ಮತ್ತೂಮ್ಮೆ ಬಿಜೆಪಿ ತೆಕ್ಕೆಗೆ ಬೀರೂರು ಪುರಸಭೆ
Team Udayavani, Oct 24, 2020, 7:09 PM IST
ಕಡೂರು/ ಬೀರೂರು: ನೂತನ ಮೀಸಲಾತಿ ಮಾರ್ಗಸೂಚಿಯಂತೆ ನಿಗದಿಯಾಗಿದ್ದ ಪಟ್ಟಣ ಪುರಸಭೆಯಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ 1ನೇ ವಾರ್ಡಿನ ಸದಸ್ಯ ಎಂ.ಪಿ. ಸುದರ್ಶನ್ ಅಧ್ಯಕ್ಷರಾಗಿ ಮತ್ತು 16ನೇ ವಾರ್ಡಿನ ಸದಸ್ಯೆ ಮೀನಾಕ್ಷಮ್ಮ ಉಪಾಧ್ಯಕ್ಷೆಯಾಗಿ ಚುನಾಯಿತಗೊಂಡರು.
23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿಯ 10 , ಕಾಂಗ್ರೆಸ್ 9 ಮತ್ತುಜೆಡಿಎಎಸ್‌ನ ಇಬ್ಬರು ಹಾಗೂ ಇಬ್ಬರುಪಕ್ಷೇತರ ಸದಸ್ಯರಿದ್ದು ಕಾಂಗ್ರೆಸ್ ಮತ್ತುಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹುದ್ದೆಗೆಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಪಿ.ಸುದರ್ಶನ್ ಇಬ್ಬರು ಪಕ್ಷೇತರ ಸಹಸದಸ್ಯರು ಮತ್ತು ಜೆಡಿಎಸ್‌ನ ಇಬ್ಬರು ಸದಸ್ಯರ ಬೆಂಬಲದೊಂದಿಗೆ 14 ಮತ ಗಳಿಸಿ ಆಯ್ಕೆಗೊಂಡರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರವಿಕುಮಾರ್ ತಮ್ಮ ಪಕ್ಷದ 9 ಸದಸ್ಯರ ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ಉಪಾಧ್ಯಕ್ಷರಾಗಿ ಚುನಾವಣೆಯಲ್ಲಿ ಸಹ ಅವಿರೋಧವಾಗಿ ಆಯ್ಕೆಗೊಂಡಿದ್ದ 15ನೇ ವಾರ್ಡಿನ ಸದಸ್ಯೆ ಮೀನಾಕ್ಷಮ್ಮ ಸಹ 14 ಮತಗಳನ್ನು ಪಡೆದು ಆಯ್ಕೆಗೊಂಡರೆ ಪ್ರತಿಪಕ್ಷ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ಎಂ.ನಂದಿನಿ 9 ಮತಗಳನ್ನು ಪಡೆದು ಪರಾಭವಗೊಂಡರು.
ಚುವಾವಣಾ ಅಧಿಕಾರಿಯಾಗಿ ಅಜ್ಜಂಪುರ ತಾಲೂಕು ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಮುಖ್ಯಾಧಿಕಾರಿ ಕೆ.ಎಂ.ಸತ್ಯನಾರಾಯಣ್ ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಕ್ಷೇತ್ರ ಬಿಜೆಪಿಶಾಸಕ ಬೆಳ್ಳಿಪ್ರಕಾಶ್ ಅಭಿನಂದಿಸಿ ಮಾತನಾಡಿದದರು. ಬಿಜೆಪಿ ನಗರ ಘಟಕ ಅಧ್ಯಕ್ಷ ಎಂ.ಪಿ. ವಿಕ್ರಂ, ಎ.ಪಿ.ಎಂ.ಸಿ.ಸದಸ್ಯ ಮಾರ್ಗದಮಧು, ಎಲೆ ರವಿಕುಮಾರ್, ಬಿಜೆಪಿ ಮುಖಂಡರಾದ ಬೋರ್‌ವೆಲ್ ರವಿ, ಸವಿತಾರಮೇಶ್, ಎಸ್. ರಮೇಶ್,ಮಹೇಶ್ ಒಡೆಯರ್, ಜೆಡಿಎಸ್ ಮುಖಂಡ ಬಂಡಾರಿ ಶ್ರೀನಿವಾಸ್ ಇತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.