ವರ್ಚುವಲ್ ಕಲಾಪದಲ್ಲಿ ವಕೀಲ ಅರೆಬೆತ್ತಲೆ ದರ್ಶನ!
ಅಮೆರಿಕದ ಸುಪ್ರೀಂ ಕೋರ್ಟ್ ಯಾವುದೇ ಬಟ್ಟೆ ಧರಿಸಿಯೂ ಕಲಾಪದಲ್ಲಿ ಪಾಲ್ಗೊಳ್ಳಬಹುದು
Team Udayavani, Oct 27, 2020, 10:27 AM IST
ನವದೆಹಲಿ: ಕೊರೊನಾ ಆತಂಕ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ವರ್ಚುವಲ್ ಕಲಾಪಗಳನ್ನು ನಡೆಸುತ್ತಿದೆ. ಆದರೆ, ಸೋಮವಾರದ ಕಲಾಪವೊಂದರಲ್ಲಿ ಜಡ್ಜ್ಗಳು, ವಕೀಲರು, ಪತ್ರಕರ್ತರು ನಗೆಗಡಲಿನಲ್ಲಿ ತೇಲುವಂತಾಗಿತ್ತು! ವಿಡಿಯೊ ಕಾನ್ಫರೆನ್ಸ್ ವೇಳೆ ವಕೀಲರೊಬ್ಬರು ಅಂಗಿ ಧರಿಸದೆ ದರ್ಶನ ಕೊಟ್ಟರು! ಆದರೆ, ವಕೀಲರ ನಡೆಗೆ ಗರಂ ಆದ ನ್ಯಾ. ಇಂದು ಮಲ್ಹೋತ್ರಾ “ಅತ್ಯಂತ ಅನುಚಿತ ವರ್ತನೆ’ ಎಂದು ಅಸಮಾಧಾನ ಸೂಚಿಸಿದರು.
ಕೂಡಲೇ ನ್ಯಾ. ಡಿ.ವೈ.ಚಂದ್ರಚೂಡ್, ಸಾಲಿಸಿಟರ್ ಜನರಲ್ ಮತ್ತು ಇತರೆ ಹಿರಿಯ ವಕೀಲರಿಗೆ “ಆ ವಕೀಲರೊಂದಿಗೆ ಮಾತಾಡಿ, ಮತ್ತೆಂದೂ ಹೀಗೆ ನಡೆದುಕೊಳ್ಳದಂತೆ ಸೂಚಿಸಿ’ ಎಂದು ಆದೇಶಿಸಿದರು.
ಈ ಘಟನೆಯನ್ನು ವಿನೋದವಾಗಿ ಸ್ವೀಕರಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಅಮೆರಿಕದ ಸುಪ್ರೀಂ ಕೋರ್ಟ್ ಯಾವುದೇ ಬಟ್ಟೆ ಧರಿಸಿಯೂ ಕಲಾಪದಲ್ಲಿ ಪಾಲ್ಗೊಳ್ಳಬಹುದು’ ಎಂದಿರುವ ಬಗ್ಗೆ ಉಲ್ಲೇಖೀಸಿ, ಚಟಾಕಿ ಹಾರಿಸಿದರು.
ಆಗಿದ್ದೇನು?: ಅರೆಬೆತ್ತಲೆಯಾಗಿ ದರ್ಶನ ನೀಡಿದ ವಕೀಲರ ಮನೆಯಲ್ಲಿ ವಿಜಯ ದಶಮಿ ಪೂಜೆ ನಡೆಯುತ್ತಿತ್ತು. ಕೇವಲ ಧೋತಿ ಧರಿಸಿ, ಪೂಜಾವಸ್ತ್ರದಲ್ಲಿದ್ದಾಗ, ವಿಡಿಯೊ ಕಾನ್ಫರೆನ್ಸಿಂಗ್‌ಗೆ ಇವರನ್ನು ಸೇರಿಸಲಾಗಿತ್ತು!
ಆರ್‌ಪಿಐ ಸೇರಿದ ಪಾಯಲ್
ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಬಾಲಿವುಡ್ ನಟಿ ಪಾಯಲ್ ಘೋಷ್ ಸೋಮವಾರ ರಿಪಬ್ಲಿಕನ್ ಪಾರ್ಟಿ
ಆಫ್ ಇಂಡಿಯಾ ಅಠಾವಳೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಮನಾಥ ಅಠಾವಳೆ ಘೋಷ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಜತೆಗೆ ಪಾಯಲ್ ಘೋಷ್
ಅವರನ್ನು ಮಹಿಳಾ ವಿಭಾಗದ ಉಪಾಧ್ಯಕ್ಷರನ್ನಾಗಿಯೂ ಅಠಾವಳೆ ನೇಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪಾಯಲ್ ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟ ಕೇಂದ್ರ ಸಚಿವರಿಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.