ದೈವ-ದೇವರ ಅನುಗ್ರಹದಿಂದ ನೆಮ್ಮದಿಯ ಜೀವನ ಸಾಧ್ಯ’

Team Udayavani, Oct 28, 2020, 6:15 PM IST

ದೈವ-ದೇವರ ಅನುಗ್ರಹದಿಂದ ನೆಮ್ಮದಿಯ ಜೀವನ ಸಾಧ್ಯ’

ಮುಂಬಯಿ, ಅ. 27: ಮಹಾನಗರದಲ್ಲಿನ ಚರ್ಚ್‌ಗೇಟ್‌ ಎಂಎಲ್‌ಎ ಹಾಸ್ಟೇಲ್‌ನ ಕ್ಯಾಂಟಿನ್‌ನಲ್ಲಿ ಶ್ರೀ ದುರ್ಗಾಂಬಿಕಾ ಭಜನ ಮಂಡಳಿಯಲ್ಲಿ ಕ್ಯಾಂಟೀನ್‌ನ ಸಂಚಾಲಕರಾದ ಅಜಂತಾ ಕೆಟರರ್ ಜಯರಾಮ ಶೆಟ್ಟಿ ಇನ್ನ ಸಾರಥ್ಯ ಹಾಗೂ ಕ್ಯಾಂಟೀನ್‌ ಉದ್ಯೋಗಿಗಳ ಸಹಕಾರದೊಂದಿಗೆ 47ನೇ ವಾರ್ಷಿಕ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಅ. 17ರಂದು ಶ್ರೀ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ದಿನಂಪ್ರತಿ ಶ್ರೀ ದುರ್ಗಾ ಸನ್ನಿಧಿಯಲ್ಲಿ ಪೂಜೆ ಹಾಗೂ ರಾತ್ರಿ ಭಜನೆ, ಮಂಗಳಾರತಿ ನೇರವೇರಿಸಲಾಯಿತು. ಸನ್ನಿಧಾನದಲ್ಲಿ ಆರಾಧಿಸುತ್ತಿರುವ ಅಣ್ಣಪ್ಪ, ಪಂಜುರ್ಲಿ ದೈವದ ಪೂಜೆ, ಭಜನೆ, ಮಹಾಕಾಳಿ ಅಮ್ಮನವರ ಪೂಜೆ, ಮಂಗಳಾರತಿ ನಡೆಯಿತು. ದಸರಾ ಮಹೋತ್ಸವ ಪ್ರಯುಕ್ತ ಅ. 25ರಂದು ವಿಜಯ ದಶಮಿಯಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಜನೆ, ಕಳಶ ಪೂಜೆ, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಿ ಸಂಜೆ ಕಳಶ ವಿಸರ್ಜನೆ ನಡೆಯಿತು.

ಮೀರಾರೋಡ್‌ನ‌ ವಿದ್ವಾನ್‌ ಸುಬ್ರಹ್ಮಣ್ಯ ಭಟ್‌ ಪೌರೋಹಿತ್ಯದಲ್ಲಿ ಕಾರ್ತಿಕ್‌ ಭಟ್‌, ವಿಟ್ಠಲ ಶೇರಿಗಾರ್‌ ಸಹಕಾರದೊಂದಿಗೆ ಧಾರ್ಮಿಕ ಪೂಜಾಧಿಗಳನ್ನು ನೇರವೇರಿ ತೀರ್ಥ ಪ್ರಸಾದ ವಿತರಿಸಲಾಯಿತು.

ದಸರಾ ಮಹೋತ್ಸವದ ರೂವಾರಿ ಜಯರಾಮ ಶೆಟ್ಟಿ ಮಾತನಾಡಿ, ದೈವ-ದೇವರ ಕೃಪೆ ಇದ್ದರೆ ಯಾವುದೇ ಕಷ್ಟ ಬಂದರೂ ಎದುರಿಸಿ ಸಾಧನೆ ಸಿದ್ಧಿಸಬಹುದು. ಕೊರೊನಾ ಮಹಾಮಾರಿ ಜಗತ್ತಿಗೆ ಕಂಟಕವಾಗಿದ್ದು, ನಾವು ದೈವ – ದೇವರ ಆರಾಧನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ದೈವ-ದೇವರ ಅನುಗ್ರಹದಿಂದ ಮಾತ್ರ ಆರೋಗ್ಯ, ನೆಮ್ಮದಿ ಜೀವನ ಮತ್ತು ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ನವೀನ್‌ ಶೆಟ್ಟಿ, ರಾಜ ಪೂಜಾರಿ, ವಿಟ್ಠಲ್‌ ಶೇರಿಗಾರ್‌, ಪ್ರವೀಣ್‌ ಶೆಟ್ಟಿ, ಸುಭಾಷ್‌ ನಾಯಕ್‌, ಚಂದ್ರ ಸುವರ್ಣ, ಯೋಗೇಶ್‌ ಪುತ್ರನ್‌, ದಿನೇಶ್‌ ಪುತ್ರನ್‌, ಭಾಸ್ಕರ ಎನ್‌. ಮೊಗವೀರ, ಸೋಮಶೇಖರ್‌ ಬಂಗೇರ, ಜಯ ಬಂಗೇರ, ಕೃಷ್ಣ ಹರೀಶ್‌ ಖೇಡೆಕರ್‌, ಸುರೇಶ್‌ ಶೆಟ್ಟಿ, ಪ್ರಕಾಶ್‌ ಶೆಟ್ಟಿ, ರಾಜೇಶ್‌ ಶೆಟ್ಟಿ, ಪ್ರಶಾಂತ್‌ ಶೆಟ್ಟಿ, ಯೋಗೇಶ್‌ ಬಂಗೇರ, ದೀಪಕ್‌ ಶೆಟ್ಟಿ, ರಮೇಶ್‌ ಬಿಲ್ಲವ, ನವೀನ್‌ ಶೆಟ್ಟಿ ವಿಕ್ರೋಲಿ ಮತ್ತಿತರರು ಸಹಕರಿಸಿದರು.

ಟಾಪ್ ನ್ಯೂಸ್

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

4-bantwala

ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

7

Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ

4-bantwala

ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.