ಪೂರ್ಣಪ್ರಮಾಣದಲ್ಲಿ ಸಿಟಿ ಬಸ್ ಸಂಚಾರ?
ಸಾರಿಗೆ ಉದ್ಯಮದಲ್ಲಿ ತುಸು ಚೇತರಿಕೆ
Team Udayavani, Nov 1, 2020, 12:33 PM IST
ಮಹಾನಗರ, ಅ. 31: ಕೋವಿಡ್ ಪರಿಣಾಮದಿಂದ ತತ್ತರಿಸಿದ ಸಾರಿಗೆ ಉದ್ಯಮದಲ್ಲಿ ಸದ್ಯ ಚೇತರಿಕೆಯ ಲಕ್ಷಣ ಗೋಚರಿಸುತ್ತಿದೆ. ಈಗಾಗಲೇ ಏಳು ತಿಂಗಳಿನಿಂದ ನಿಲ್ಲಿಸಿದ್ದ ಬಹುತೇಕ ಸಿಟಿ ಬಸ್ಗಳು ನವೆಂಬರ್ ತಿಂಗಳಿನಿಂದ ರಸ್ತೆ ಗಿಳಿಸಲು ಮಾಲಕರು ಚಿಂತಿಸಿದ್ದಾರೆ.
ಕೋವಿಡ್ ಹಿನ್ನೆಲೆ ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್ಗಳು ಮಾರ್ಚ್ ತಿಂಗಳಾರ್ಧದಲ್ಲಿ ತಮ್ಮ ಸಂಚಾರ ಸ್ಥಗಿತಗೊಳಿಸಿದ್ದವು. ಲಾಕ್ಡೌನ್ ಸಡಿಲಿಕೆಯ ಬಳಿಕ ಜೂನ್ 1ರಿಂದ ಮತ್ತೆ ಬಸ್ ಸಂಚಾರ ಆರಂಭಗೊಂಡಿದ್ದರೂ ನಿರೀಕ್ಷಿತ ಪ್ರಯಾಣಿಕರು ಇರಲಿಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಬಸ್ಗಳನ್ನು ಆರ್ಟಿಒಗೆ ಹಸ್ತಾಂತರಿಸಲಾಗಿತ್ತು. ಇದರಿಂದಾಗಿ ಶೇ.50ರಷ್ಟು ಬಸ್ಗಳು ರಸ್ತೆಗಿಳಿಯಲಿಲ್ಲ. ಇದೀಗ ಬಸ್ ಸಂಚಾರ ಆರಂಭಗೊಂಡು 4 ತಿಂಗಳುಗಳು ಕಳೆದಿದ್ದು, ಸದ್ಯ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ತುಸು ಚೇತರಿಕೆ ಕಾಣುತ್ತಿದೆ. ಇದೇ ಕಾರಣಕ್ಕೆ ಬಹುತೇಕ ಬಸ್ಗಳು ನ. 1ರಿಂದ ರಸ್ತೆಗಿಳಿಯುವ ಸಾಧ್ಯತೆ ಇದೆ. ನಗರದಲ್ಲಿ ಒಟ್ಟು 325 ಸಿಟಿ ಬಸ್ಗಳಿದ್ದು, ನಗರದ 160 ರೂಟ್ಗಳಲ್ಲಿ ಸಂಚರಿಸುತ್ತವೆ. ಈಗಾಗಲೇ ಎಲ್ಲ ರೂಟ್ಗಳಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಕೋವಿಡ್ ಪೂರ್ವ 10,000 ರೂ. ಸಂಗ್ರಹವಾಗುತ್ತಿದ್ದ ರೂಟ್ಗಳಲ್ಲಿ ಸದ್ಯ 4,000 ರೂ. ಸಂಗ್ರಹವಾಗುತ್ತಿದೆ. ಆದರೂ ರಾಜ್ಯ ಸರಕಾರ ಮಾತ್ರ ಬಸ್ ಮಾಲಕರ ಬೇಡಿಕೆಗೆ ಸ್ಪಂದಿಸಿಲ್ಲ. ಪ್ರಮುಖವಾಗಿ ಖಾಸಗಿ ಬಸ್ಗಳಿಗೆ 6 ತಿಂಗಳುಗಳವರೆಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಸಂಘದ ವತಿಯಿಂದ ಕೇಳಿಕೊಂಡಿತ್ತು. ಆದರೆ ಸರಕಾರ ಈಡೇರಿಸಲಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಸಂಚಾರ ರದ್ದುಗೊಳಿಸುವುದಿಲ್ಲ ಎನ್ನುತ್ತಾರೆ ಬಸ್ ಮಾಲಕರು.
ಪ್ರಯಾಣಿಕರಿದ್ದರೆ ಕಾರ್ಯಾಚರಣೆ ಕೋವಿಡ್ ಪೂರ್ವದಲ್ಲಿ ರಾತ್ರಿ ಸುಮಾರು 10 ಗಂಟೆಯವರೆಗೆ ಸಿಟಿ ಬಸ್ ಸಂಚಾರ ಇರುತ್ತಿತ್ತು. ರಾತ್ರಿಯಾದರೂ ನಗರದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಆದರೆ ಕೊರೊನಾ ಆಗಮನದ ಬಳಿಕ ರಾತ್ರಿ 8.30ರಿಂದ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ. ಬಹುತೇಕ ಅಂಗಡಿಗಳು ಬಾಗಿಲು ಮುಚ್ಚುತ್ತಿವೆ. ಜನರ ಓಡಾಟವೂ ಕಡಿಮೆಯಾಗಿದೆ. ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ ರಾತ್ರಿ 10 ಗಂಟೆಯವರೆಗೂ ಬಸ್ ಕಾರ್ಯಾಚರಣೆ ನಡೆಸಲು ಸಿದ್ಧರಿದ್ದೇವೆ ಎನ್ನುತ್ತಾರೆ ಬಸ್ ಮಾಲಕರು.
ಚೇತರಿಕೆ ನಿರೀಕ್ಷೆ :
ಕೋವಿಡ್ ಕಾರಣದಿಂದ ಸಿಟಿ ಬಸ್ ಮಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೂ ನವೆಂಬರ್ ತಿಂಗಳಿನಿಂದ ಬಹುತೇಕ ಸಿಟಿ ಬಸ್ಗಳು ರಸ್ತೆಗಳಿಯಲಿವೆ. ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಶೇ.40ರಷ್ಟು ಆದಾಯ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಆದಾಯ ಚೇತರಿಕೆಯ ನಿರೀಕ್ಷೆಯಲ್ಲಿದ್ದೇವೆ. -ದಿಲ್ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.