ಕೋವಿಡ್ ಓಡಿಸಲು ಸಿಎಂ ನವಸೂತ್ರ
ಚಳಿಗಾಲದಲ್ಲಿ ಕೋವಿಡ್ ತಡೆಗೆ ಕ್ರಮ ವಹಿಸಲು ಸಿಎಂ ಸೂಚನೆ
Team Udayavani, Oct 29, 2020, 12:32 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖದ ಹಾದಿಯಲ್ಲಿದ್ದರೂ ಚಳಿಗಾಲದ ಆತಂಕ ಕಾಡುತ್ತಿದೆ. ಹಬ್ಬಗಳ ಋತು ಮತ್ತು ಚಳಿಗಾಲದ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿ ಸಿಎಂ ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊರೊನಾ ನಿಯಂತ್ರಣಕ್ಕಾಗಿ ನವ ಸೂತ್ರಗಳನ್ನು ನೀಡಿದ್ದಾರೆ.
ಈ ಸಂಬಂಧ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಪತ್ರ ಬರೆದಿದ್ದಾರೆ. ನಿಯಂತ್ರಣ ಕ್ರಮಗಳ ಅನುಷ್ಠಾನ ವರದಿಯನ್ನು ಪ್ರತೀ ವಾರ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
01- ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಬೂತ್ ಮಟ್ಟದ ಸಮಿತಿ ಕ್ರಿಯಾಶೀಲಗೊಳಿಸುವುದು. ಅವುಗಳ ಕಾರ್ಯ ಪರಾಮರ್ಶಿಸುವುದು.
02- ಪ್ರಾಥಮಿಕ ಸಂಪರ್ಕಿತರು ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಗುವಂತೆ ಕ್ರಮ ವಹಿಸಬೇಕು.
03- ಸಹ ರೋಗ ಹೊಂದಿರುವ ಹಿರಿಯ ನಾಗ ರಿಕರ ಆರೋಗ್ಯದ ಬಗ್ಗೆ ನಿಗಾ.
04- ಹೋಂ ಐಸೋಲೇಶನ್ ಮತ್ತು ಹೋಮ್ ಕ್ವಾರಂಟೈನ್‌ನಲ್ಲಿ ಇರುವವರ ಆರೋಗ್ಯದ ಮೇಲೆ ನಿಗಾ.
05- ಐಸಿಯುವಿನಲ್ಲಿರುವ ರೋಗಿಗಳಿಗಾಗಿ ತಜ್ಞರೊಂದಿಗೆ ಟೆಲಿ ಐಸಿಯು ವ್ಯವಸ್ಥೆ ಬಳಕೆ ಮಾಡಿ, ಉತ್ತಮ ಚಿಕಿತ್ಸೆ ನೀಡಿ ಹೆಚ್ಚು ಸಾವು ಸಂಭವಿಸದಂತೆ ನೋಡಿಕೊಳ್ಳುವುದು,
06- 24 ತಾಸುಯೊಳಗೆ ವೈದ್ಯರು ರೋಗಿಗಳ ಡೆತ್ ಆಡಿಟ್ ವರದಿಯನ್ನು ಸಲ್ಲಿಕೆ ಮಾಡುವುದು.
07- ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ನೋಡಿಕೊಳ್ಳುವುದು. ದಂಡ ಪ್ರಮಾಣದ ಬಗ್ಗೆ ಅರಿವು ಮೂಡಿಸುವುದು.
08- ಕೊರೊನಾ ನಿಯಮ ಉಲ್ಲಂ ಸುವವರ ವಿರುದ್ಧ ಪೊಲೀಸ್ ಇಲಾಖೆ ಮೂಲಕ ಕ್ರಮ ಜರುಗಿಸುವುದು.
09- ಸ್ಥಳೀಯ ಧಾರ್ಮಿಕ ಗುರುಗಳ ಮೂಲಕ ಜನರ ಮನಸ್ಸಿನಲ್ಲಿನ ಕೊರೊನಾ ಭಯ ಹೋಗಲಾಡಿಸುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.