ಚಿಕ್ಕಬಳ್ಳಾಪುರ ನಗರಸಭೆ: ಆನಂದ್‍ರೆಡ್ಡಿ ಅಧ್ಯಕ್ಷ , ವೀಣಾ ರಾಮು ಉಪಾಧ್ಯಕ್ಷರಾಗಿ ಆಯ್ಕೆ
Team Udayavani, Oct 30, 2020, 7:32 PM IST
ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ ಚಿಕ್ಕಬಳ್ಳಾಪುರ ನಗರಸಭೆಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ ಡಿ.ಎಸ್. ಆನಂದ್‍ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್‍ನ ವೀಣಾ ರಾಮು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ 23 ನೇ ವಾರ್ಡಿನ ಡಿ.ಎಸ್. ಆನಂದ್‍ರೆಡ್ಡಿ ಹಾಗೂ 24 ನೇ ವಾರ್ಡಿನ ಕಾಂಗ್ರೆಸ್‍ನ ಅಂಬಿಕಾ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನ ಬಿ.ಸಿ.ಎಂ.ಎ. ವರ್ಗಕ್ಕೆ ಮೀಸಲಾಗಿದ್ದರಿಂದ 25 ನೇ ವಾರ್ಡಿನ ಜೆಡಿಎಸ್‍ನ ವೀಣಾರಾಮು ಅವರು ಏಕೈಕ ನಾಮಪತ್ರ ಸಲ್ಲಿಸಿದರು.
ಚುನಾವಣೆಯಲ್ಲಿ ಪಕ್ಷೇತರ ಸದಸ್ಯ ಡಿ.ಎಸ್. ಆನಂದ್‍ರೆಡ್ಡಿ ಪರವಾಗಿ 22 ಮತಗಳು ಹಾಗೂ ಕಾಂಗ್ರೆಸ್‍ನ ಅಂಬಿಕಾ ಅವರಿಗೆ 9 ಮತಗಳು ಲಭಿಸಿದ್ದರಿಂದ ಚುನಾವಣಾಧಿಕಾರಿ ರಘುನಂದ್ ಅವರು ನಗರಸಭೆಯ ನೂತನ ಅಧ್ಯಕ್ಷರಾಗಿ ಡಿ.ಎಸ್.ಆನಂದ್‍ರೆಡ್ಡಿ ಅವರು ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು ಮತ್ತೊಂದೆಡೆ ಉಪಾಧ್ಯಕ್ಷ ಸ್ಥಾನಕ್ಕೆ ವೀಣಾರಾಮು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದರು.
ತೀವ್ರ ಜಿದ್ದಾ ಜಿದ್ದಿನ ಕಣವಾಗಿದ್ದ ಚಿಕ್ಕಬಳ್ಳಾಪುರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಹೈಡ್ರಾಮಾಗಳು ನಡೆದಿದ್ದು ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯ ಡಿ.ಎಸ್.ಆನಂದ್‍ರೆಡ್ಡಿ ಅವರ ಪರವಾಗಿ ಮತದಾನ ಮಾಡುವ ಮಾಡುವ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿದರು ಇದೇ ವೇಳೆಯಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹಾಗೂ 19 ನಗರಸಭಾ ಸದಸ್ಯರು ಬೆಂಬಲ ಸೂಚಿಸಿದರು ಇದರಿಂದ ನಿರೀಕ್ಷೆಗಿಂತಲೂ ಹೆಚ್ಚಾಗಿ ಮತಗಳನ್ನು ಪಡೆದು ಡಿ.ಎಸ್.ಆನಂದ್‍ರೆಡ್ಡಿ ನಗರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣೆಯ ಫಲಿತಾಂಶ ಪ್ರಕಟ ಆಗುತ್ತಿದ್ದಂತೆಯೇ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನಗರಸಭೆಯ ಮುಂಭಾಗ ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು. ನಗರಸಭೆಯ ನೂತನ ಅಧ್ಯಕ್ಷ ಡಿ.ಎಸ್.ಆನಂದ್‍ರೆಡ್ಡಿ ಅವರು ಬಿಜೆಪಿಯ ಶಾಲು ಹಾಕಿ ಗಮನಸೆಳೆದರು ಕಾರ್ಯಕರ್ತರು ಅವರನ್ನು ಹೆಗಲ ಮೇಲೆ ಎತ್ತುಕೊಂಡು ಕುಣಿದು ಕುಪ್ಪಳಿಸಿದರು.
ಚುನಾವಣೆಯ ಫಲಿತಾಂಶದ ನಂತರ ಹೊರ ಬಂದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಅವರ ಪರವಾಗಿ ಜೈಕಾರದ ಘೋಷಣೆಗಳನ್ನು ಕೂಗಿದ ಬಿಜೆಪಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು ಇದೇ ವೇಳೆಯಲ್ಲಿ ತೆರೆದ ಕಾರಿಗೇರಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಅಭಿಮಾನಿಗಳಿಗೆ ಬಿಜೆಪಿ ಬಾವುಟ ಹಿಡಿದು ಅಭಿನಂದಿಸಿದರು.
3 ಕಾಂಗ್ರೆಸ್ ಸದಸ್ಯರು ಗೈರು: ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅನೇಕ ರೀತಿಯ ನಾಟಿಕೀಯ ಬೆಳವಣಿಗೆಗಳು ಕಂಡು ಬಂದವು ಕಾಂಗ್ರೆಸ್ ಪಕ್ಷ ಬಹುಮತ ಇದ್ದರು ಸಹ ಅಧಿಕಾರವನ್ನು ಕಳೆದುಕೊಂಡು ಮುಖಭಂಗವನ್ನು ಅನುಭವಿಸುವಂತಾಯಿತು ಇದರ ಜೊತೆಗೆ ಕಾಂಗ್ರೆಸ್ ಪಕ್ಷದ 4 ಮಂದಿ ಸದಸ್ಯರು ಪಕ್ಷೇತರ ಸದಸ್ಯನಿಗೆ ಬೆಂಬಲ ಸೂಚಿಸಿ ಅಚ್ಚರಿ ವ್ಯಕ್ತಪಡಿಸಿದರಲ್ಲದೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‍ನ 3 ಮಂದಿ ಸದಸ್ಯರು ಗೈರು ಹಾಜರಾಗುವ ಮೂಲಕ ಗಮನ ಸೆಳೆದರು.
ಜೆಡಿಎಸ್‍ಗೆ ಒಲಿದ ಅದೃಷ್ಠ: ರಾಜಕೀಯದಲ್ಲಿ ಯಾರು ಯಾರಿಗೂ ಶತ್ರು ಅಲ್ಲ ಮಿತ್ರನೂ ಅಲ್ಲ ಎಂಬುದು ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಾಕ್ಷಿಯಾಯಿತು ಕೇವಲ 2 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಪಕ್ಷದ ವೀಣಾರಾಮು ಅವರಿಗೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯರಿಗೆ ಅಧ್ಯಕ್ಷ ಸ್ಥಾನಕ್ಕೇರಲು ಬೆಂಬಲಿಸಿ ಸುಲುಭವಾಗಿ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡರು ನಗರಸಭೆಯ ಚುನಾವಣೆಯಲ್ಲಿ ಕೇವಲ ಜೆಡಿಎಸ್ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬೆಂಬಲಿಸಿ ಹೊಸ ಪದ್ದತಿಗೆ ನಾಂದಿಹಾಡಿದರು.
ನಿಷೇದಾಜ್ಞೆ ಉಲಂಘನೆ: ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಬಾರದೆಂದು ತಾಲೂಕು ದಂಡಾಧಿಕಾರಿಗಳು ನಗರಸಭೆಯ ಸುತ್ತಮುತ್ತಲಿನ 2 ಕಿಮಿ ಪ್ರದೇಶದಲ್ಲಿ ನಿಷೇದಾಜ್ಞೆ ಆದೇಶವನ್ನು ಜಾರಿಗೊಳಿಸಿದರು ಆದರೇ ಚುನಾವಣೆಯ ವೇಳೆಯಲ್ಲಿ ನಿಷೇದಾಜ್ಞೆಯನ್ನು ಸ್ಪಷ್ಟವಾಗಿ ಉಲಂಘಿಸಿದ್ದು ವಿಶೇಷವಾಗಿತ್ತು.
ಸಾಮಾಜಿಕ ಅಂತರಕ್ಕೆ ತಿಲಾಂಜಲಿ: ನಗರಸಭೆಯ ಚುನಾವಣೆಯ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಂಭ್ರಮದ ಭರದಲ್ಲಿ ಸಾಮಾಜಿಕ ಅಂತರವನ್ನು ಮರೆತುಬಿಟ್ಟರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ತಮ್ಮ ತಮ್ಮ ಪಕ್ಷಗಳ ಬಾವುಟಗಳನ್ನು ಹಿಡಿದು ಸಂಭ್ರಮಿಸಿದರು.
ಪೋಲಿಸರ ಸರ್ಪಗಾವಲು: ಚುನಾವಣೆ ವೇಳೆಯಲ್ಲಿ ಹೈಡ್ರಾಮಗಳು ಮತ್ತು ನಾಟಿಕೀಯ ಬೆಳವಣಿಗೆಗಳು ನಡೆಯಬಹುದೆಂದು ಶಂಕಿಸಿ ಒಂದು ಕಡೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಮತ್ತೊಂದಡೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಹೆಜ್ಜೆಹೆಜ್ಜೆಗೂ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.