ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 1 ಸಾವು, 62 ಮಂದಿಗೆ ಸೋಂಕು ದೃಢ
Team Udayavani, Oct 29, 2020, 6:42 PM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗುರುವಾರ 62 ಜನರಿಗೆ ಸೋಂಕು ತಗುಲಿದೆ.
ಉಡುಪಿ ತಾಲೂಕಿನ 77 ವರ್ಷ ಪ್ರಾಯದವರೊಬ್ಬರು ಮೃತಪಟ್ಟಿದ್ದಾರೆ. ಇವರಿಗೆ ಇತರ ಆರೋಗ್ಯ ಸಮಸ್ಯೆಗಳಿದ್ದವು. ಇದುವರೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 182ಕ್ಕೇರಿದೆ.
ಸೋಂಕಿತರಲ್ಲಿ ರೋಗ ಲಕ್ಷಣವಿರುವ 19 ಪುರುಷರು, 14 ಮಹಿಳೆಯರು, ರೋಗ ಲಕ್ಷಣಗಳಿರದ 15 ಪುರುಷರು, 16 ಮಹಿಳೆಯರಿದ್ದಾರೆ. ಇವರಲ್ಲಿ ಉಡುಪಿ ತಾಲೂಕಿನ 35, ಕುಂದಾಪುರ ತಾಲೂಕಿನ 16, ಕಾರ್ಕಳದ 10 ಮಂದಿ, ಹೊರ ಜಿಲ್ಲೆಯ ಒಬ್ಬರು ಇದ್ದಾರೆ. ಒಬ್ಬರನ್ನು ಆಸ್ಪತ್ರೆಗೂ, ಉಳಿದವರನ್ನು ಹೋಮ್ ಐಸೊಲೇಶನ್‌ಗೂ ದಾಖಲಿಸಲಾಗಿದೆ. 871 ಮಂದಿ ಆಸ್ಪತ್ರೆ ಮತ್ತು ಮನೆಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಪಡುಬಿದ್ರಿ : ಸಾಲಬಾಧೆಯಿಂದ ಮನನೊಂದ ರಿಕ್ಷಾ ಚಾಲಕ ವಿಷ ಸೇವಿಸಿ ಆತ್ಮಹತ್ಯೆ
ಬುಧವಾರ 1,792 ಜನರ ಗಂಟಲುದ್ರವವನ್ನು ಸಂಗ್ರಹಿಸಲಾಗಿತ್ತು. 111 ಜನರು ಬಿಡುಗಡೆಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.