ಕೆಎಸ್ಎ ಫುಟ್ಬಾಲ್ ಆಟಗಾರ ಮೈದಾನದಲ್ಲೇ ಸಾವು
Team Udayavani, Oct 30, 2020, 1:19 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಇದರ ಪ್ರತಿಭಾವಂತ ಫುಟ್ಬಾಲ್ ಆಟಗಾರ, ಮಹೀಮ್ ನಿವಾಸಿಯಾಗಿರುವ ತುಳು- ಕನ್ನಡಿಗ ಸ್ಕ್ವಾಟ್ ಡಿ’ಸೋಜಾ (26) ಅವರು ಫುಟ್ಬಾಲ್ ಆಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿ ಮೈದಾನದಲ್ಲೇ ಸಾವನ್ನಪ್ಪಿರುವ ಘಟನೆ ದಾದರ್ನಲ್ಲಿ ಬುಧವಾರ ಸಂಭವಿಸಿದೆ.
ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ನ ಫುಟ್ಬಾಲ್ ತಂಡದ ಆಟಗಾರರಾಗಿದ್ದ ಅವರು ದಾದರ್ನ ಟರ್ಫ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾಟವೊಂದರಲ್ಲಿ ಆಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ತತ್ಕ್ಷಣ ಸ್ಥಳೀಯ ಹಿಂದೂಜಾ ಆಸ್ಪತ್ರೆಗೆ ದಾಖಲಿಸ ಲಾಯಿತಾದರೂ ಪ್ರಯೋಜನ ಕಾಣಲಿಲ್ಲ.
ಟ್ರೋಫಿ ಜಯಿಸಿದ್ದರು
ಮೂರು-ನಾಲ್ಕು ದಿನಗಳ ಹಿಂದೆ ಇಲೈಟ್ ಡಿವಿಜನ್ ಫುಟ್ಬಾಲ್ ಟ್ರೋಫಿಯನ್ನು ಜಯಿಸಿದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ತಂಡದಲ್ಲಿ ಇವರು ಆಟವಾಡಿದ್ದರು. ಈ ತಂಡದ ಗೆಲುವಿನಲ್ಲಿ ಅವರ ಬಹುಮುಖ್ಯ ಪಾಲಿತ್ತು. ಮೂಲತಃ ಮಂಗಳೂರಿನವರಾದ ಮೃತರು ತಾಯಿ, ಸಹೋದರನನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.