ಪುಲ್ವಾಮಾ ದಾಳಿಯಲ್ಲಿ ಇಮ್ರಾನ್ ಪಾತ್ರ ; ಕಠಿನ ಕ್ರಮ ಅಗತ್ಯ
Team Udayavani, Oct 31, 2020, 6:19 AM IST
ಉಗ್ರ ಸಂಘಟನೆಗಳಿಗೆ ಹಣಕಾಸು ನೆರವನ್ನು ತಡೆಯಲು ರಚಿತವಾಗಿರುವ ಎಫ್ಎಟಿಎಫ್ನ ಬೂದುಪಟ್ಟಿಯಲ್ಲಿಯೇ ಇರುವ ಪಾಕಿಸ್ಥಾನವನ್ನು, ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಭಾರತದ ಧ್ವನಿಗೆ ಈಗ ಬಲ ಸಿಗಲಿದೆ.
ಪುಲ್ವಾಮಾದಲ್ಲಿ ಭಾರತದ 40 ಯೋಧರನ್ನು ಹತ್ಯೆಗೈದಿದ್ದು ತಾನೇ ಎಂದು ಪಾಕ್ ಘೋಷಿಸಿರುವುದಷ್ಟೇ ಅಲ್ಲದೇ, ಇದನ್ನು ಇಮ್ರಾನ್ ಸರಕಾರದ ದೊಡ್ಡ ಸಾಧನೆ ಎಂದು ಹೇಳಿದ್ದಾರೆ ಪಾಕಿಸ್ಥಾನದ ಸಚಿವ ಫವಾದ್ ಚೌಧರಿ.
ಇಷ್ಟು ಸಮಯದಿಂದ ಪುಲ್ವಾಮಾ ದಾಳಿಗೂ ತಮಗೂ ಸಂಬಂಧವೇ ಇಲ್ಲ ಎಂದು ಹೇಳುತ್ತಾ ಬರುತ್ತಿದ್ದ ಪಾಕ್, ಈಗ ಬಹಿರಂಗವಾಗಿಯೇ ತನ್ನ ದುಷ್ಕೃತ್ಯವನ್ನು ಒಪ್ಪಿಕೊಂಡಿದೆ. ಕಳೆದ ವರ್ಷ ಅಮೆರಿಕ ಪ್ರವಾಸದಲ್ಲಿದ್ದ ಇಮ್ರಾನ್ ಖಾನ್, “”ಪುಲ್ವಾಮಾ ದಾಳಿಗೆ ಅನಗತ್ಯವಾಗಿ ಪಾಕಿಸ್ಥಾನವನ್ನು ದೂರುತ್ತದೆ ಭಾರತ. ಈ ಕೃತ್ಯ ಎಸಗಿದ್ದು, ಭಾರತದ ಸೇನೆಯಿಂದ ನೊಂದ ಸ್ಥಳೀಯ ಕಾಶ್ಮೀರಿ ಯುವಕ” ಎಂದಿದ್ದರು.
ಈ ದಾಳಿಯ ಹೊಣೆಯನ್ನು ಪಾಕಿಸ್ಥಾನ ಮೂಲದ ಜೈಶ್-ಎ- ಮೊಹಮ್ಮದ್ ಹೊತ್ತಿದೆಯಲ್ಲ ಎಂಬ ಪ್ರಶ್ನೆ ಎದುರಾದಾಗ, ಜೈಶ್ ಭಾರತದಲ್ಲೂ ಕಾರ್ಯಾಚರಿಸುತ್ತದೆ ಎಂದು ಜಾರಿಕೊಂಡಿದ್ದರು.
ಈಗ ಖುದ್ದು ಅವರ ಸರಕಾರದ ಸಚಿವರೇ, ಈ ದುಷ್ಕೃತ್ಯದಲ್ಲಿ ಪಾಕ್‌ನದ್ದೇ ಕೈವಾಡವಿದೆ ಎಂದು ಒಪ್ಪಿಕೊಂಡಿ ದ್ದಾರೆ. ಈ ಬಹಿರಂಗ ಒಪ್ಪಿಗೆ ಪಾಕಿಸ್ಥಾನಕ್ಕೆ ನಿಸ್ಸಂಶಯವಾಗಿಯೂ ಕಗ್ಗಂಟಾಗಿ ಬದಲಾಗಲಿದೆ. ಉಗ್ರ ಸಂಘಟನೆಗಳಿಗೆ ಹಣಕಾಸು ನೆರವನ್ನು ತಡೆಯಲು ರಚಿತವಾಗಿರುವ ಎಫ್ಎಟಿಎಫ್ನ ಬೂದುಪಟ್ಟಿಯಲ್ಲಿಯೇ ಇರುವ ಪಾಕಿಸ್ಥಾನವನ್ನು, ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಭಾರತದ ಧ್ವನಿಗೆ ಈಗ ಬಲ ಸಿಗಲಿದೆ. ಈ ಕಾರಣಕ್ಕಾಗಿಯೇ ಈಗ ತಮ್ಮ ವರಸೆ ಬದಲಿಸಿರುವ ಫವಾದ್ ಚೌಧರಿ, ತಮ್ಮ ಮಾತನ್ನು ಭಾರತೀಯ ಮಾಧ್ಯಮಗಳು ತಿರುಚುತ್ತಿವೆ ಎನ್ನುತ್ತಿದ್ದಾರೆ.
ಇಮ್ರಾನ್ ಸರಕಾರವು ಜಗತ್ತಿಗೆ ಶಾಂತಿ ಪಾಠ ಮಾಡುವ ನೆಪದಲ್ಲಿ ತನ್ನ ನಿಜ ಬಣ್ಣವನ್ನು ಮುಚ್ಚಿಡಲು ಪ್ರಯತ್ನಿಸುತ್ತಲೇ ಬಂದಿದೆ. ಸತ್ಯವೇನೆಂದರೆ, ಕಳೆದೆರಡು ದಶಕಗಳಲ್ಲಿನ ಪಾಕಿಸ್ಥಾನಿ ಆಡಳಿತದಲ್ಲೇ ಇಮ್ರಾನ್‌ರಷ್ಟು ಧರ್ಮಾಂಧ, ಉಗ್ರ ಪರ, “ಪಾಕ್ ಸೇನೆಯ ಕೈಗೊಂಬೆ’ ಇನ್ಯಾರೂ ಇರಲಿಲ್ಲ ಎಂದು ರಕ್ಷಣ ಪರಿಣತರು ಹೇಳುತ್ತಾರೆ. ವಿರೋಧಾಭಾಸವೆಂದರೆ ಜೈಶ್-ಎ-ಮೊಹಮ್ಮದ್, ಲಷ್ಕರ್‌ನಂಥ ಉಗ್ರ ಸಂಘಟನೆಗಳನ್ನು ನಿರಂತರವಾಗಿ ಸಲಹುತ್ತಾ, ಭಾರತ ವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುತ್ತಲೇ ಬಂದಿರುವ ಪಾಕ್ ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಗೆ ಇತ್ತೀಚೆಗಷ್ಟೇ ಮರು ಆಯ್ಕೆಯಾಗಿರುವುದು. ಕಣಕಣದಲ್ಲೂ ಭಾರತದ ವಿರುದ್ಧ ದ್ವೇಷವನ್ನು ತುಂಬಿಕೊಂಡು, ಧರ್ಮಾಂಧ ಉಗ್ರರ ಮೂಲಕ ಭಾರತೀಯ ಪಡೆಗಳ ಮೇಲೆ ಸಂಚಿನಿಂದ ದಾಳಿ ನಡೆಸುವ ಪಾಕಿಸ್ಥಾನದ ಹೀನ ಮನಃಸ್ಥಿತಿಗೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲವಾದ ಪೆಟ್ಟು ನೀಡಲೇಬೇಕಿದೆ. ಫವಾದ್ ಚೌಧರಿ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್ ಅನ್ನು ಕಟ್ಟಿಹಾಕುವ ಪ್ರಯತ್ನ ವೇಗಪಡೆಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.