ಕೋವಿಡ್‌ – 19 ಕಾಲದಲ್ಲಿ ರೋಗ ನಿರೋಧಕ ಶಕ್ತಿಯ ಬಲವೃದ್ಧಿ


Team Udayavani, Nov 1, 2020, 1:17 PM IST

ಕೋವಿಡ್‌ – 19 ಕಾಲದಲ್ಲಿ ರೋಗ ನಿರೋಧಕ ಶಕ್ತಿಯ ಬಲವೃದ್ಧಿ

ಹಿಂದೊಮ್ಮೆ ಒಂದು ಆನ್‌ಲೈನ್‌ ಕಾರ್ಯಕ್ರಮದಲ್ಲಿ ವಿದೂಷಕರೊಬ್ಬರು ಭಾರತೀಯರ ಮನೆಗಳಲ್ಲಿ ಚ್ಯವನಪ್ರಾಶ ಇರುವುದರ ಬಗ್ಗೆ ಮಾತನಾಡಿದಾಗ ನಾವೂ ನಕ್ಕಿದ್ದೆವು. ಆದರೆ ಅದೇ ಕೋವಿಡ್‌-19 ಮಾರಕ ಸಾಂಕ್ರಾಮಿಕವಾಗಿ ಹಬ್ಬಿದಾಗ ಇಂಟರ್‌ನೆಟ್‌ನ ಸರ್ಚ್‌ ಎಂಜಿನ್‌ಗಳಲ್ಲಿ “ಇಮ್ಯುನಿಟಿ’ ಅಥವಾ “ರೋಗ ನಿರೋಧಕ ಶಕ್ತಿ’ಯ ಬಗ್ಗೆ ಹುಡುಕಾಡುವವರ ಸಂಖ್ಯೆ ಕಾಳಿYಚ್ಚಿನಂತೆ  ಹೆಚ್ಚಿತು. ಸೆಪ್ಟಂಬರ್‌ 13ರಂದು ಪ್ರಕಟಿಸಲಾದ ಕೋವಿಡ್‌ -19 ನಿರ್ವಹಣ ಮಾರ್ಗಸೂಚಿಗಳಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳಿಗಾಗಿ ರೋಗ ನಿರೋಧಕ ಶಕ್ತಿ ವರ್ಧಕ ಔಷಧಗಳನ್ನು ಶಿಫಾರಸು ಮಾಡಿದೆ. ಅದಕ್ಕೆ ಮುನ್ನವೂ ಮಾಧ್ಯಮಗಳಲ್ಲಿ ಅರಶಿನ ಹಾಲು, ಚ್ಯವನಪ್ರಾಶ, ತುಳಸಿ ಮತ್ತು ಶುಂಠಿ ಸಾರ ಮಿಶ್ರಿತ ಹಾಲು ಇತ್ಯಾದಿ ಉತ್ಪನ್ನಗಳ ಜಾಹೀರಾತುಗಳು ಝಗಮಗಿಸಲಾರಂಭಿಸಿದ್ದವು. ಹಾಗಾದರೆ ರೋಗ ನಿರೋಧಕ ಶಕ್ತಿ ಅಥವಾ “ಇಮ್ಯುನಿಟಿ ಪವರ್‌’ ಎಂದರೇನು? ಅದು ಔಷಧ ಅಂಗಡಿಯ ಕೌಂಟರ್‌ನಲ್ಲಿ ಸಿಗುವಂಥದ್ದೇ?

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಾಯಿಲೆ ಉಂಟು ಮಾಡುವ ಸೂಕ್ಷ್ಮಜೀವಿಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ದೇಹದ ಸಾಮರ್ಥ್ಯವೇ ರೋಗ ನಿರೋಧಕ ಶಕ್ತಿ. ಇದು ಚೆನ್ನಾಗಿ ಕಾರ್ಯನಿರ್ವಹಿಸಬೇಕಾದರೆ ಅದು ಸಮತೋಲಿತವಾಗಿರಬೇಕು ಮತ್ತು ಸಾಮರಸ್ಯದಿಂದ ಇರಬೇಕು. ಜೀವನ ವಿಧಾನದಲ್ಲಿ ಕಿರು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ದೇಹದ ಪ್ರತೀ ಅಂಗಾಂಗವೂ ತನ್ನ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಅಂತಹ ಜೀವನಶೈಲಿ ಬದಲಾವಣೆಗಳು ಎಂದರೆ, ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಧೂಮಪಾನವನ್ನು ತ್ಯಜಿಸುವುದು, ಮಾದರಿ ದೇಹತೂಕವನ್ನು ಕಾಪಾಡಿ ಕೊಳ್ಳುವುದು, ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವುದು ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು.

ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರ ಇರಿಸಬಹುದು ಎಂಬ ಒಂದು ಉಕ್ತಿಯಿದೆ. ಅದೇಕೆಂಬುದು ಈಗ ಬಯಲಾಗಿದೆ. ಸ್ಪ್ಯಾನಿಶ್‌ ಫ್ಲ್ಯೂ ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿ ಹತ್ತಿರ ಹತ್ತಿರ ಒಂದು ಶತಮಾನ ಕಳೆಯುತ್ತ ಬಂದರೂ ಏನೂ ಬದಲಾಗಿಲ್ಲ. ಸಾವಿರಾರು ವೈಜ್ಞಾನಿಕ ಸಂಶೋಧನೆಗಳು ಮತ್ತು ಅಧ್ಯಯನ ವರದಿಗಳ ಬಳಿಕವೂ ನಾವು ಸಹಾಯಕ್ಕಾಗಿ ಪ್ರಕೃತಿಯತ್ತಲೇ ನೋಡುತ್ತಿದ್ದೇವೆ. ಪ್ರಕೃತಿಯು ಗುಣಪಡಿಸುವ ಮತ್ತು ಜೀವನವನ್ನು ಸುಗಮಗೊಳಿಸುವ ವಿಚಾರದಲ್ಲಿ ಅಪಾರ ಸಂಪದ್ಭರಿತವಾಗಿದ್ದು, ಇಂತಹ ಸಂದಿಗ್ಧ ಕಾಲದಲ್ಲಿ ಅದನ್ನೇ ಮೊರೆ ಹೋಗುವುದು ಯುಕ್ತವಾಗಿದೆ.

ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ವಿವಿಧ ಅಂಶಗಳನ್ನು ಒಂದು ಸೇನೆಯ ವಿವಿಧ ವಿಭಾಗಗಳಿಗೆ ಹೋಲಿಸಲಾಗಿದೆ. ಅಲ್ಪ ಪ್ರಮಾಣದ ಕೊರತೆಗಳು ಕೂಡ ರೋಗಗಳ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದಾಗಿದೆ.

ಆದ್ದರಿಂದ ಅಪಾಯಕಾರಿ ವೈರಸ್‌ ನಿಮ್ಮತ್ತ ಬರುವುದಕ್ಕೆ ಮುನ್ನವೇ ನಿಮ್ಮ ಆಹಾರದಲ್ಲಿ ಹೊಸ ಚೈತನ್ಯವನ್ನು ಒದಗಿಸುವುದಕ್ಕೆ ಪ್ರಯತ್ನ ಪಡಿ. ನಿಮ್ಮ ಆಹಾರದ ಬಟ್ಟಲನ್ನು ತಾಜಾ ತರಕಾರಿಗಳು ಮತ್ತು ಬಣ್ಣಬಣ್ಣದ ಹಣ್ಣುಗಳಿಂದ ಅಲಂಕರಿಸುವುದು, ಊಟ ಉಪಾಹಾರದಲ್ಲಿ ಬೆಳ್ಳುಳ್ಳಿ, ಶುಂಠಿ ಅಥವಾ ಅರಶಿನವನ್ನು ಸೇರಿಸುವುದು, ಅತಿಯಾದ ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿರುವ ಆಹಾರವಸ್ತುಗಳನ್ನು ವರ್ಜಿಸುವಂತಹ ಸಣ್ಣಪುಟ್ಟ ಬದಲಾವಣೆಗಳ ಮೂಲಕ ನೀವು ರೋಗದ ವಿರುದ್ಧ ಹೋರಾಟದಲ್ಲಿ ಗೆಲ್ಲಬಹುದು.

ನಿಮ್ಮ ಆಹಾರ ಶಿಫಾರಸುಗಳು :

  • ತೆಳು ಮಾಂಸ, ಕೋಳಿಮಾಂಸ, ಮೀನು ದ್ವಿದಳ ಧಾನ್ಯಗಳು, ಮೊಟ್ಟೆ, ಯೋಗರ್ಟ್‌ ಇತ್ಯಾದಿ ಆಹಾರವಸ್ತುಗಳು ಪ್ರೊಟೀನ್‌ ಅಂಶವನ್ನು ಧಾರಾಳವಾಗಿ ಹೊಂದಿವೆ. ಆ್ಯಂಟಿಬಾಡಿಗಳು ಮತ್ತು ಬಿಳಿ ರಕ್ತ ಕಣಗಳಂತಹ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಪ್ರಮುಖ ಅಂಗಗಳನ್ನು ಕಟ್ಟಿ ಬೆಳೆಸುವುದಕ್ಕೆ ಪ್ರೊಟೀನ್‌ ಅಗತ್ಯವಾಗಿ ಬೇಕು. ಬೂತಾಯಿ ಮೀನಿನಲ್ಲಿ ಪ್ರೊಟೀನ್‌ ಮಾತ್ರವಲ್ಲದೆ ಉರಿಯೂತ ನಿರೋಧಕವಾಗಿ ಕೆಲಸ ಮಾಡುವ ಒಮೇಗಾ 3 ಆವಶ್ಯಕ ಫ್ಯಾಟಿ ಆ್ಯಸಿಡ್‌, ಝಿಂಕ್‌ ಮತ್ತು ಸೆಲೆನಿಯಂ ಕೂಡ ಇರುವುದರಿಂದ ಅದು ನಮ್ಮ ಆಹಾರದ ಭಾಗವಾಗಿರುವುದು ಇನ್ನಷ್ಟು ರಕ್ಷಣೆಯನ್ನು ಒದಗಿಸುತ್ತದೆ.
  • ಚೀನೀ ಕಾಯಿಗಳನ್ನು ಕತ್ತರಿಸುವಾಗ ಬೀಜಗಳನ್ನು ಎಸೆಯುವುದುಂಟು, ಆದರೆ ಈಗ ಅವುಗಳನ್ನು ತೆಗೆದಿಟ್ಟು ಸೇವಿಸುವುದಕ್ಕೆ ಉತ್ತಮ ಕಾಲ. ಚೀನೀಕಾಯಿಯ ಅರ್ಧ ಕಪ್‌ನಷ್ಟು ಬೀಜಗಳಲ್ಲಿ 5 ಮಿಲಿಗ್ರಾಂನಷ್ಟು ಝಿಂಕ್‌ ಇರುತ್ತದೆ. ಇದು ರೋಗ ನಿರೋಧಕ ಶಕ್ತಿ ಸಮರ್ಪಕವಾಗಿ ಕೆಲಸ ಮಾಡಲು ಅಗತ್ಯ. ನೀವು ಚೀನೀಕಾಯಿ ಬೀಜಗಳನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ಅಥವಾ ಮೈಕ್ರೊವೇವ್‌ ಓವನ್‌ನಲ್ಲಿ ಏಳೆಂಟು ನಿಮಿಷ ಬೇಯಿಸಿ ತಿನ್ನಬಹುದು.
  • ಯೋಗರ್ಟ್‌ ಮತ್ತು ಮೊಸರು ಅಗತ್ಯ: ನಮ್ಮ ದೇಹದ ಶೇ.70ರಷ್ಟು ರೋಗ ನಿರೋಧಕ ಅಂಗಾಂಶಗಳು ಕರುಳಿನಲ್ಲಿ ಇರುತ್ತವೆ. ಕೆಲವು ಬಗೆಯ ಯೋಗರ್ಟ್‌ಗಳು ಮತ್ತು ಮೊಸರಿನಲ್ಲಿ ಕಂಡುಬರುವ ಸೂಕ್ಷ್ಮಾಣುಗಳ ಸಜೀವ ಸಮೂಹಗಳು ನಮ್ಮ ಪಚನಾಂಗ ವ್ಯೂಹವನ್ನು ಸೇರಿದ ಬಳಿಕ ಅಲ್ಲಿರುವ ಲ್ಯಾಕ್ಟೊಬೆಸಿಲಸ್‌ ಆ್ಯಸಿಡೋಫಿಲಸ್‌ನಂತಹ ಬ್ಯಾಕ್ಟೀರಿಯಾಗಳ ಜತೆಗೆ ಸೇರಿಕೊಂಡು ವೃದ್ಧಿಸುತ್ತವೆ. ನಿಮ್ಮ ಫ್ರುಟ್‌ ಡೆಸರ್ಟ್‌ಗಳನ್ನು ಯೋಗರ್ಟ್‌ನಿಂದ ಅಲಂಕರಿಸಲು ಮತ್ತು ದಾಲಿcನ್ನಿ ಅಥವಾ ನಟ್‌ಮೆಗ್‌ ಪುಡಿ ಸಿಂಪಡಿಸಿ ವೆನಿಲ್ಲಾ ಫ್ಲೇವರ್‌ ಜತೆಗೆ ಸ್ವಾದ ಹೆಚ್ಚಿಸಲು ಪ್ರಯತ್ನಿಸಿ.
  • ಜಪಾನಿಯರಲ್ಲಿ ರೋಗ ಉಂಟಾಗುವಿಕೆ ಕಡಿಮೆ. ಯಾಕೆಂದರೆ ಅವರು ಗ್ರೀನ್‌ ಟೀ ಕುಡಿಯುವುದು ಹೆಚ್ಚು. ಇದು ಆ್ಯಂಟಿಓಕ್ಸಿಡೆಂಟ್‌ಗಳ ಆಗರವಾಗಿದೆ. ಕಪ್ಪು ಚಹಾದಲ್ಲಿರುವ ಎಲ್‌-ಥಿಯಾನಿನ್‌ ಎಂಬ ಸಂಯುಕ್ತವು ರೋಗ ಪ್ರತಿರೋಧ ಶಕ್ತಿಗೆ ಬಲ ಒದಗಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
  • ಬೆಳ್ಳುಳ್ಳಿ ಮತ್ತು ನೀರುಳ್ಳಿಗಳಲ್ಲಿ ಗಂಧಕ ಸಂಯುಕ್ತಗಳಿದ್ದು, ಇದು ಮ್ಯಾಕ್ರೊಫೇಗಸ್‌ ಮತ್ತು ಟಿ ಸೆಲ್‌ಗ‌ಳ ಹೋರಾಟ ಶಕ್ತಿಯನ್ನು ಹೆಚ್ಚಿಸುತ್ತವೆ ಎನ್ನಲಾಗುತ್ತದೆ. ಅರಶಿನ, ದಾಲಿcನ್ನಿ, ಲವಂಗ ಮತ್ತು ಕಾಳುಮೆಣಸಿನಂತಹ ಸಂಬಾರ ಪದಾರ್ಥಗಳು ಉರಿಯೂತ ನಿರೋಧಕ ಅಂಶಗಳನ್ನು ಹೊಂದಿವೆ. ಇವುಗಳನ್ನು ಅನಾದಿ ಕಾಲದಿಂದಲೂ ಭಾರತೀಯ ಅಡುಗೆ ಪದ್ಧತಿಯಲ್ಲಿ ಉಪಯೋಗಿಸಲಾಗುತ್ತಿದೆ.
  • ತಾಜಾ ಹಣ್ಣು ತರಕಾರಿಗಳಿಂದ ಊಟದ ಬಟ್ಟಲನ್ನು ಅಲಂಕರಿಸಿ. ಸಾವಯವವಾಗಿರಲಿ ಅಲ್ಲದಿರಲಿ; ಪ್ರತೀ ದಿನ ಏಳೆಂಟು ಸಲವಾದರೂ ಗಾಢ ಬಣ್ಣದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.

ಇನ್ನಷ್ಟು ಸಲಹೆಗಳು :

  • ಸಂಸ್ಕರಿತ ಸಕ್ಕರೆ ಮತ್ತು ಪಿಷ್ಟ ಸಹಿತ ಆಹಾರವಸ್ತುಗಳು ಹೆಚ್ಚು ಗ್ಲೆ„ಸೇಮಿಕ್‌ ಇಂಡೆಕ್ಸ್‌ ಹೊಂದಿದ್ದು, ಬಿಳಿ ರಕ್ತ ಕಣಗಳ ಚಟುವಟಿಕೆಯನ್ನು ತಗ್ಗಿಸುತ್ತವೆ. ಇದರಿಂದ ರೋಗಕಾರಕಗಳ ವಿರುದ್ಧ ಹೋರಾಡುವ ಬಿಳಿ ರಕ್ತಕಣಗಳ ಸಾಮರ್ಥ್ಯ ಕುಗ್ಗುತ್ತದೆ.
  • ಸ್ಯಾಚ್ಯುರೇಟೆಡ್‌ ಮತ್ತು ಟ್ರಾನ್ಸ್‌ ಫ್ಯಾಟ್‌ಗಳನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಉರಿಯೂತ ಉಂಟಾಗುವ ಸಾಧ್ಯತೆ ಇರುತ್ತದೆ.
  • ಮದ್ಯವು ರೋಗ ನಿರೋಧಕ ಶಕ್ತಿಯನ್ನು ಕೂಡ ಅಮಲಿಗೀಡು ಮಾಡುತ್ತದೆ. ಆದ್ದರಿಂದ ವರ್ಜಿಸುವುದೇ ಲೇಸು.

ರೋಗ ನಿರೋಧಕ ಶಕ್ತಿಯ ಸಾಮರ್ಥ್ಯ ವೃದ್ಧಿಸುವ ಅಡ್ಡದಾರಿಗಳ ಬಗ್ಗೆ ಕೆಲವು ಅನಧಿಕೃತ ಆರೋಗ್ಯ ಸೇವಾದಾರರು ಪ್ರಕಟಿಸುತ್ತಿರುವ ಪ್ರಕಟನೆ, ಸುದ್ದಿಗಳನ್ನು ನಂಬದಿರುವುದು ಲೇಸು. ದೇಹವನ್ನು ಒಮ್ಮೆ ಶುದ್ಧಗೊಳಿಸಿ ಬಳಿಕ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಅಮೈನೊ ಆ್ಯಸಿಡ್‌ಗಳ ಭಾರೀ ಡೋಸ್‌ಗಳನ್ನು ದೇಹಕ್ಕೆ ನೀಡುವ ಯೋಜನೆಗಳನ್ನು ಅವರು ಶಿಫಾರಸು ಮಾಡುತ್ತಾರೆ. ಆದರೆ ಇಂತಹ ಯೋಜನೆಗಳಿಂದ ಪ್ರಯೋಜನವಾಗುವುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ, ಅಲ್ಲದೆ ಪೂರಕ ಆಹಾರ, ಪೌಷ್ಟಿಕಾಂಶಗಳ ಭಾರೀ ಡೋಸ್‌ಗಳಿಂದ ಲಾಭಕ್ಕಿಂತ ಹಾನಿಯಾಗುವ ಸಾಧ್ಯತೆಯೇ ಹೆಚ್ಚು.

ವೈರಸ್‌ಗಳು ನಮ್ಮ ದೇಹದ ವಂಶವಾಹಿ ಕಾರ್ಯವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿ ಸಾಮಾನ್ಯ ಶೀತದಿಂದ ತೊಡಗಿ ಮಾರಕ ಕೊರೊನಾದಂತಹ ಕಾಯಿಲೆಗಳನ್ನು ಉಂಟು ಮಾಡಬಲ್ಲವು. ನಮ್ಮ ಮೂಗು ಮತ್ತು ಬಾಯಿಗಳನ್ನು ಮುಚ್ಚುವಂತಹ ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ಶುಚಿಗೊಳಿಸಿಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತಹ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕಿಗೆ ಒಳಗಾಗದಂತೆ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ. “ನಮ್ಮ ದೇಹದ ಒಳಗೆಯೇ ಅತ್ಯಂತ ದಕ್ಷ ಮತ್ತು ಅತ್ಯುತ್ತಮವಾದ ಔಷಧಾಲಯವಿದೆ’ ಎಂಬುದಾಗಿ ರಾಬರ್ಟ್‌ ಸಿ. ಪೀಲೆ ಹೇಳಿರುವುದು ಸರಿಯಾಗಿಯೇ ಇದೆ.

 

ಡಾ| ರಶ್ಮಿ ಡಿ’ಸೋಜಾ

ನ್ಯೂಟ್ರಿಶನಿಸ್ಟ್‌, ಹೆಲ್ತ್‌ ಮತ್ತು ವೆಲ್‌ನೆಸ್‌ ತರಬೇತುಗಾರರು, ಇಎನ್‌ಟಿ ಸರ್ಜನ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.