ಮಹರ್ಷಿ ವಾಲ್ಮೀಕಿ ವಿಚಾರಧಾರೆ ವೈವಿಧ್ಯಮಯ
Team Udayavani, Nov 1, 2020, 6:51 PM IST
ಬೀದರ: ಮಹರ್ಷಿ ವಾಲ್ಮೀಕಿಯ ಲೋಕದೃಷ್ಟಿ ಮತ್ತು ವಿಚಾರಧಾರೆಯು ವಿಶಾಲ ಹಾಗೂ ವೈವಿಧ್ಯಮಯವಾಗಿದೆ ಎಂದು ಡಿಸಿ ರಾಮಚಂದ್ರನ್ ಆರ್. ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯು ಭಾರತದ ಆದಿಕವಿ ಎಂದೇ ಹೆಸರಾಗಿದ್ದಾರೆ. ಇವರು ರಚಿಸಿದ ರಾಮಾಯಣವು ಬಹುತೇಕ ಭಾರತೀಯರು ಅಧ್ಯಯನ ಮಾಡಿದ್ದಾರೆ. ರಾಮಾಯಣ ರಚನೆಯಲ್ಲಿ ವಾಲ್ಮೀಕಿಯವರು ತೋರಿದ ಮಾರ್ಗ, ದೃಷ್ಟಿಕೋನ, ವೈಚಾರಿಕ ನೆಲೆಗಟ್ಟು ವಿಶಿಷ್ಟವಾಗಿದೆ ಎಂದರು.
ವಾಲ್ಮೀಕಿಯ ಲೋಕದೃಷ್ಟಿ, ವಿಚಾರಧಾರೆ, ವಾಲ್ಮೀಕಿಯ ಸರ್ವತೋಮುಖ ಪ್ರತಿಭೆ, ಚರಿತ್ರೆ, ಸಂಸ್ಕೃತಿ, ರಾಜನೀತಿ ಮೊದಲಾದ ಸಂಗತಿಗಳ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ. ವಾಲ್ಮೀಕಿಯು ಓರ್ವ ಭಾರತೀಯನಾಗಿ ಚಿಂತಿಸಿರುವುದನ್ನು ಲೋಕದೃಷ್ಟಿಯೆಂದು ಮತ್ತು ಅವರು ದಾರ್ಶನಿಕ ಮತ್ತು ತತ್ವಜ್ಞಾನಿಯಾಗಿ ಚಿಂತಿಸಿರುವುದನ್ನು ವಿಚಾರಧಾರೆ ಎಂದು ಕರೆಯಬಹುದಾಗಿದೆ ಎಂದು ತಿಳಿಸಿದರು.
ಭಾರತದ ಚರಿತ್ರೆ ಮತ್ತು ಸಂಸ್ಕೃತಿ ನೆಲೆಗಿಂತ, ಮೌಖೀಕ ಪರಂಪರೆ ಹಾಗೂ ವಾಲ್ಮೀಕಿ ಬರೆದ ರಾಮಾಯಣವನ್ನೇ ಆಧಾರವಾಗಿಟ್ಟುಕೊಂಡು ಸಾವಿರಾರು ರಾಮಾಯಣಗಳು ಸೃಷ್ಟಿಯಾಗಿವೆ. ಲೋಕದೃಷ್ಟಿ ಮತ್ತು ವಿಚಾರಧಾರೆ ಹಿನ್ನೆಲೆಯ ಕಾರಣ ವಾಲ್ಮೀಕಿ ರಾಮಾಯಣವನ್ನು ಹೊಸಪೀಳಿಗೆಗೆ ಅರ್ಥೈಸುವ ಪ್ರಯತ್ನವಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತೆ ಗರೀಮಾ ಪನ್ವಾರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸರೋಜಾ, ಜಿಲ್ಲಾ ಟೋಕರಿ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ, ಪ್ರಮುಖರಾದ ಸುನೀಲ್ ಭಾವಿಕಟ್ಟಿ, ಶರಣಪ್ಪ ಖಾಶೆಂಪೂರ, ಷಣ್ಮುಖಪ್ಪ ಶೇಖಾಪೂರ, ರವೀಂದ್ರ ಗುಮಾಸ್ತಿ, ಮಾರುತಿ ಮಾಸ್ಟರ್ ಇನ್ನಿತರರು ಇದ್ದರು.
ವಾಲ್ಮೀಕಿ ಭವನ ಕಾಮಗಾರಿ ಆರಂಭಿಸಿ :
ಬೀದರ: ನಗರದಲ್ಲಿ ನನೆಗುದಿಗೆ ಬಿದ್ದಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಟ್ಟಡ ಕಾಮಗಾರಿಗೆ ಶೀಘ್ರ ಆರಂಭಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘ ಮನವಿ ಮಾಡಿದೆ.
ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್, ಯುವ ಘಟಕದ ಅಧ್ಯಕ್ಷ ಸುನೀಲ ಭಾವಿಕಟ್ಟಿ ನೇತೃತ್ವದಲ್ಲಿ ಪ್ರಮುಖರು ಡಿಸಿ ಅವರನ್ನು ಭೇಟಿ ಮಾಡಿ ಸಮಾಜ ಕಲ್ಯಾಣ ಸಚಿವರಿಗೆ ಬರೆದ ಪತ್ರ ಸಲ್ಲಿಸಿದರು. ಟೋಕರೆ ಕೋಲಿ ಸಮಾಜದ ಆರಾಧ್ಯ ಗುರು ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ 2010-11ರಲ್ಲಿ 1 ಕೋಟಿ ರೂ. ಮಂಜೂರು ಮಾಡಿ, 2011ರ ಮಾ.
22ಕ್ಕೆ ಮೊದಲನೇಯ ಕಂತಾಗಿ 25 ಲಕ್ಷ ರೂ.
ಬಿಡುಗಡೆ ಸಹ ಮಾಡಲಾಗಿದೆ. ಆದರೆ, ಈವರೆಗೆ ಅಧಿಕಾರಿಗಳು ಕಟ್ಟಡದ ಕಾಮಗಾರಿ ಶುರು ಮಾಡದೇ ಜಿಲ್ಲೆಯ ಎಸ್.ಟಿ. ಸಮುದಾಯದ ಜನರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಗರದ ಚಿಕ್ಕಪೇಟ್ ಸಮೀಪ ಸಮುದಾಯ ಭವನ ನಿರ್ಮಾಣಕ್ಕಾಗಿ 20 ಗುಂಟೆ ಭೂಮಿ ನೀಡಲಾಗಿದೆ. ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಅವರು ಶಂಕುಸ್ಥಾಪನೆ ನೆರವೇರಿಸಿ ಎರಡು ವರ್ಷ ಕಳೆಯುತ್ತಿದ್ದರೂ ಇಲ್ಲಿಯವರೆಗೆ ಕಟ್ಟಡ ಕಾಮಗಾರಿ ಶುರು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ನ. 15ರೊಳಗೆ ಭವನ ನಿರ್ಮಾಣದ ಕೆಲಸಕ್ಕೆ ಚಾಲನೆ ನೀಡಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಮಾರುತಿ ಮಾಸ್ಟರ್, ಶರಣಪ್ಪ ಖಾಶೆಂಪಿರ್, ಶನ್ಮೂಖಪ್ಪಾ ಶೇಕಾಪೂರ, ರವೀಂದ್ರ ಗುಮಾಸ್ತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.