ನಿರ್ಮಾಣದ ಕನಸು ಕಸ್ತೂರಿ ಮಾತು
ತಮಿಳು ರೀಮೇಕ್‌ಗೆ ರಚಿತಾ ಫಿದಾ
Team Udayavani, Oct 30, 2020, 1:21 PM IST
“ನಟಿಯಾಗಿ ಈ ಸಿನಿಮಾದ ಕಥೆ ನನಗೆ ತುಂಬ ಇಷ್ಟವಾಯ್ತು. ನಾನೇಈ ಕಥೆಯನ್ನ ಇಟ್ಟುಕೊಂಡು ಸಿನಿಮಾ ಪ್ರೊಡ್ನೂಸ್ ಮಾಡಬಹುದಾ ಅಂಥ ಯೋಚನೆ ಕೂಡ ಮಾಡಿದ್ದೆ. ಆದ್ರೆ ಒಂದು ಸಿನಿಮಾ ಪ್ರೊಡ್ಯೂಸ್ ಮಾಡೋದಕ್ಕೆ ಎಲ್ಲ ಕೂಡಿ ಬರಬೇಕಲ್ಲ . ಸದ್ಯದ ಮಟ್ಟಿಗೆ ಕೆಲ ಸಂಗತಿಗಳು ಕೂಡಿ ಬರದಿದ್ದರಿಂದ, ಈ ಸಿನಿಮಾ ಪ್ರೊಡ್ಯೂಸ್ ಮಾಡುವ ಯೋಚನೆ ಕೈ ಬಿಡಬೇಕಾಯ್ತು. ಸದ್ಯಕ್ಕೆ ಈ ಸಿನಿಮಾದ ಲೀಡ್‌ನಲ್ಲಿ ಅಭಿನಯಿಸುತ್ತಿದ್ದೇನೆ…’
ಅಂದಹಾಗೆ, ನಟಿ ರಚಿತಾ ರಾಮ್ ಈ ಮಾತನ್ನು ಹೇಳಿದ್ದು ತಮ್ಮ ಮುಂಬರುವ ಹೊಸ ಚಿತ್ರ “ಪಂಕಜ ಕಸ್ತೂರಿ’ ಬಗ್ಗೆ. ಇತ್ತೀಚೆಗಷ್ಟೇ ರಚಿತಾ ರಾಮ್ ಅಭಿನಯದ ಹೊಸಚಿತ್ರ “ಪಂಕಜ ಕಸ್ತೂರಿ’ ಟೈಟಲ್ ಅನ್ನು ಚಿತ್ರತಂಡ ಅನೌನ್ಸ್ ಮಾಡಿತ್ತು. ತಮಿಳಿನ ಸೂಪರ್ ಹಿಟ್ ಚಿತ್ರ “ಕೊಲಮಾವು ಕೋಕಿಲ’ಚಿತ್ರದ ಕನ್ನಡ ರಿಮೇಕ್ ಆಗಿರುವ “ಪಂಕಜ ಕಸ್ತೂರಿ’ ಚಿತ್ರದಲ್ಲಿ ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನಲ್ಲಿ ನಯನಾ ತಾರಾ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ರಚಿತಾ ರಾಮ್ ಮಾಡುತ್ತಿದ್ದಾರೆ.ತಮಿಳಿನ ಈ ಚಿತ್ರವನ್ನು ನೋಡಿ ಥ್ರಿಲ್ ಆಗಿದ್ದ ರಚಿತಾ ಕನ್ನಡದಲ್ಲೂ ಇಂಥದ್ದೊಂದು ಚಿತ್ರ ನಿರ್ಮಿಸಿ, ಪಾತ್ರ ಮಾಡುವ ಆಸೆಯಾಗಿತ್ತಂತೆ. ಅದೇ ವೇಳೆ ನಿರ್ದೇಶಕ ಮಯೂರ ರಾಘವೇಂದ್ರ “ಕೊಲಮಾವು ಕೋಕಿಲ’ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ಯೋಜನೆಯನ್ನು ರಚಿತಾ ಮುಂದಿಟ್ಟಾಗ ರಚಿತಾ ಕೂಡ ಖುಷಿಯಿಂದ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡುವ ರಚಿತಾ, “ಇಂಥ ಕ್ಯಾರೆಕ್ಟರ್ ಮಾಡಲು ಅವಕಾಶ ಸಿಗೋದು ಅಪರೂಪ. ನಮ್ಮ ಪರ್ಫಾರ್ಮೆನ್ಸ್‌ಗೆ ಇಂಥ ಸಿನಿಮಾಗಳಲ್ಲಿ ಸಾಕಷ್ಟು ಸ್ಕೋಪ್ ಇರುತ್ತದೆ. ಸಾಮಾನ್ಯ ಹುಡುಗಿಯೊಬ್ಬಳು ತನ್ನ ಕುಟುಂಬವನ್ನು ಶತ್ರುಗಳಿಂದ ಹೇಗೆರಕ್ಷಿಸುತ್ತಾಳೆ ಅನ್ನೋದು ಸಿನಿಮಾದ ಕಥೆಯ ಒಂದು ಎಳೆ. ಆದರೆ ಅದರ ಪ್ರಸೆಂಟೇಷನ್ ನೋಡುಗರನ್ನುಹಿಡಿದಿಡುತ್ತದೆ. ಮೂಲ ಸಿನಿಮಾದ ಕಥೆಯನ್ನ ಇಟ್ಟುಕೊಂಡು ಅದನ್ನ ಕನ್ನಡ ನೇಟಿವಿಟಿಗೆ ತಕ್ಕಂತೆಒಂದಷ್ಟು ಬದಲಾವಣೆ ಮಾಡಿಕೊಂಡು ಇಲ್ಲಿನ ಆಡಿಯನ್ಸ್ ಮುಂದೆ ತರುತ್ತಿದ್ದೇವೆ’ ಎನ್ನುತ್ತಾರೆ.
ಮೊದಲು ಈ ಸಿನಿಮಾವನ್ನ ನಿರ್ಮಿಸುವ ಯೋಚನೆ ರಚಿತಾ ಮನಸ್ಸಿನಲ್ಲಿ ಬಂದಿತಾದರೂ, ನಿರ್ಮಾಣಕ್ಕೆಬೇಕಾದ ಇತರ ಸಂಗತಿಗಳೆಲ್ಲವೂ ಕೂಡಿ ಬರದಿದ್ದರಿಂದ, ರಚಿತಾ ತಮ್ಮ ಯೋಚನೆಯಿಂದ ಹಿಂದೆ ಸರಿಯಬೇಕಾಯಿತು. ಈ ಬಗ್ಗೆ ರಚಿತಾಗೆ ಕೊಂಚ ಬೇಸರವಿದ್ದರೂ, ಮತ್ತೂಂದೆಡೆ ಒಂದೊಳ್ಳೆ ಪಾತ್ರ ತನ್ನದಾಯಿತಲ್ಲ ಎಂಬ ಸಮಾಧಾನವೂ ಇದೆ. “ಮುಂದೆ ಇಂಥದ್ದೇ ಸಬ್ಜೆಕ್ಟ್ ಸಿಕ್ಕರೆ ಖಂಡಿತ ಸಿನಿಮಾ ಪ್ರೊಡ್ಯೂಸ್ ಮಾಡ್ತೀನಿ. ಆದ್ರೆ ಇಂಥ ಸಬ್ಜೆಕ್ಟ್ ಸಿಗೋದು ತುಂಬ ಅಪರೂಪ’ ಎನ್ನುತ್ತಾರೆ ರಚಿತಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.