ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ

ನ.2ಕೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ,ಸದಸ್ಯರ ಸೆಳೆಯಲು ಆಕಾಂಕ್ಷಿಗಳ ಕಸರತ್ತು

Team Udayavani, Oct 27, 2020, 1:18 PM IST

ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ

ಮಂಡ್ಯ: ಮುಂದಿನ ತಿಂಗಳು ನ.2ರಂದು ಮಂಡ್ಯ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಆಕಾಂಕ್ಷಿತರು ಸದಸ್ಯರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.

ಕಳೆದ 2 ವರ್ಷ ಮೀಸಲಾತಿ ಗೊಂದಲದಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಿದೆ. ನ.2ರೊಳಗೆ ಚುನಾವಣೆ ಮುಗಿಸುವಂತೆ ಸೂಚಿಸಿದೆ. ಈ ಹಿಂದೆ ಮೀಸಲಾತಿ ಬಗೆಹರಿಸಿ, ಅ.20ರಂದು ಚುನಾವಣೆನಿಗದಿಪಡಿಸಲಾಗಿತ್ತು. ಆದರೆ, ಹಾಸನ ನಗರಸಭೆಯ ಮೀಸಲಾತಿ ಗೊಂದಲದಿಂದ ಮತ್ತೆ ತಡೆ ನೀಡಲಾಗಿತ್ತು. ನಗರಸಭೆ ಒಟ್ಟು ಸದಸ್ಯರ ಬಲಾಬಲ 35 ಸದಸ್ಯರಿದ್ದು, ಇದರಲ್ಲಿ ಜೆಡಿಎಸ್‌ 18, ಕಾಂಗ್ರೆಸ್‌ 10, ಬಿಜೆಪಿ 2, ಪಕ್ಷೇತರರು 5 ಮಂದಿ ಇದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ.

ಜೆಡಿಎಸ್‌ಗೆ ಬಹುಮತ ಹೆಚ್ಚಳ: ಈಗಾಗಲೇ ಜೆಡಿಎಸ್‌ಗೆ ಸ್ಪಷ್ಟ ಬಹುಮತವಿದ್ದು, ಅಧಿಕಾರ ಹಿಡಿಯುವುದು ಖಚಿತವಾಗಿದೆ. ಇದರೊಂದಿಗೆ ಮೂವರು ಪಕ್ಷೇತರರುಸೇರ್ಪಡೆಗೊಳ್ಳುವ ಮೂಲಕ ಬಲ ಹೆಚ್ಚಿದೆ. ಬಹುಮತಕ್ಕೆ 18 ಸದಸ್ಯರು ಬೇಕಾಗಿದೆ. ಈಗ ಜೆಡಿಎಸ್‌ ಬತ್ತಳಿಕೆಯಲ್ಲಿ 21 ಸದಸ್ಯರ ಬಲವಿದ್ದು, ಶಾಸಕರು ಸೇರಿದಂತೆ ಆ ಸಂಖ್ಯೆ 22ಕ್ಕೇರಿಕೆಯಾಗಿದೆ.

ಆಕಾಂಕ್ಷಿತರ ಲಾಬಿ: ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಲ್ಲಿ ಹೆಚ್ಚಿನ ಆಕಾಂಕ್ಷಿತರಿದ್ದಾರೆ. 20ನೇ ವಾರ್ಡ್‌ನ ಎಚ್‌. ಎಸ್‌.ಮಂಜು, 1ನೇ ವಾರ್ಡ್‌ನ ನಾಗೇಶ್‌, 19ನೇ ವಾರ್ಡ್‌ನ ಮಂಜುಳಾಉದಯಶಂಕರ್‌, 6ನೇ ವಾರ್ಡ್ ನ ಟಿ.ರವಿ, 15ನೇ ವಾರ್ಡ್‌ನ ಮೀನಾಕ್ಷಿ ಪುಟ್ಟಸ್ವಾಮಿ ಮುಂಚೂಣಿಯಲ್ಲಿದ್ದಾರೆ. ಎಲ್ಲರೂ ಸದಸ್ಯರ ಸೆಳೆಯುವ ಪ್ರಯತ್ನದಲ್ಲಿದ್ದು, ಅಧ್ಯಕ್ಷ ಸ್ಥಾನಕ್ಕೆಇನ್ನಿಲ್ಲದ ಲಾಬಿ ನಡೆಸುತ್ತಿದ್ದಾರೆ.

ಶಾಸಕರಿಂದ ಅಭಿಪ್ರಾಯ ಸಂಗ್ರಹ: ಶಾಸಕ ಎಂ.ಶ್ರೀನಿವಾಸ್‌ಅವರು ಈಗಾಗಲೇ ಸದಸ್ಯರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.ಯಾರ ಪರ ಎಷ್ಟು ಸದಸ್ಯರಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದು, ವರಿಷ್ಠರ ಗಮನಕ್ಕೆ ತಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಘೋಷಿಸುವ ಸಾಧ್ಯತೆ ಇದೆ. 20ನೇ ವಾರ್ಡ್‌ನ ಎಚ್‌.ಎಸ್‌.ಮಂಜು ಹಾಗೂ 19ನೇ ವಾರ್ಡ್‌ನ ಮಂಜುಳಾ ಉದಯ್ ಶಂಕರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಮಹಿಳಾ ಸದಸ್ಯರ ಮೂಲಕ ಮಂಜುಳಾ ಉದಯ ಶಂಕರ್‌ ಶಾಸಕರಿಗೆ ಒತ್ತಡ ಹಾಕುತ್ತಿದ್ದಾರೆ. ಇತ್ತ ಎಚ್‌. ಎಸ್‌.ಮಂಜು ಸಹ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೇರಲು ಕಸರತ್ತು ನಡೆಸುತ್ತಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಬಹುತೇಕ ಅಧ್ಯಕ್ಷ ಸ್ಥಾನ ಖಚಿತ ಎನ್ನಲಾಗುತ್ತಿದೆ.

ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ: ಜೆಡಿಎಸ್‌ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ ಶುರುವಾಗಿದೆ. 14ನೇ ವಾರ್ಡ್‌ನ ಮಹದೇವು, 16ನೇ ವಾರ್ಡ್‌ನ ಮಂಗಳ ಪುಟ್ಟಸ್ವಾಮಿ, 13ನೇ ವಾರ್ಡ್‌ನ ಮುಜೂರ್‌ ಹೆಸರು ಕೇಳಿ ಬರುತ್ತಿದೆ. ಮೂವರಲ್ಲಿ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಕೈ ಎತ್ತುವ ಮೂಲಕ ಮತದಾನ :  ಚುನಾವಣೆಯಲ್ಲಿ ಭಾಗವಹಿಸುವ ಸದಸ್ಯರುಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಮತ ಚಲಾಯಿಸಿ, ನಂತರ ಪುಸ್ತಕದಲ್ಲಿ ಸಹಿ ಹಾಕುವಪ್ರಕ್ರಿಯೆ ಮೂಲಕ ಚುನಾವಣೆ ನಡೆಯಲಿದೆ.  ಗೈರಾಗುವ ಸದಸ್ಯರು ಹಾಗೂ ಹಾಜರಿದ್ದು ಯಾರ ಪರವೂ ಮತ ಹಾಕದಿದ್ದರೆ ಅಂಥವರನ್ನು ತಟಸ್ಥರೆಂದು ತೀರ್ಮಾನಿಸಲಾಗುತ್ತದೆ. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ.

ಅಧಿಕಾರಾವಧಿ ಹಂಚಿಕೆ ಸೂತ್ರ :  ಜೆಡಿಎಸ್‌ನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ಅಧಿಕಾರಾವಧಿ ಹಂಚಿಕೆ ಸೂತ್ರ ನಡೆಯಬಹುದು. ಆಕಾಂಕ್ಷಿತರು ಹೆಚ್ಚಾಗಿರುವುದರಿಂದ ಒಪ್ಪಂದಗಳು ಏರ್ಪಡುವ ಮಾತುಗಳು ಕೇಳಿ ಬರುತ್ತಿದೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪುರುಷ ಸದಸ್ಯರಿಗೆ ನೀಡುವ ಯೋಜನೆಯೂ ಇದೆ. ಇಲ್ಲದಿದ್ದರೆ ಅದು ಬದಲಾಗುವ ಸಾಧ್ಯತೆಯೂ ಇದ್ದು, ಮೊದಲ ಅವಧಿ ಎರಡೂ ಸ್ಥಾನಗಳಿಗೆ ಪುರುಷರಿಗೆ ನೀಡಿ, ಎರಡನೇ ಅವಧಿ ಮಹಿಳೆಯರಿಗೂ ನೀಡುವ ಒಪ್ಪಂದ ತಳ್ಳಿ ಹಾಕುವಂತಿಲ್ಲ.

ಚುನಾವಣೆ ಪ್ರಕ್ರಿಯೆ :  ನ.2ರ ಬೆಳಗ್ಗೆ 9ರಿಂದ 10ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮಧ್ಯಾಹ್ನ 12ರಿಂದ 12.15ರವರೆಗೆ ನಾಮಪತ್ರಗಳಪರಿಶೀಲನೆ ನಡೆಯಲಿದೆ. ಮಧ್ಯಾಹ್ನ 12.15ರಿಂದ 12.25ರವರೆಗೆ ನಾಮಪತ್ರಗಳನ್ನು ಕಾನೂನು ಬದ್ಧವಾಗಿ ಹಿಂಪಡೆಯಲು ಅವಕಾಶನೀಡಲಾಗಿದ್ದು, ನಂತರ ಅವಶ್ಯಕತೆ ಇದ್ದಲ್ಲಿ ಚುನಾವಣೆ ನಡೆಯಲಿದೆ.

 

ಎಚ್‌.ಶಿವರಾಜು

ಟಾಪ್ ನ್ಯೂಸ್

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.