ಆಯುಷ್ ಕೇಂದ್ರಗಳತ್ತ ಜನರ ಒಲವು
ಆಯುಷ್ಯ ಕೇಂದ್ರದಲ್ಲಿ ಔಷಧಿ ಗಿಡಗಳ ಮಹತ್ವದ ಗೋಡೆ ಬರವಣಿಗೆ
Team Udayavani, Oct 25, 2020, 12:08 PM IST
ಯಲಹಂಕ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಭಾರತೀಯ ವೈದ್ಯ ಪದ್ಧತಿಗಳಾದ ಆಯುಷ್ಯ ಕ್ಷೇಮ ಕೇಂದ್ರಗಳತ್ತ ಜನರು ಒಲವು ತೋರುತ್ತಿದ್ದಾರೆ. ಯಲಹಂಕ ತಾಲೂಕಿನ ಹೆಸರಘಟ್ಟ, ಬ್ಯಾತ, ಗಂಟಿಗಾನಹಳ್ಳಿ, ಆನೇಕಲ್ ತಾಲೂಕಿನ ಬನ್ನೇರಘಟ್ಟ, ಸೋಮನಹಳ್ಳಿ, ಬೆಂ ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕಿನ ಕೋಡಿಹಳ್ಳಿ, ಹಣಬೆ, ನೆಲಮಂಗಲದ ಯಂಟಿಗಾನಹಳ್ಳಿ, ದೇವನಹಳ್ಳಿಯ ಹೆಗ್ಗನಹಳ್ಳಿ ಆಯುಷ್ಯ ಕೇಂದ್ರಗಳಿಗೆ ಪ್ರತಿದಿನ 60- 80ಜನ ಬರುತ್ತಿದ್ದು ಆಯುಷ್ಯ ಇಲಾಖೆಯಲ್ಲಿ ಭರವಸೆ ಹೆಚ್ಚಿದೆ.
ಆಯುಷ್ಯ ಇಲಾಖೆ ಆಯುಷ್ಮಾನ್ ಭಾರತ್ ರಾಷ್ಟ್ರೀಯ ಮಿಷನ್ ಯೋಜನೆ ಅಡಿ ಇತ್ತೀಚೆಗೆ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಆಯುಷ್ಯ -ಕ್ಷೇಮ ಕೇಂದ್ರಗಳಲ್ಲಿ ಯೋಗ ಶಿಕ್ಷಕರಿಂದ ಯೋಗಾಭ್ಯಾಸ, ಜನರಿಗೆ ಆರೋಗ್ಯ ಅರಿವು, ಔಷಧಿ ಸಸಿ ಬೆಳೆಸುವುದು, ಸಸಿಗಳ ಉಚಿತ ವಿತರಣೆ, ಸಸಿ ನೆಡುವಿಕೆ, ಮತ್ತು ಕ್ಷೇಮಕೇಂದ್ರಗಳಲ್ಲಿ ಅರಿವು ಮೂಡಿಸುವ ಹೊಸ ಗೋಡೆ ಬರವಣಿಗೆ ಬ್ರಾಂಡಿಂಗ್ ಸೇರಿದಂತೆ ವಿವಿಧ ರೋಗನಿರೋಧ ಶಕ್ತಿ ಹೆಚ್ಚಿಸುವ ಕಾರ್ಯಕ್ರಮಗಳಿಂದ ಜನರಲ್ಲಿ ಆಯುಷ್ ಇಲಾಖೆಯೆಡೆಗೆ ವಾಲುತ್ತಿದ್ದಾರೆ.
ಜತೆಗೆ ಇಂಗ್ಲಿಷ್ ಮೆಡಿಸನ್(ಅಲೋಪಥಿ) ಸಾಮಾನ್ಯ ಜನರಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ. ಆಯುಷ್ಯ ಇಲಾಖೆಯಿಂದ ಮನೆಬಾಗಿಲಿಗೆ ಬಂದು ಉಚಿತ ಚಿಕಿತ್ಸೆ – ಸಲಹೆ ನೀಡುತ್ತಿದ್ದಾರೆ ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ನಾವು ನಮ್ಮ ಮನೆ ಯಲ್ಲಿ ಮದ್ದು ತಯಾರು ಮಾಡಿಕೊಳ್ಳಲು ಔಷಧಿ ಗಿಡ ಆರೋಗ್ಯ ಕಾಳಜಿ ಬಗ್ಗೆ ಮಾಹಿತಿ ನೀಡು ತ್ತಿದ್ದಾರೆ ಎಂದು ಮುದ್ದನಹಳ್ಳಿಯ ನಾಗವೇಣಿ ಹೇಳುತ್ತಾರೆ. ಕೇಂದ್ರಗಳಲ್ಲಿ ಶಿಕ್ಷಕರು ಯೋಗ, ಪ್ರಾಣಾಯಾಮ ಕಲಿಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 40ಕ್ಕೂ ಅಧಿಕ ಜನರ ಬರುತ್ತಾರೆ. ಜ್ವರ, ಕೆಮ್ಮು ನೆಗಡಿಗೆ ಮನೆಯಲ್ಲಿ ಮದ್ದು ಮಾಡಿಕೊಳ್ಳುವುದು, ಉಚಿತ ಔಷಧಿ ಗಿಡಗಳನ್ನು ನೀಡಿದ್ದಾರೆ ನಾವು ಮನೆಯಲ್ಲಿ ಔಷಧಿ ಹೇಗೆ ತಯಾರಿಸಿ ಕೊಳ್ಳಬೇಕು ಎಂಬ ಪ್ರಾತ್ಯಕ್ಷಿಕೆಯನ್ನೂ ನೀಡುತ್ತಾರೆ ಎಂದು ಬ್ಯಾತ ಗ್ರಾಮದ ಗಿರೀಶ್ ಹೇಳಿದರು.
ಆಯುಷ್ ಕೇಂದ್ರಗಳಲ್ಲಿ ಔಷಧಿ ಸಸ್ಯಗಳ ಕೈತೋಟ, ಯೋಗ, ಮನೆಮನೆಗೂ ಆಶಾ ಕಾರ್ಯಕತೆಯರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚೆಗೆ ಯೋಗ ದಿನಾಚರಣೆ, ಆರ್ಯುರ್ವೇದ ದಿನಾಚರಣೆ ಮಾಡುವುದಕ್ಕೆ ಜನರಿಗೆ ಆಸಕ್ತಿ ಹೆಚ್ಚಾಗಿದೆ. ಜತೆಗೆ ಆರೋಗ್ಯದ ಚೇತರಿಕೆ ಉಂಟಾಗಿದ್ದು, ಪ್ರತಿದಿನ ಆಸ್ವತ್ರೆಗಳಿಗೆ 70ರಿಂದ 80ಜನರು ಚಿಕಿತ್ಸೆಗೆ ಬರುತ್ತಿದ್ದಾರೆ. – ಡಾ. ಮುಕ್ತಾಂಬಿಕಾ, ಬ್ಯಾತ ಆಯುಷ್ ಕೇಂದ್ರದ ವೈದ್ಯೆ
ಬೆಂಗಳೂರು ನಗರ ಜಿಲ್ಲೆಯಲ್ಲಿ ಸರ್ಕಾರ ಇತ್ತೀಚೆಗೆ ಆಯುಷ್ಯ ಕ್ಷೇಮ ಕೇಂದ್ರಗಳಿಗೆ ಅಮೂಲಾಗ್ರ ಬದಲಾವಣೆ ತಂದಿದೆ. ಆಯುಷ್ ಸೇವೆಗಳಲ್ಲಿ ಜೀವನ ಪದ್ಧತಿ ಕುರಿತಂತೆ ಯೋಗ, ಆಹಾರ, ಔಷಧಿಯ ಸಸ್ಯಗಳು ಮತ್ತು ಆಯುಷ್ ವ್ಯವಸ್ಥೆಯು ಹಳ್ಳಿ, ನಗರ ಪ್ರದೇಶದಲ್ಲಿ ತಲುಪಿಸಲು ಕ್ರಮ ತೆಗೆದುಕೊಂಡಿರು ವುದು. ಭಾರತೀಯ ಪದ್ಧತಿಗಳ ಮೇಲೆ ಜನರ ಒಲುವು ಹೆಚ್ಚಾಗಿದೆ. – ಡಾ. ಮಹಮ್ಮದ್ ರಫಿ ಹಕೀಬ್ ಬೆಂಗಳೂರು ನಗರ, ಗ್ರಾಮಾಂತರ ಆಯುಷ್ ಅಧಿಕಾರಿ
-ರಾಮು ಕೊಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.