ಭತ್ತ ಕಟಾವು ಯಂತ್ರಗಳ ದುಬಾರಿ ಬಾಡಿಗೆ ! ಸರಕಾರದ ನಿಯಂತ್ರಣ ಏಕಿಲ್ಲ?
Team Udayavani, Nov 1, 2020, 7:20 AM IST
ಕೋಟ: ಕರಾವಳಿಯಲ್ಲಿ ಮಳೆಯ ಪ್ರಮಾಣ ತಣ್ಣಗಾಗಿದ್ದು ಭತ್ತದ ಕಟಾವು ಚುರುಕು ಪಡೆದಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸಿದ ಕಟಾವು ಯಂತ್ರಗಳಿಗೆ ಕೆಲಸ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಕಟಾವು ಮತ್ತಷ್ಟು ವೇಗ ಪಡೆಯಲಿದೆ.
ಸರಕಾರಿ ಬಾಡಿಗೆ ಸೇವಾ ಕೇಂದ್ರಗಳ ಮೂಲಕ ಕಾರ್ಯನಿರ್ವಹಿಸುವ ಯಂತ್ರಗಳು ಗಂಟೆಗೆ 1,800 ರೂ. ದರದಲ್ಲಿ ಕಟಾವು ನಡೆಸುತ್ತಿವೆ. ಆದರೆ ಈ ಯಂತ್ರಗಳ ಸಂಖ್ಯೆ ಸಾಕಷ್ಟು ಸೀಮಿತವಾಗಿವೆ. ಹೀಗಾಗಿ ಹೆಚ್ಚಿನ ಕಟಾವು ನಡೆಸಲು ಅಸಾಧ್ಯವಾಗಿದ್ದು ಖಾಸಗಿ ಯಂತ್ರಗಳನ್ನು ಅವಲಂಬಿಸಬೇಕಾಗಿದೆ. ಆದರೆ ಖಾಸಗಿ ಯಂತ್ರಗಳು ಬಾಡಿಗೆ ಸೇವಾ ಕೇಂದ್ರದ ದರದಲ್ಲಿ ಕಟಾವು ನಡೆಸು ವಂತೆ ಮಾರ್ಗದರ್ಶನ ನೀಡಿದರೂ ಅದನ್ನು ಪರಿಗಣಿಸದೆ ಗಂಟೆಗೆ 2000-2300, 2400ರೂ ತನಕ ಮೊತ್ತವನ್ನು ವಿಧಿಸುತ್ತಿರುವುದು ಹೊರೆಯಾಗುತ್ತಿದೆ. ಹೀಗಾಗಿ ಬಾಡಿಗೆ ನಿಯಂತ್ರಣಕ್ಕೆ ಆಡಳಿತ ವ್ಯವಸ್ಥೆ ಸೂಕ್ತ ಕ್ರಮಕೈಗೊಳ್ಳುವ ಅಗತ್ಯವಿದೆ ಎನ್ನುವುದು ರೈತರ ಬೇಡಿಕೆಯಾಗಿದೆ.
ಹೊರ ಜಿಲ್ಲೆಯಿಂದ ಕಡಿಮೆ ದರಕ್ಕೆ ಯಂತ್ರಗಳನ್ನು ತರಿಸಿಕೊಂಡು ಅವುಗಳಿಗೆ ತಮ್ಮದೇ ಆದ ಬಾಡಿಗೆಯನ್ನು ಫಿಕ್ಸ್ ಮಾಡಿ ಕಮಿಷನ್ ಪಡೆಯುವ ಮಧ್ಯವರ್ತಿಗಳ ಹಾವಳಿ ಬಾಡಿಗೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಒಂದು ವೇಳೆ ರೈತರು ಸಂಘಟಿತರಾಗಿ ಹೋರಾಟ ನಡೆಸಿದಲ್ಲಿ ಬಾಡಿಗೆ ದರದಲ್ಲಿ ಸ್ವಲ್ಪಮಟ್ಟಿನ ಇಳಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ ;ಹೊಟೇಲ್‌ನಲ್ಲಿ “ಗುಂಡು ಹಾರಾಟ’: ಮೂವರಿಗಾಗಿ ಶೋಧ
ದೂರು ಬಂದರೆ ಪರಿಶೀಲಿಸಿ ಕ್ರಮ
ಖಾಸಗಿ ಭತ್ತ ಕಟಾವು ಯಂತ್ರಗಳು ದುಬಾರಿ ಬಾಡಿಗೆ ಪಡೆಯುತ್ತಿರುವ ಕುರಿತು ದೂರುಗಳು ಬಂದಿಲ್ಲ. ರೈತರಿಂದ ದೂರುಗಳು ಬಂದರೆ ಕಾನೂನಿನಲ್ಲಿರುವ ಅವಕಾಶಗಳು° ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಜಿ. ಜಗದೀಶ್, ಡಿಸಿ, ಉಡುಪಿ
ದಾವಣಗೆರೆ ಮಾದರಿ ಸೂಕ್ತ
ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲೂ ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲಕರು ಪ್ರತಿ ಗಂಟೆಗೆ 2,500 ರೂ.ಗಳಿಂದ 3,000 ಗಳವರೆಗೆ ಬಾಡಿಗೆ ಹಣ ನಿಗದಿಪಡಿಸಿದ್ದಕ್ಕೆ ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರತಿ ಗಂಟೆಗೆ 1,800 ರೂ. ದರ ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಿಬೇಕು. ತಪ್ಪಿದಲ್ಲಿ ಮಾಲಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ದಾವಣಗೆರೆ ಡಿಸಿಯವರು ಆದೇಶಿಸಿದ್ದಾರೆ. ಇದೇ ಮಾದರಿಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲೂ ಕಟಾವು ಯಂತ್ರಗಳ ಬಾಡಿಗೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದು ರೈತರ ನಿಲುವು ಆಗಿದೆ.
ದಾವಣಗೆರೆ ಮಾದರಿಗೆ ಯತ್ನ
ಖಾಸಗಿ ಭತ್ತ ಕಟಾವು ಯಂತ್ರಗಳು ದುಬಾರಿ ಬಾಡಿಗೆ ವಿಧಿಸು ವು ದರಿಂದ ರೈತರಿಗೆ ಹೊರೆ ಯಾಗುತ್ತಿರುವುದು ಗಮನಕ್ಕೆ ಬಂದಿದ್ದು ಕರಾವಳಿ ಯಲ್ಲೂ ದಾವಣಗೆರೆ ಜಿಲ್ಲೆಯ ಮಾದರಿ ಯಲ್ಲಿ ನಿಗದಿತ ಬಾಡಿಗೆ ಪಡೆಯುವಂತೆ ಕಟಾವು ಯಂತ್ರದ ಮಾಲಕ ರಿಗೆ ಎಚ್ಚರಿಕೆ ನೀಡಲು ಇರುವ ಅವಕಾಶ ಗಳ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲೆ ಉಸ್ತುವಾರಿ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.