ವಚನ ಸಾಹಿತ್ಯಕ್ಕಿದೆ ವಿಶ್ವ ಮಾರ್ಗದರ್ಶನ ಶಕ್ತಿ
Team Udayavani, Oct 28, 2020, 3:48 PM IST
ಬಸವಕಲ್ಯಾಣ: ಹನ್ನೆರಡನೇ ಶತಮಾನದಲ್ಲಿ ಶರಣರು ತಮ್ಮ ಅನುಭವದ ಮೂಲಕ ರಚಿಸಿದ ವಚನ ಸಾಹಿತ್ಯಕ್ಕೆ ಇಡೀ ವಿಶ್ವಕ್ಕೆ ಮಾರ್ಗದರ್ಶನಮಾಡುವ ಶಕ್ತಿ ಇದೆ ಎಂದು ಅನುಭವ ಮಂಟಪದ ಅಧ್ಯಕ್ಷ ಶ್ರೀ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ಅಂತಾರಾಷ್ಟ್ರೀಯ ಧರ್ಮ ಕೇಂದ್ರದ ವತಿಯಿಂದ ನಗರದ ಹರಳಯ್ಯ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ 41ನೇ ಲಿಂಗವಂತ ಹುತಾತ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಲ್ಯಾಣ ಕ್ರಾಂತಿ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವರ್ಗ-ವರ್ಣ, ಜಾತಿ, ಮೇಲು-ಕೀಳು ಎಲ್ಲವನ್ನೂ ಮೀರಿಸುವ ಮಾನವೀಯ ಸಾಹಿತ್ಯವಾಗಿದೆ ಎಂದರು. ಜಾತೀಯತೆ ನಿರ್ಮೂಲನೆಗೆ ಶರಣರು ದೊಡ್ಡ ಹೋರಾಟ ಮಾಡಿ ಯಶಸ್ಸು ಸಾಧಿ ಸಿದ್ದಾರೆ. ಅವರ ಆಶಯಗಳು, ತ್ಯಾಗ-ಬಲಿದಾನ ಹುಸಿ ಹೋಗದಂತೆ ಅನ್ಯ ಆಚರಣೆ ಬಿಟ್ಟು ಬಸವತತ್ವದ ಆಚರಣೆ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಮಹಾರಾಷ್ಟ್ರದ ಜಾಲನಾ ಮೆಡಿಕಲ್ ಕಾಲೇಜಿನ ಡಾ| ಅಮರನಾಥ ಸೋಲಪುರೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜಗತ್ತಿನ ಎಲ್ಲ ಕ್ರಾಂತಿಗಳತಾಯಿ ಬೇರು ಕಲ್ಯಾಣ ಕ್ರಾಂತಿ. ಎಲ್ಲ ಕುಲ, ಜಾತಿ,ಧರ್ಮಗಳು ಸೇರಿಕೊಂಡು ಭೇದ-ಭಾವವಿಲ್ಲದೇಅಭಿವ್ಯಕ್ತಪಡಿಸಲು ಸ್ವಾತಂತ್ರÂ ಸಿಕ್ಕಿತು. ಬಸವಣ್ಣನವರ ನೇತೃತ್ವದಲ್ಲಿ ಎಲ್ಲರೂ ಕೂಡಿಕೊಂಡು ಬಹುದೊಡ್ಡ ಕ್ರಾಂತಿ ಮಾಡಿದ್ದರು ಎಂದರು.
ಹರಳಯ್ಯ ಗವಿಯ ಶ್ರೀ ಡಾ| ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿ ಮಾತನಾಡಿ, ಶರಣರ ತತ್ವಗಳು ವಿಶ್ವ ಮಾನವ ತತ್ವಗಳಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸಂಸ್ಕೃತ ಜನಾಂಗ ನಿರ್ಮಾಣವಾಗಬೇಕು. ಆಯುಧಪೂಜೆಯಾಗದೇ ಇಷ್ಟಲಿಂಗ ಯೋಗ ಮಾಡಬೇಕು ಎಂದರು. ಬಿಡಿಪಿಸಿ ಉಪಾಧ್ಯಕ್ಷ ಅಶೋಕ ನಾಗರಾಳೆ ಅಧ್ಯಕ್ಷತೆ ವಹಿಸಿದರು.
ಈ ವೇಳೆ ಬಸವರಾಜ ಬಾಲಿಕಿಲೆ, ಗುರುಪಾದಪ್ಪ ಪಾಟೀಲ, ಶ್ರೀಕಾಂತ ಮೋದಿ, ಸಾರಿಗೆ ಅಧಿ ಕಾರಿ ಸಂಜೀವಕುಮಾರ ವಾಡೇಕರ್ ಇತರರು ಇದ್ದರು. ರವೀಂದ್ರ ಕೊಳಕೂರ ಸ್ವಾಗತಿಸಿದರು. ಪ್ರೊ| ವಿಜಯಲಕೀÒ$¾ಗಡ್ಡೆ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.