ಶ್ರದ್ದಾ ಭಕ್ತಿಯ ಆಚರಣೆಯೊಂದಿಗೆ ಮಂಗಳೂರು ದಸರಾ ಸಮಾಪನ
ಮಂಗಳೂರು: ಮಂಗಳೂರು ದಸರಾ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದ ನವರಾತ್ರಿ ಉತ್ಸವ ಅ. 26ರಂದು ಸಮಾಪನಗೊಂಡಿತು. ಅ. 17ರಿಂದ 26ರವರೆಗೆ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಜರಗಿದ ಮಹೋತ್ಸವದಲ್ಲಿ ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕೊರೊನಾ ಮಾರ್ಗ ಸೂಚಿಯ ಪಾಲನೆಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ, ದೇವರ, ಶ್ರೀಶಾರದಾ ಮಾತೆ ಹಾಗೂ ನವದುರ್ಗೆಯರ ದರ್ಶನ ಪಡೆದರು.
ಚಿತ್ರ : ಸತೀಶ್ ಇರಾ