ಕೋವಿಡ್ ಪ್ಯಾಕೇಜ್‌ಗೆ ಆಗ್ರಹಿಸಿ ನಿರಶನ
Team Udayavani, Nov 1, 2020, 6:20 PM IST
ಕಲಬುರಗಿ: ಕೋವಿಡ್ ಮತ್ತು ಲಾಕ್‌ಡೌನ್‌ನಿಂದಾಗಿ ಛಾಯಾಗ್ರಾಹಕರಿಗೆ ಕೆಲಸವಿಲ್ಲದೆ ಪರದಾಡುವಂತೆ ಆಗಿದ್ದು, ತಕ್ಷಣವೇ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿ ಜಿಲ್ಲಾ ಫೋಟೊಗ್ರಾಫರ್ ಸಂಘದಿಂದ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿರುವ ಎಲ್ಲ ಫೋಟೋ ಸ್ಟುಡಿಯೋಗಳನ್ನು ಬಂದ್ ಮಾಡಿ ಮೆರವಣಿಗೆ ಆಗಮಿಸಿದ ಫೋಟೋಗ್ರಾಫರ್ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾವಣೆಗೊಂಡು ತಮ್ಮ ಬೇಡಿಕೆಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಕಳೆದ ಎಂಟು ತಿಂಗಳಿಂದಲೂ ಕೆಲಸವಿಲ್ಲದೆ ಫೋಟೋಗ್ರಾಫರ್‌ಗಳ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರದಿಂದ ಯಾವುದೇ ಸಹಕಾರ ಸಿಕ್ಕಿಲ್ಲ. ಮದುವೆ ಸೇರಿ ಶುಭ ಸಮಾರಂಭಗಳು ಸ್ಥಗಿತವಾಗಿದ್ದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ಫೋಟೋ ತೆಗೆದು ಜೀವನ ಸಾಗಿಸುತ್ತಿರುವ ನಮಗೆ ಸರ್ಕಾರ ಸಹಾಯ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್, ಉಸ್ಮಾನ ಜಮಾಲುದ್ದಿನ್, ಕಾರ್ಯದರ್ಶಿ ಬಸವರಾಜ ತೋಟದ, ಶರಣಬಸಪ್ಪ ಕಣ್ಣಿ, ರಾಜಶೇಖರ ಹತ್ತೂರೆ, ಗುಂಡೇರಾವ ಭೂಸನೂರ, ರಾಜೇಂದ್ರ ಸ್ವಾಮಿ, ವಿಜಯಕುಮಾರ ಪುರಾಣಿಕಮಠ, ಬಸವರಾಜ ಬಿರಾದಾರ, ರಮೇಶ, ಶೇಖ್ ರಿಯಾಜುದ್ದಿನ್, ಮಹೇಶ ಮೇಲಿಕೇರಿ, ಮಂಜುನಾಥ ಜಂಬಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವಾಡಿಯಲ್ಲೂ ಛಾಯಾಗ್ರಾಹಕರು ಅಂಗಡಿ ಬಂದ್ ಮಾಡಿ ಪ್ರತಿಭಟನೆ :
ವಾಡಿ: ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಫೋಟೋಗ್ರಾಫರ್‌ಗಳು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯಮಟ್ಟದ ಸ್ಟೂಡಿಯೋ ಬಂದ್ ಕರೆಯನ್ನು ಬೆಂಬಲಿಸಿ ಪ್ರತಿಭಟನೆಗಿಳಿದ ಸ್ಥಳೀಯ ಛಾಯಾಚಿತ್ರಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳು, ರಾಜ್ಯ ಮತ್ತು ಕೇಂದ್ರ ಸರಕಾರಗಳು ನಮ್ಮ ಕಷ್ಟ ಅರಿತು ಪರಿಹಾರ ಘೋಷಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.
ಕೋವಿಡ್-19 ವಿಶೇಷ ಪ್ಯಾಕೇಜ್ ಘೋಷಿಸಬೇಕು. ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಬೇಕು. ಆರೋಗ್ಯ ಮತ್ತು ಜೀವ ವಿಮೆ, ಜಿಪಂ ಹಾಗೂ ಗ್ರಾಪಂ ಯೋಜನೆಗಳ ಛಾಯಾಗ್ರಹಣದ ಹಕ್ಕು ನೀಡಬೇಕು. ಚುನಾವಣೆಯ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು. ಜೀವನ ಭದ್ರತೆ ಒದಗಿಸಬೇಕು. ವೆಬ್ ಕ್ಯಾಮೆರಾ ತೊಗಲಗಬೇಕು. ಪ್ರತಿಭಾವಂತ ಛಾಯಾಚಿತ್ರಕಾರರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು. ಎಂದು ಸರಕಾರವನ್ನು ಆಗ್ರಹಿಸಿದರು.
´ಫೋಟೊಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಷಿಯೇಷನ್‌ನ ನಗರ ಸಮಿತಿ ಅಧ್ಯಕ್ಷ ಶರಣಪ್ಪ ಹಡಪದ ಕುಂದನೂರ, ಉಪಾಧ್ಯಕ್ಷ ಭೀಮಣ್ಣ ಹವಾಲ್ದಾರ, ಕಾರ್ಯದರ್ಶಿ ಸಿದ್ರಾಮ ಕರದಳ್ಳಿ, ಸಹ ಕಾರ್ಯದರ್ಶಿ ಭೀಮರಾಯ ಭಂಡಾರಿ, ವಿಲಿಯಂ ಪ್ರಕಾಶ, ಸಂಜಯ ಚವ್ಹಾಣ, ಮಲ್ಲಿಕಾರ್ಜುನ ನಾಟೀಕಾರ, ವಿನಾಯಕ ಖೈರೆ, ಭೀಮರಾಯ ನರಿಬೋಳಿ, ಜಾರ್ಜ್ ಪ್ರಕಾಶ, ತೋಟೇಂದ್ರ ಸ್ವಾಮಿ, ಬಸವರಾಜ ಕರದಳ್ಳಿ, ಮೋಹನ ಮಾಲಗತ್ತಿ, ಶಣ್ಮುಖ ಕಟ್ಟಿಮನಿ, ರಾಜು ಗುತ್ತೇದಾರ, ಯಲ್ಲಣ್ಣ ಕಟ್ಟಿಮನಿ, ಸೋಮಶೇಖರ ಸೂಲಹಳ್ಳಿ, ಅಣವೀರಯ್ಯ ಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.