲೆ ಸಹ ಹೆಚ್ಚಾಗಿದ್ದು, ಆಯುಧ ಪೂಜೆಗಾಗಿ ಮಗ್ಗಗಳು ಯಂತ್ರಗಳು, ವಾಹನಗಳುಮೊದಲಾದವುಗಳನ್ನು ಶುದ್ದ ಮಾಡಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಬೀಳುತ್ತಿದ್ದು, ಹೂವುಗಳ ತೇವಾಂಶ ಹೆಚ್ಚಾಗಿ ಸಹಜವಾಗಿ ಬೆಲೆಗಳು ಹೆಚ್ಚಾಗಿವೆ. ಕೊರೊನಾದಿಂದ ನೇಕಾರಿಕೆ ಉದ್ಯಮ ಕುಸಿದಿದ್ದು, ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳಬೇಕಿದೆ.
ಈ ನಡುವೆ ಈ ವರ್ಷ ಕೋವಿಡ್ ಕಂಟಕ ಎದುರಾಗಿದೆ. ಎಲ್ಲದಕ್ಕೂ ಬೆಲೆದುಬಾರಿಯಾಗಿವೆ. ಬೆಲೆ ಏರಿಕೆನೋಡಿದರೆ, ಹಬ್ಬ ಮಾಡಲು ಉತ್ಸಾಹ ಇಲ್ಲದಿದ್ದರೂ, ಹಿಂದಿನಿಂದಲೂ ಆಚರಿಸುತ್ತಿರುವ ಹಬ್ಬಗಳನ್ನು ಆಚರಿಸಲೇಬೇಕಲ್ಲ ಎನ್ನುತ್ತಾರೆ ಬಹುಪಾಲು ಸಾರ್ವಜನಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.