ರಾಷ್ಟ್ರ ರಾಜಧಾನಿಯಲ್ಲಿ 58 ವರ್ಷಗಳಲ್ಲೇ ಅತಿ ಹೆಚ್ಚು ಚಳಿ!
Team Udayavani, Nov 1, 2020, 5:45 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ 58 ವರ್ಷಗಳಲ್ಲೇ “ಅತಿಹೆಚ್ಚು ಚಳಿಯ ಅಕ್ಟೋಬರ್’ಗೆ ಸಾಕ್ಷಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
1962ರ ಅಕ್ಟೋಬರ್ನಲ್ಲಿ ಕನಿಷ್ಠ ಸರಾಸರಿ 16.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 58 ವರ್ಷಗಳ ಬಳಿಕ ಈ ವರ್ಷದ ಅಕ್ಟೋಬರ್ನಲ್ಲಿ ಕನಿಷ್ಠ ಸರಾಸರಿ 17.2 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ದಿಲ್ಲಿ ಮೈಯೊಡ್ಡಿದೆ.
ಇಷ್ಟು ವರ್ಷ ಸರಾಸರಿ ತಾಪಮಾನ 19.1 ಡಿ.ಸೆ. ಉಷ್ಣಾಂಶ ವರದಿಯಾಗುತ್ತಿತ್ತು. ಗುರುವಾರ ದಾಖಲೆಯೆಂಬಂತೆ 12.5 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು 26 ವರ್ಷಗಳಲ್ಲೇ ಅತಿ ಕಡಿಮೆ. 1994ರಲ್ಲಿ ದಾಖಲಾಗಿದ್ದ 12.3 ಡಿಗ್ರಿ ಸೆಲ್ಸಿಯಸ್ ದೆಹಲಿಯ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಕನಿಷ್ಠ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.