ದೇಗುಲ ನಿರ್ಮಿಸಲು ನಿಷೇಧವಿಲ್ಲ: ಪಾಕ್ ಸಮಿತಿ
Team Udayavani, Oct 30, 2020, 12:41 AM IST
ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಹಿಂದೂಗಳು ದೇವಸ್ಥಾನ ನಿರ್ಮಾಣ ಮಾಡಬಾರದು ಎಂದು ಸಂವಿಧಾನ, ಶರಿಯಾ ನಿಯಮವೇ ಇಲ್ಲ. ಹೀಗೆಂದು ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿ (ಸಿಐಐ) ಹೇಳಿದೆ. 1950ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಮತ್ತು ಲಿಯಾಖತ್ ನಡುವಿನ ಒಪ್ಪಂದದ ಅನ್ವಯ ಸಿಐಐ ಈ ತೀರ್ಮಾನ ಪ್ರಕಟಿಸಿದೆ.
ಇದಲ್ಲದೆ, ಸೈದ್‌ಪುರ್ ಎಂಬ ಗ್ರಾಮದಲ್ಲಿ ಇರುವ ಸರಕಾರಿ ಜಮೀನನ್ನು ಹಿಂದೂ ಸಮುದಾಯದವರಿಗೆ ದೇಗುಲ ನಿರ್ಮಾಣಕ್ಕೆ ಒಪ್ಪಿಸಲೂ ಒಪ್ಪಿಗೆ ಸೂಚಿಸಿದೆ. ಹಿಂದೂಗಳ ನಂಬಿಕೆಗೆ ತಕ್ಕಂತೆ ಅವರ ಧಾರ್ಮಿಕ ಸ್ಥಳಗಳಿಗೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದೂ ಅದು ಸಲಹೆ ಮಾಡಿದೆ. ಜತೆಗೆ ಪಾಕಿಸ್ತಾನದಲ್ಲಿ ವಾಸಿಸುವ ಇತರರಂತೆ ಹಿಂದೂ ಧರ್ಮೀಯರಿಗೂ ಅಂತ್ಯಸಂಸ್ಕಾರ ನಡೆಸುವ ಹಕ್ಕೂ ಇದೆ ಎಂದು ಸಮಿತಿ ಹೇಳಿದೆ. ಸಿಐಐನ 14 ಮಂದಿ ಸದಸ್ಯರು ಬುಧವಾರ ಕೈಗೊಂಡ ನಿರ್ಣಯದ ಪರವಾಗಿ ಸಹಿ ಹಾಕಿದ್ದಾರೆ ಎನ್ನುವುದು ಗಮನಾರ್ಹ. ಸೈದ್‌ಪುರದಲ್ಲಿ ದೇಗುಲ ಮತ್ತು ಸ್ಮಶಾನ ನಿರ್ಮಾಣಕ್ಕೆ ಪಾಕ್ ಸರಕಾರ ಸೂಕ್ತ ನೆರವು ನೀಡಬೇಕೆಂದೂ ಅದು ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.