ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ
Team Udayavani, Oct 24, 2020, 6:32 PM IST
ಸಿಂದಗಿ: ಶರಣರು ವಚನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ತಮ್ಮದೆಯಾದ ಕೊಡುಗೆನೀಡಿದ್ದಾರೆ ಎಂದು ಕಡಕೋಳ ಸಂಸ್ಥಾನ ಹಿರೇಮಠದ ಡಾ| ರುದ್ರಮುನಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಮುರಡಿ ಗ್ರಾಮದ ದಾರ್ಶನಿಕ ಗುರು ಘಂಟಾಕರ್ಣ ಶಿವಯೋಗಿಗಳ 16ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಪುರಾಣ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರುಮಾತನಾಡಿದರು.
ಶರಣರು ತಮ್ಮ ಕಾಯಕದಾಸೋಹದ ಜೊತೆಗೆ ವಚನಗಳನ್ನು ರಚನೆ ಮಾಡುವ ಮೂಲಕ ಸಮಾಜದಲ್ಲಿ ಆಳವಾಗಿ ಬೆರೂರಿದ್ದ ಮುಢನಂಬಿಕೆ, ಅಂಧಕಾರ, ಅಸಮಾನತೆ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಶ್ರಮಿಸಿದಕಾಯಕ ಯೋಗಿಗಳು. ಅವರವಚನಗಳನ್ನು ನಾವು ಅಧ್ಯಯನ ಮಾಡಬೇಕು. ದಿನಕ್ಕೊಂದು ವಚನ ಪಠಣ ಮಾಡಬೇಕು. ದಾರ್ಶನಿಕ ಗುರು ಘಂಟಾಕರ್ಣ ಶಿವಯೋಗಿಗಳ ಆದರ್ಶ, ತತ್ವಗಳನ್ನು ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿನಡೆದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮಡಿವಾಳೇಶ್ವರರು ಒಬ್ಬ ದಾರ್ಶನಿಕ ಸಂತ, ಅವರ ವಚನಗಳುಮಾನವ ಕುಲಕೋಟಿಗೆ ದಾರಿ ದೀಪಗಳಾಗಿವೆ. ನಮ್ಮ ಸಮಾಜದ ನಿತ್ಯ ಜೀವನದ ಸತ್ಯ ಸಂಗತಿಗಳನ್ನು ಯಾರ ಮುಲಾಜು ಕಾಯದೆ ತಮ್ಮ ವಚನ ಮತ್ತು ಹಾಡಿನ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಘಂಟಾಕರ್ಣ ಶಿವಯೋಗಿಗಳು ಕೂಡಾ ಅನೇಕ ಪವಾಡ ಮಾಡಿ ಭಕ್ತರ ಉದ್ಧಾರ ಮಾಡಿ ಚಿರಸ್ಮರಣೀಯರಾಗಿದ್ದಾರೆ. ಶರಣ ಸಂತರ ಜೀವನದ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಬದುಕು ಸಾಗಿಸಬೇಕು ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಯಂಕಂಚಿ ಹಿರೇಮಠದ ಅಭಿನವರುದ್ರಮುನಿ ಶಿವಾಚಾರ್ಯರು ಮಾತನಾಡಿ, ಘಂಟೇಶ್ವರರು ಪ್ರಪಂಚ ಮಾಡುತ್ತಲೇಪಾರಮಾರ್ಥಿಕವನ್ನು ಗೆದ್ದು ಈ ಸಮಾಜದಲ್ಲಿ ಒಬ್ಬ ಮೇರುಪುರುಷರಾದರು. ನಮ್ಮ ಭರತಭೂಮಿಯಲ್ಲಿ ಇಂತಹ ಅನೇಕ ಸತ್ಪುರುಷರು ಬಾಳಿ ನಮಗೆಲ್ಲ ಜ್ಞಾನದ ಬೆಳಕು ನೀಡಿದ್ದಾರೆ. ಅವರ ತತ್ವ ಸಿದ್ಧಾಂತವನ್ನು ಅರಿತು ಅನುಸರಿಸಿಕೊಂಡು ನಮ್ಮ ಜೀವನ ಸಾರ್ಥಕಗಿಳಿಸಿಕೊಳ್ಳಬೇಕು ಎಂದು ಹೇಳಿದರು.
ಚಿಕ್ಕರೂಗಿಯ ಈರಣ್ಣ ಶಾಸ್ತ್ರಿ, ಸಂಖದ ಪ್ರವಚನಕಾರ ಪ್ರಶಾಂತ ಮಹಾರಾಜರು, ಡಾ| ಬಿ.ಜಿ. ಮಠ, ಶಿಕ್ಷಕ ಶ್ರೀಶೈಲ ಹದಗಲ ಮಾತನಾಡಿದರು. ಸಿದ್ರಾಮಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಹುಮನಾಬಾದಿನ ಹನುಮಂತ್ರಾಯಗೌಡ ಪಾಟೀಲ, ಶಿವಪ್ಪ ಬ್ಯಾಕೋಡ, ಶಿವಶರಣಪ್ಪ ಸಾಲೋಟಗಿ, ನಿಂಗಣ್ಣ ಜೇವರ್ಗಿ, ಶಿವಶರಣಪ್ಪ ಹದಗಲ್ಲ, ಬಸಪ್ಪ ಸಜ್ಜನ, ಕೇಸುರಾಯ ಹಚ್ಚಡ, ಗುರುಲಿಂಗಪ್ಪ ಅಂಗಡಿ, ಷಣ್ಮುಖಪ್ಪ ಪೂಜಾರಿ, ಶಹಾಬುದ್ದೀನ್ ಶೀತನೂರ,ಭೀಮಾಶಂಕರ ದೊಡಮನಿ ಇದ್ದರು.ಸೂರ್ಯಕಾಂತ ಸಾಲೋಟಗಿ ಸ್ವಾಗತಿಸಿದರು. ವೀರೇಶ ಮಠ ನಿರೂಪಿಸಿದರು. ನಿಂಗಣ್ಣ ಜಂಬರಖಾನಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.