ಸಾವರ್ಕರ್‌ಗೆ ಏಕೆ ಇದುವರೆಗೆ ಭಾರತ ರತ್ನ ನೀಡಿಲ್ಲ? ಬಿಜೆಪಿಗೆ ಶಿವಸೇನೆ ಪ್ರಶ್ನೆ
Team Udayavani, Oct 26, 2020, 5:27 PM IST
ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇದುವರೆಗೆ ಭಾರತ ರತ್ನ ನೀಡಿಯೇ ಇಲ್ಲ ಎಂದು ಶಿವಸೇನೆ ಟೀಕಿಸಿದೆ.
ಸೋಮವಾರ ಮುಂಬೈನಲ್ಲಿ ಮಾತನಾಡಿದ ಶಿವಸೇನೆ ವಕ್ತಾರ ಸಂಜಯ ರಾವುತ್ ಹಿಂದುತ್ವ ಪ್ರತಿಪಾದಕರಾಗಿರುವ ವಿ.ಡಿ.ಸಾವರ್ಕರ್ ಅವರಿಗೆ ಅರ್ಹವಾಗಿಯೇ ಭಾರತ ರತ್ನ ನೀಡಬೇಕಾಗಿದೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಮನಸ್ಸು ಮಾಡಿಯೇ ಇಲ್ಲವೆಂದು ಆರೋಪಿಸಿದ್ದಾರೆ.
ಸಾವರ್ಕರ್ ವಿರುದ್ಧ ಕಾಂಗ್ರೆಸ್ ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಭಾನುವಾರ ಬಿಜೆಪಿ ಆರೋಪಿಸಿತ್ತು. ಜತೆಗೆ ಶಿವಸೇನೆಯ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಕಾಂಗ್ರೆಸ್‌ನ ಟೀಕೆಯ ಬಗ್ಗೆ ಮೌನವಾಗಿಯೇ ಇದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ವಕ್ತಾರ ಕೇಶವ ಉಪಾಧ್ಯಾಯ ಆರೋಪಿಸಿದ್ದರು.
ಉಪಾಧ್ಯಾಯ ಟೀಕೆಗಳಿಗೆ ಉತ್ತರಿಸಿದ ರಾಜ್ಯಸಭಾ ಸದಸ್ಯ ಸಂಜಯ ರಾವುತ್ “ಸಾವರ್ಕರ್ ವಿಚಾರದಲ್ಲಿ ಮೌನವಾಗಿ ಇರುವ ಪ್ರಶ್ನೆಯೇ ಇಲ್ಲ ಮತ್ತು ಅದನ್ನು ಸಹಿಸಲಾಗದು’ ಎಂದರು. ಆರು ವರ್ಷಗಳ ಅವಧಿಯಲ್ಲಿ ಭಾರತ ರತ್ನವನ್ನು ಹಲವಾರು ಮಂದಿಗೆ ಕೇಂದ್ರ ಸರ್ಕಾರ ನೀಡಿದೆ. ಸಾವರ್ಕರ್ ಹೆಸರನ್ನೂ ಪರಿಗಣಿಸಬಹುದಿತ್ತಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.