ಪೋಲಿಯೋ ಜಾಗೃತಿ ಮೂಡಿಸಿದ ಜಾಥಾ
Team Udayavani, Oct 25, 2020, 6:12 PM IST
ಬೀದರ: ಕಲ್ಯಾಣ ಝೋನ್ ವ್ಯಾಪ್ತಿಯ ರೋಟರಿ ಕ್ಲಬ್‌ಗಳ ವತಿಯಿಂದ ವಿಶ್ವ ಪೋಲಿಯೋ ದಿನದ ಅಂಗವಾಗಿ ನಗರದಲ್ಲಿ ಶನಿವಾರ ನಡೆದ ಜಾಥಾ ಸಾರ್ವಜನಿಕರಲ್ಲಿ ಪೋಲಿಯೋ ಜಾಗೃತಿ ಮೂಡಿಸಿತು.
ರೋಟರಿ ವೃತ್ತದಿಂದ ಆರಂಭಗೊಂಡ ಜಾಥಾ ಜನರಲ್ ಕಾರ್ಯಪ್ಪ ವೃತ್ತ, ಅಂಬೇಡ್ಕರ್‌ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಹಾಯ್ದು ಐಎಂಎ ಹಾಲ್‌ಗೆ ತಲುಪಿ ಸಮಾರೋಪಗೊಂಡಿತು.
ಜಾಥಾದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು, ರೋಟರಿ ಕ್ಲಬ್ ಪದಾಧಿಕಾರಿಗಳು ಹಾಗೂ ಗಣ್ಯರು ಎಂಡ್ ಪೋಲಿಯೋ ನೌ ಬರಹ ಹೊಂದಿದ್ದ ಟೀ ಶರ್ಟ್ ಧರಿಸಿದ್ದರು. ಎರಡು ಹನಿ ಪೋಲಿಯೋಮುಕ್ತ ಜೀವನಕ್ಕಾಗಿ ಲಸಿಕೆ ಹಾಕಿಸಿ ಪೋಲಿಯೋ ತೊಲಗಿಸಿ ಎಂಬಿತ್ಯಾದಿ ಬರಹಗಳಫಲಕಗಳನ್ನು ಹಿಡಿದು ಗಮನ ಸೆಳೆದರು. ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು, ವಿಶ್ವ ಮಟ್ಟದಲ್ಲಿ ಪೋಲಿಯೋ ನಿಯಂತ್ರಿಸುವಲ್ಲಿಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಇದೀಗ ಪೋಲಿಯೋ ಮಾದರಿಯಲ್ಲಿಯೇ ಕೋವಿಡ್ ಸೋಂಕು ತಡೆಗೆ ಶ್ರಮಿಸಬೇಕಾದ ಅಗತ್ಯ ಇದೆ. ಕೋವಿಡ್ ಮುಕ್ತಿಗೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು. ಅಂತಾರಾಷ್ಟ್ರೀಯ ರೋಟರಿ ಕ್ಲಬ್ ವಿಶ್ವದ 200ಕ್ಕೂ ಹೆಚ್ಚು ದೇಶಗಳಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತವಾಗಿದೆ ಎಂದು ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಚಿನ್ನಪ್ಪ ರೆಡ್ಡಿ ಹೇಳಿದರು. 1988ರಲ್ಲಿ ಪೋಲಿಯೋ ಮುಕ್ತಿಗೆ ಸಂಕಲ್ಪ ತೊಟ್ಟ ರೋಟರಿ ಕ್ಲಬ್ ಈ ಕಾರ್ಯದಲ್ಲಿ ಬಹುತೇಕ ಯಶಸ್ವಿಯಾಗಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯು 32 ವರ್ಷಗಳಲ್ಲಿ ಪೋಲಿಯೋ ನಿರ್ಮೂಲನೆಗೆ 15 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ರೋಟರಿ ಶ್ರಮದಿಂದಾಗಿ ಪ್ರತಿ ವರ್ಷ ಸರಾಸರಿ 3.5 ಲಕ್ಷಮಕ್ಕಳಲ್ಲಿ ಕಂಡು ಬರುತ್ತಿದ್ದ ಪೋಲಿಯೋ ಈಗ ಕೇವಲ 129 ಮಕ್ಕಳಲ್ಲಿ ಇದೆ. ಪೋಲಿಯೋ ವಿಶ್ವದಲ್ಲಿ ಎರಡು ದೇಶಗಳಲ್ಲಿ ಮಾತ್ರ ಉಳಿದುಕೊಂಡಿದೆ ಎಂದು ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3160 ಪೋಲಿಯೋ ಪ್ಲಸ್ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಭಾರತ ಪೋಲಿಯೋ ಮುಕ್ತ ದೇಶವಾದರೂ, ನೆರೆ ದೇಶಗಳಿಂದ ಮತ್ತೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಡೀ ವಿಶ್ವದಿಂದ ಪೋಲಿಯೋ ಸಂಪೂರ್ಣವಾಗಿ ತೊಲಗುವವರೆಗೆ 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ವಿ.ಜಿ. ರೆಡ್ಡಿ, ರೋಟರಿ ಮಾಜಿ ಗವರ್ನರ್ ಕೆ.ಸಿ. ಸೇನನ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ಕೃಷ್ಣಾರೆಡ್ಡಿ, ರೋಟರಿ ಕಲ್ಯಾಣ ಝೋನ್ ಅಸಿಸ್ಟಂಟ್ ಗವರ್ನರ್ ಡಾ| ಜಗದೀಶ ಪಾಟೀಲ, ಐಎಂಎ ಅಧ್ಯಕ್ಷ ಡಾ| ವಿ.ವಿ. ನಾಗರಾಜ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ರೋಟರಿ ಕ್ಲಬ್ ಅಧ್ಯಕ್ಷ ಹಾವಶೆಟ್ಟಿಪಾಟೀಲ, ಕಾರ್ಯದರ್ಶಿ ರಂಜೀತ್ ಪಾಟೀಲ, ರೋಟರಿ ಕ್ಲಬ್ ಬೀದರ ಫೋರ್ಟ್ ಅಧ್ಯಕ್ಷ ಶೇಖರ ರಾಗಾ, ಕಾರ್ಯದರ್ಶಿ ಎಸ್.ಬಿ. ಚಿಟ್ಟಾ,
ರೋಟರಿ ಕ್ಲಬ್ ಬೀದರ ನ್ಯೂ ಸೆಂಚುರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಕಾರ್ಯದರ್ಶಿ ಡಾ| ಕಪಿಲ್ ಪಾಟೀಲ, ರೋಟರಿ ಕ್ಲಬ್‌ಬೀದರ ಕ್ವೀನ್ಸ್ ಅಧ್ಯಕ್ಷೆ ಸುಷ್ಮಾ ಪಾಟೀಲ, ಕಾರ್ಯದರ್ಶಿ ಮೇನಕಾ ಪಾಟೀಲ, ರೋಟರಿಕ್ಲಬ್ ಭಾಲ್ಕಿ ಫೋರ್ಟ್ ಅಧ್ಯಕ್ಷ ಯುವರಾಜಜಾಧವ, ಕಾರ್ಯದರ್ಶಿ ಸಾಗರ ನಾಯಕ, ಬಸವಕಲ್ಯಾಣದ ರೋಟರಿ ಕ್ಲಬ್ ಅಧ್ಯಕ್ಷ ಡಾ| ಸಾಗರ ಬಸನಾಳೆ, ಕಾರ್ಯದರ್ಶಿ ಡಾ| ಸದಾನಂದ ಪಾಟೀಲ, ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ಭಾರತಿ ಚನಶೆಟ್ಟಿ, ಕಾರ್ಯದರ್ಶಿ ಸುನೈನಾ ಗುತ್ತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.