ಚುನಾವಣಾ ಭಾಷಣದ ವೇಳೆ ಯಡವಟ್ಟು: “ಕೈ” ಗುರುತಿಗೆ ಮತ ಚಲಾಯಿಸಿ ಎಂದ “ಬಿಜೆಪಿ” ನಾಯಕ ಸಿಂಧಿಯಾ
Team Udayavani, Nov 1, 2020, 4:45 PM IST
ಭೋಪಾಲ್ : ಮಧ್ಯ ಪ್ರದೇಶದ ಉಪಚುನಾವಣೆಯ ಪ್ರಚಾರದ ವೇಳೆ ಕೈ ಗುರುತಿಗೆ ಮತ ಚಲಾಯಿಸುವಂತೆ ಬಿಜೆಪಿಯ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ, ಆದರೆ ಸಿಂಧಿಯಾ ಹೇಳಿಕೆಯಿಂದ ಜನರು ಗಲಿಬಿಲಿಗೊಂಡಿದ್ದಾರೆ ಅಷ್ಟೋತ್ತಿಗಾಗಲೇ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ತಾನು ಮಾಡಿದ ಯಡವಟ್ಟಿನ ಅರಿವಾಗಿದ್ದು ತಕ್ಷಣ ಕಮಲದ ಗುರುತಿಗೆ ತಮ್ಮ ಅಮೂಲ್ಯ ಮತವನ್ನು ಹಾಕಬೇಕೆಂದು ತಪ್ಪನ್ನು ತಿದ್ದಿಕೊಂಡಿದ್ದಾರೆ.
ಗ್ವಾಲಿಯರ್ ನ ದಾಬ್ರಾ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಇಮಾರ್ತಿದೇವಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಿಂಧಿಯಾ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ನವೆಂಬರ್ 3ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ಕೈ ಗುರುತಿಗೆ ನೀಡಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ ಆದರೆ ಜನರು ಸಿಂಧಿಯಾ ಅವರ ಭಾಷಣ ಕೇಳಿ ಗಲಿಬಿಲಿಗೊಂಡರು ಅಷ್ಟೋತ್ತಿಗೆ ಸಿಂಧಿಯಾ ಅವರಿಗೆ ತಾನು ಮಾಡಿಕೊಂಡ ಯಡವಟ್ಟಿನ ಅರಿವಾಗಿದ್ದು ಜನರಲ್ಲಿ ಕಮಲದ ಗುರುತಿಗೆ ಮತವನ್ನು ಹಾಕುವಂತೆ ಕೇಳಿಕೊಂಡರು.
ಇದನ್ನೂ ಓದಿ:ಟ್ರಂಪ್ ನಡೆಸಿದ 18 ಚುನಾವಣಾ ರ‍್ಯಾಲಿಯಿಂದ 30ಸಾವಿರ ಮಂದಿಗೆ ಕೋವಿಡ್ ಸೋಂಕು; 700 ಜನ ಸಾವು
ಸಾಮಾಜಿಕ ಜಾಲತಾಣದಲ್ಲಿ ಸಿಂಧಿಯಾ ಅವರ ಭಾಷಣ ಹರಿದಾಡುತ್ತಿದ್ದು ಕಾಂಗ್ರೆಸ್ ನಾಯಕರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ನವೆಂಬರ್ 3 ರಂದು ಮಧ್ಯಪ್ರದೇಶದ ಜನರು ನಿಮ್ಮ ಹೇಳಿಕೆಯಂತೆ ಕೈ ಗುರುತಿಗೆ ಮತವನ್ನು ಚಲಾಯಿಸುತ್ತಾರೆ ಎಂದಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಕಾಂಗ್ರೆಸ್‌ನಲ್ಲಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಮಧ್ಯಪ್ರದೇಶದ ಕಲಮನಾಥ್ ಸರ್ಕಾರದಲ್ಲಿ ಸಚಿವರಾಗಿದ್ದ ಶಾಸಕರ ಜೊತೆ ಪಕ್ಷವನ್ನು ತೊರೆದಿದ್ದರು. ಇದರಿಂದಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಸಂಖ್ಯಾಬಲ ಕಳೆದುಕೊಂಡು ಪತನಗೊಂಡಿತ್ತು.
मध्यप्रदेश में कमलनाथ जी की लहर देख अब गद्दार सिंधिया के मुंह पर भी सच्चाई आ गई..! pic.twitter.com/nnhtUlywHF
— MP Youth Congress (@IYCMadhya) October 31, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ಚೋಟಾ ಮೋದಿ”:ಡಿಸಿಎಂ ಹುದ್ದೆಗೆ ರಾಜೀನಾಮೆ, ರಾಜ್ಯಸಭೆಗೆ ಬಿಜೆಪಿಯಿಂದ ಸುಶೀಲ್ ಮೋದಿ ಆಯ್ಕೆ
ಇದೇ ಕೊನೆಯ ಚುನಾವಣೆ ಎಂದು ಹೇಳಿಯೇ ಇಲ್ಲ: ನಿತೀಶ್ ಕುಮಾರ್
ತೇಜಸ್ವಿ ಒಳ್ಳೆಯ ಹುಡುಗ, ಆದರೆ RJD ಅಧಿಕಾರದ ಗದ್ದುಗೆ ಏರಿದ್ದರೆ…ಉಮಾಭಾರತಿ ಹೇಳಿದ್ದೇನು?
ನಿತೀಶ್ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್: ಬಿಜೆಪಿ-ಜೆಡಿಯು ನಡುವೆ ಸಂಪುಟ ಕಸರತ್ತು ಆರಂಭ
ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ, ಇದು ನಮ್ಮ ಬದ್ಧತೆ: ಭಾರತೀಯ ಜನತಾ ಪಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.