ಮಳೆಗೆ ನೆಲ ಕಚ್ಚಿದ ಭತ್ತದ ಫಸಲು! ನಷ್ಟದಲ್ಲಿವೆ ಸಾವಿರಾರು ರೈತ ಕುಟುಂಬಗಳು

Team Udayavani, Oct 28, 2020, 10:35 AM IST

ಮಳೆಗೆ ನೆಲ ಕಚ್ಚಿದ ಭತ್ತದ ಫಸಲು! ನಷ್ಟದಲ್ಲಿವೆ ಸಾವಿರಾರು ರೈತ ಕುಟುಂಬಗಳು

ಮುಂಡಗೋಡ: ಅಕಾಲಿಕ ಮಳೆ ಹಾಗೂ ಅತಿವೃಷ್ಟಿಯಿಂದ ತಾಲೂಕಿನ ಹಲವಾರು ಕಡೆಗಳಲ್ಲಿ ಭತ್ತದ ಬೆಳೆಗೆ ಹಾನಿಯಾಗಿ ರೈತರು ಅಪಾರ ಹಾನಿ ಸಂಭವಿಸಿದ್ದಾರೆ. ಸರಕಾರ ಪರಿಹಾರ ಘೋಷಣೆ ಮಾಡುವಂತೆ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ತಾಲೂಕಾದ್ಯಂತ ರೈತರು ಭತ್ತ, ಮೆಕ್ಕೆಜೋಳ, ಹತ್ತಿ, ಕಬ್ಬು ಬೆಳೆಯಲಾಗಿದೆ. ರೈತರು ಉಳುಮೆ, ಬೀಜ ಬಿತ್ತನೆ, ಗೊಬ್ಬರ, ಔಷ ಧ, ಕಳೆ ತೆಗೆಯುವ ಮುಂತಾದ ಬೇಸಾಯ ಚಟುವಟಿಕೆಗೆ ಸಹಕಾರಿ ಸಂಘ, ಸೊಸೈಟಿ ಮತ್ತು ಕೈಸಾಲ ಮಾಡಿಕೊಂಡು ಬೆಳೆ ಬೆಳೆದಿರುವ ರೈತರಿಗೆ ಅಕಾಲಿಕ ಮಳೆ ಮತ್ತು ಪ್ರಕೃತಿ ವಿಕೋಪದಿಂದ ಬಹುತೇಕ ಕಡೆಗಳಲ್ಲಿ ಭತ್ತದ ಬೆಳೆ ನಾಶಕ್ಕೆ ಕಾರಣವಾಗಿದೆ.

ಶೇ.65 ರಷ್ಟು ರೈತರು ತಾಲೂಕಾದ್ಯಂತ ಗಂಭೀರ ಸ್ವರೂಪದ ನಷ್ಟಕ್ಕೆ ಒಳಗಾಗಿದ್ದಾರೆ. ಮಳೆಗಾಲದ ಅತೀವೃಷ್ಟಿಯಿಂದ ಅಲ್ಪಸ್ವಲ್ಪ ಉಳಿಸಿಕೊಂಡ ಬೆಳೆಯನ್ನು ಕೆಲವರು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ, ಇನ್ನೂ ಕೆಲವರು ಕಟಾವು ಮಾಡಿ ಹಾಕಿದ್ದು ಮತ್ತೆ ಕೆಲವರು ಕಟಾವ್‌ ಮಾಡಬೇಕು ಎನ್ನುವ ಹಂತದಲ್ಲಿದ್ದಾಗ ಅಕಾಲಿಕ ದೀರ್ಘ‌ಕಾಲದ ಮಳೆಯಿಂದ ಭತ್ತದ
ಕದರುಗಳು ಉದುರಿ, ಗದ್ದೆಯಲ್ಲಿ ನೀರು ನಿಂತು ಸಂಪೂರ್ಣವಾಗಿ ಭತ್ತದ ಪೈರು ನೀರಿನಲ್ಲಿ ಮಣ್ಣಿಗೆ ಅಂಟಿಕೊಂಡಿದ್ದು, ಇಂದು ರೈತರು ಭತ್ತದ ಬೆಳೆಯ ಆಶೆಯನ್ನು ಸಂಪೂರ್ಣ ಕೈಚಲ್ಲಿ ಚಿಂತಾಕ್ರಾಂತರಾಗಿದ್ದಾರೆ. ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆ ಮಳೆಗೆ ಹಾನಿಯಾಗಿದ್ದು ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಸರಕಾರ ತಕ್ಷಣ ಪರಿಹಾರ ನೀಡಲಿ: ಕೃಷಿಯಿಂದಲೇ ಜೀವನ ನಡೆಸುವ ಸಾವಿರಾರು ಕುಟುಂಬಗಳು ಇದೀಗ ಮಳೆಯಿಂದ ಬೆಳೆ ಹಾನಿ ಮಾಡಿಕೊಂಡು ನಷ್ಟದಲ್ಲಿವೆ. ಆದ್ದರಿಂದ ಇಂತಹ ಕುಟುಂಬಗಳಿಗೆ ಸರಕಾರ ಬೆಳೆ ಹಾನಿ ಪರಿಹಾರವನ್ನು ಕೂಡಲೇ
ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಇಂತಹ ಸ್ಥಿತಿ ಎದುರಾಗಿ ದೇಶದಲ್ಲಿ ಶೇ.9.7ರಷ್ಟು ರೈತರು ಆತ್ಮಹತ್ಯೆ
ಮಾಡಿಕೊಂಡಿದ್ದು ಅದರಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿತ್ತು. ಇಂತಹ ಸ್ಥಿತಿ ಮರುಕಳಿಸದಂತೆ ಮುಂಜಾಗ್ರತೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

Cap-Brijesh-Chowta

Putturu: ವಿದೇಶಗಳಿಂದ ಅಡಿಕೆ ಆಮದು ಪರಿಣಾಮ ಅಧ್ಯಯನ: ಸಂಸದ ಕ್ಯಾ.ಬ್ರಿಜೇಶ್‌ ಚೌಟ

kunita-bhajane

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

1-weqewewqe

Yakshagana;ಇನ್ನೂ ನೂರಾರು ಸುಶ್ರಾವ್ಯ ರಾಗಗಳ ಅಳವಡಿಕೆ ಸಾಧ್ಯ: ವಿದ್ವಾನ್‌ ಗಣಪತಿ ಭಟ್‌

Comet

Comet of the Century: ಅಕ್ಟೋಬರ್‌ನಲ್ಲಿ ಧೂಮಕೇತುಗಳ ಮೆರವಣಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

Kharge (2)

Karnataka Politics; ದಲಿತ ಸಿಎಂ ಚರ್ಚೆಗೆ ಮತ್ತೆ ರೆಕ್ಕೆಪುಕ್ಕ

1-vara

Dowry; ವರದಕ್ಷಿಣೆ ಕಿರುಕುಳ: ಕುಂದಾಪುರ ಮೂಲದ ಮಹಿಳಾ ಟೆಕಿ ಆತ್ಮಹ *ತ್ಯೆ

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

AANE 2

Elephant; ರಾಜ್ಯದಲ್ಲಿ 9 ತಿಂಗಳಲ್ಲಿ 59 ಆನೆ ಸಾ*ವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

Cap-Brijesh-Chowta

Putturu: ವಿದೇಶಗಳಿಂದ ಅಡಿಕೆ ಆಮದು ಪರಿಣಾಮ ಅಧ್ಯಯನ: ಸಂಸದ ಕ್ಯಾ.ಬ್ರಿಜೇಶ್‌ ಚೌಟ

kunita-bhajane

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.