ಬಡ್ಡೀಸ್ ಟೈಟಲ್ ಲಾಂಚ್
ಕಿರಣ್‌ರಾಜ್ ಹೀರೋ
Team Udayavani, Nov 1, 2020, 2:12 PM IST
ಅನೇಕ ಕಲಾವಿದರು ಕಿರುತೆರೆಯಿಂದ ಹಿರುತೆರೆಗೆ ಹೊಸ ಚಿತ್ರಗಳ ಮೂಲಕ ಆಗಾಗ್ಗೆ ಅಡಿಯಿಡುತ್ತಲೇ ಇರುತ್ತಾರೆ. ಈಗ ಕಿರುತೆರೆ ನಟ ಕಿರಣ್ ರಾಜ್ ಕೂಡ ಅಂಥದ್ದೇ ಪ್ರಯತ್ನದಲ್ಲಿದ್ದಾರೆ. “ಕಿನ್ನರಿ’, “ಕನ್ನಡತಿ’ ಮೊದಲಾದ ಧಾರವಾಹಿಗಳಲ್ಲಿ ಮುಖ್ಯ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದ ಕಿರಣ್ ರಾಜ್ ಈಗ “ಬಡ್ಡೀಸ್’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
ಅಂದಹಾಗೆ, ಕಿರಣ್ ರಾಜ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರಕ್ಕೆ “ಬಡ್ಡೀಸ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಕನ್ನಡ ಚಿತ್ರರಂಗದ ಹಿರಿಯ ಪತ್ರಿಕಾ ಸಂಪರ್ಕಾಧಿಕಾರಿ (ಪಿಆರ್‌ಒ)ಗಳಾದ ನಾಗೇಂದ್ರ, ಸುಧೀಂದ್ರ ವೆಂಕಟೇಶ್, ವಿಜಯ್ ಕುಮಾರ್ ಮೊದಲಾದವರ ಕೈಯಿಂದ ಚಿತ್ರತಂಡ “ಬಡ್ಡೀಸ್’ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿಸಿದೆ. ಈ ಹಿಂದೆ ತುಳು ಚಿತ್ರವೊಂದನ್ನು ನಿರ್ಮಿಸಿದ್ದ ರಾಮಕೃಷ್ಣ ಶೆಟ್ಟಿ “ತವಿಶ್ ಎಂಟರ್‌ಪ್ರೈಸರ್’ ಬ್ಯಾನರ್ ಅಡಿಯಲ್ಲಿ “ಬಡ್ಡೀಸ್’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡದ ಹಲವು ಚಿತ್ರಗಳಿಗೆ ಸಂಭಾಷಣೆಕಾರ ಹಾಗೂ ಬರಹಗಾರನಾಗಿ ಕೆಲಸ ಮಾಡಿರುವ, ಈ ಹಿಂದೆ “5ಎ’ ಚಿತ್ರವನ್ನು ನಿರ್ದೇಶಿಸಿದ್ದ ಗುರುವೇಂದ್ರ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಹೊಸಬರ 4 ಕನಸು ದಿಕ್ಕುಗಳ ಸುತ್ತ ಚಿತ್ರ : ಕೆಲವು ಸಿನಿಮಾಗಳಲ್ಲಿ ನಟಿಸಿರುವ ಭುವನ್ ಚಂದ್ರ ಈಗ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಶೀರ್ಷಿಕೆಯೇ ವಿಭಿನ್ನ ವಾಗಿದೆ. ಅದು “4′. ಹೌದು, ಹೀಗೊಂದು ಶೀರ್ಷಿಕೆಯಲ್ಲಿ ಭುವನ್ ಚಂದ್ರ ನಟಿಸುತ್ತಿದ್ದಾರೆ.
ಈ ಚಿತ್ರವನ್ನು ಅಭಿ ಎನ್ನುವವರು ನಿರ್ದೇಶಿಸುತ್ತಿದ್ದು, ಬಿ.ಜಿ. ಹೇಮಾವತಿ ಈ ಚಿತ್ರದ ನಿರ್ಮಾಪಕರು. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗಿದೆ. ಅಷ್ಟಕ್ಕೂ 4 ಎಂದರೇನು ಎಂದು ನೀವು ಕೇಳಬಹುದು. “ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮಗಳೆನ್ನುವ ದಿಕ್ಕುಗಳನ್ನು ಪಾತ್ರವಾಗಿಸಿ ರೂಪಿಸಿರುವ ಕಥಾಹಂದರ ಈ ಚಿತ್ರದ್ದು. ಈ ಕಾರಣಕ್ಕೇ ಶೀರ್ಷಿಕೆಯನ್ನು 4 ಎಂದು ಇಡಲಾಗಿದೆ. ನಾಲ್ಕು ಜನರ ಪಾತ್ರಗಳು ಪ್ರಧಾನವಾಗಿರುವ ಥ್ರಿಲ್ಲರ್ ಜಾನರ್‌ನ ಚಿತ್ರ 4. ವ್ಯಾಮೋಹ, ಅಧಿಕಾರ, ಸ್ನೇಹ, ಪ್ರೀತಿಯನ್ನು ಈ ನಾಲ್ಕು ಪಾತ್ರಗಳು ಪ್ರತಿಬಿಂಬಸಲಿವೆ.
ಪ್ರೀತಿಯೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ವ್ಯಾಮೋಹ, ಅಧಿಕಾರ ಮತ್ತು ಸ್ನೇಹದ ಪಾತ್ರಗಳೇನು ಅನ್ನೋದು ಹಂತಹಂತವಾಗಿ ತೆರೆದುಕೊಳ್ಳಲಿದೆ ಎನ್ನುವುದು ಚಿತ್ರದ ನಿರ್ದೇಶಕ ಅಭಿ ಮಾತು. ನಾಯಕ ಭುವನ್ ಚಂದ್ರ ಅವರಿಗೂ ಚಿತ್ರದ ಕಥೆ ಮತ್ತು ನಿರೂಪಣೆಯಲ್ಲಿ ಏನೋ ಹೊಸತನವಿದೆ ಎನಿಸಿ ಈ ಸಿನಿಮಾ ಒಪ್ಪಿಕೊಂಡರಂತೆ. ಈ ಚಿತ್ರದಲ್ಲಿ ದಿಶಾ ಪಾಂಡೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.