ಮಂಡ್ಯ ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ
Team Udayavani, Oct 28, 2020, 7:30 PM IST
ಮಂಡ್ಯ: ಜಿಲ್ಲೆಯಲ್ಲಿ ಪ್ರತಿದಿನ 200ರ ಗಡಿ ದಾಟುತ್ತಿದ್ದ ಸೋಂಕಿನ ಪ್ರಕರಣಗಳ ಸಂಖ್ಯೆ ಕಳೆದ ನಾಲ್ಕೆöÊದು ದಿನಗಳಿಂದ ನಿಧಾನವಾಗಿ ಇಳಿಕೆಯಾಗುತ್ತಿದ್ದು, ಅದರಂತೆ ಬುಧವಾರ 79 ಮಂದಿಗೆ ಸೋಂಕು ತಗುಲಿದರೆ, 89 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.
ಕಳೆದ ಮೂರು ದಿನಗಳಿಂದ ಕೊರೊನಾದಿಂದ ಯಾವುದೇ ವ್ಯಕ್ತಿಯೂ ಮೃತಪಟ್ಟ ವರದಿಯಾಗಿಲ್ಲ. ಇದರಿಂದ ಜಿಲ್ಲೆಯ ಜನರಲ್ಲಿ ತುಸು ನೆಮ್ಮದಿ ತಂದಿದೆ. ಇದುವರೆಗೂ 141 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
79 ಮಂದಿಗೆ ಸೋಂಕು ದೃಢ:
ಮಂಡ್ಯ 11, ಮದ್ದೂರು 9, ಮಳವಳ್ಳಿ 9, ಪಾಂಡವಪುರ 11, ಶ್ರೀರಂಗಪಟ್ಟಣ 7, ಕೆ.ಆರ್.ಪೇಟೆ 12, ನಾಗಮಂಗಲ 18 ಹಾಗೂ ಹೊರ ಜಿಲ್ಲೆಯ ಇಬ್ಬರು ಸೇರಿದಂತೆ ಒಟ್ಟು 79 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ 16333 ಸೋಂಕಿನ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ :ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ
3398 ಮಂದಿಗೆ ಪರೀಕ್ಷೆ:
ಬುಧವಾರ ಜಿಲ್ಲೆಯಲ್ಲಿ 3398 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1186 ಮಂದಿ ರ‍್ಯಾಪಿಡ್ ಹಾಗೂ 2212 ಮಂದಿ ಆರ್‌ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗಿದೆ. ಇದುವರೆಗೂ 1,95,679 ಮಂದಿ ಪರೀಕ್ಷೆಗೊಳಪಟ್ಟಿದ್ದಾರೆ.
89 ಮಂದಿ ಚೇತರಿಕೆ:
ಮಂಡ್ಯ 22, ಮದ್ದೂರು 11, ಮಳವಳ್ಳಿ 3, ಪಾಂಡವಪುರ 6, ಶ್ರೀರಂಗಪಟ್ಟಣ 9, ಕೆ.ಆರ್.ಪೇಟೆ 11, ನಾಗಮಂಗಲ 26 ಹಾಗೂ ಹೊರಜಿಲ್ಲೆಯ ಒಬ್ಬರು ಸೇರಿದಂತೆ ಒಟ್ಟು 89 ಮಂದಿ ಬುಧವಾರ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ 15072 ಮಂದಿ ಚೇತರಿಸಿಕೊಂಡಿದ್ದಾರೆ.
1120 ಸಕ್ರಿಯ:
ಜಿಲ್ಲೆಯಲ್ಲಿ 1120 ಸಕ್ರಿಯ ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 280, ಖಾಸಗಿ ಆಸ್ಪತ್ರೆಗಳಲ್ಲಿ 107, ಕೋವಿಡ್ ಕೇರ್ ಸೆಂಟರ್‌ನಲ್ಲಿ 193 ಹಾಗೂ ಮನೆಗಳಲ್ಲಿ 540 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.