ಜನಪ್ರತಿನಿಧಿಗಳಿಂದ ಭೂಮಿಹುಣ್ಣಿಮೆ


Team Udayavani, Nov 1, 2020, 8:26 PM IST

sm-tdy-2

ಸಾಗರ: ವಿವಿಧ ಜನಪ್ರತಿನಿ ಧಿಗಳು ಶನಿವಾರ ರೈತ ಜೀವನವನ್ನು ನೆನಪಿಸಿಕೊಂಡು ಸಂಭ್ರಮದಿಂದ ತಮ್ಮ ಗ್ರಾಮಗಳಲ್ಲಿ ಭೂಮಿ ಹುಣ್ಣಿಮೆಯ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಎಂಎಸ್‌ಐಎಲ್‌ ಅಧ್ಯಕ್ಷ, ಸಾಗರ ಶಾಸಕಎಚ್‌. ಹಾಲಪ್ಪ ಹರತಾಳು ತಮ್ಮ ಕುಟುಂಬದೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ಸಹ ತಮ್ಮ ಮೂಲಗ್ರಾಮವಾದ ಹರತಾಳು ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿದರು.

ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಚೇತನರಾಜ್‌ ಕಣ್ಣೂರು ಅವರು ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ಅಡ್ಡೇರಿ-ಚಿಕ್ಕಬಿಲಗುಂಜಿ ಗ್ರಾಮದ ತಮ್ಮ ತೋಟದಲ್ಲಿ ಭೂಮಿಗೆ ಪೂಜೆ ಸಲ್ಲಿಸಿದರು. ಹಾಲಪ್ಪ, ಕಣ್ಣೂರು ತಮ್ಮ ಮನೆಯವರೊಂದಿಗೆ ಕುಳಿತು ತೋಟದಲ್ಲಿಯೇ ಊಟ ಮಾಡಿದರು. ಅಪ್ಪಯ್ಯ ಪೂಜೆ ಮಾಡಿ ಭೂಮಿಗೆ ತಲೆ ಬಾಗುವಾಗ ನೆಲವನ್ನೇ ನಂಬಿ ನರನಾಡಿಗಳನ್ನು ಸವೆಸಿ ಬೆವರ ಭಾಷ್ಯ ಬರೆದ ಜೀವದ ಎದೆಯ ಮಾತು ಸುತ್ತಲೂ ಪ್ರತಿಧ್ವನಿಸಿದಂತಾಯಿತು. ಅವ್ವನಿಗೆ ವಯಸ್ಸು ಆದಂತೆ ಹಬ್ಬಕ್ಕೂ ವಯಸ್ಸು ಆದಂತೆ ಅನ್ನಿಸುತ್ತದೆ. ಅಮ್ಮನ ಸಿಹಿ ಮತ್ತು ಸಪ್ಪೆ ಕಡಬು ಇನ್ನಿತರ ಅಡುಗೆ ತೋಟದಲ್ಲಿ ಉಣ್ಣುವುದರಿಂದಲೇ ಹೆಚ್ಚು ರುಚಿ ಎನ್ನಿಸುತ್ತದೆ ಎಂದು ತುಮರಿ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.

ಜಮೀನಿನಲ್ಲಿ ಪೂಜೆ ಮಾಡಿದ ಶಾಸಕ ಹಾಲಪ್ಪ :

ರಿಪ್ಪನ್‌ಪೇಟೆ: ಭೂಮಿ ಹುಣ್ಣಿಮೆ ಅಂಗವಾಗಿ ಶಾಸಕ ಹರತಾಳು ಹಾಲಪ್ಪ ಹರತಾಳಿನಲ್ಲಿನ ತಮ್ಮ ಜಮೀನಿನಲ್ಲಿ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಫಸಲು ಬರಲೆಂದು ಪ್ರಾರ್ಥಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹಾಲಪ್ಪ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ರೈತ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಇನ್ನು ಮಲೆನಾಡಿನ ವ್ಯಾಪ್ತಿಯಲ್ಲಿ ಅಕಾಲಿಕಮಳೆಯಿಂದಾಗಿ ಇಳುವರಿ ಕುಂಠಿತಗೊಳ್ಳುವ ಅತಂಕ ಮನೆ ಮಾಡಿದೆ. ಇದರೊಂದಿಗೆ ಹಬ್ಬ- ಹರಿದಿನಗಳು ಸಾಲುಸಾಲಾಗಿ ಬರುತ್ತಿದ್ದು ಗಗನಕ್ಕೇರಿರುವ ತರಕಾರಿ, ದಿನಸಿ ಧಾನ್ಯಗಳ ಖರೀದಿ ಸಹ ಕಷ್ಟಕರವಾಗಿದೆ. ರೈತ ನಾಗರಿಕರು ಸಂಕಷ್ಟ ಪರಿಸ್ಥಿಯಲ್ಲಿ ಸಿಲುಕಿಕೊಂಡಿದ್ದು ವಿಷಾದನೀಯ ಎಂದರು.

ತಾಪಂ ಸದಸ್ಯೆ ಸರಸ್ವತಿ ಗಣಪತಿ, ಹರತಾಳು ರಾಮಚಂದ್ರ, ಗಣಪತಿ, ಕೀರ್ತಿಗೌಡ ಕುಕ್ಕಳಲೆ, ಕೆ.ಬಿ. ಹೂವಪ್ಪ, ಆರ್‌.ಟಿ. ಗೋಪಾಲ, ಎನ್‌. ಸತೀಶ್‌, ಎ.ಟಿ.ನಾಗರತ್ನ, ತೀರ್ಥೇಶ್‌, ಸುಂದರೇಶ್‌, ನಿರೂಪ ರಿಪ್ಪನ್‌ ಪೇಟೆ, ಮುರುಳಿ, ಶಿವಪ್ಪ ಅವಡೆ, ರಮೇಶ್‌ ಚಿಬ್ಬಳ್ಳಿ, ಲೋಕೇಶ್‌ ತಮ್ಮಡಿಕೊಪ್ಪ ಇನ್ನಿತರರು ಇದ್ದರು.

ವಿವಿಧೆಡೆ ಭೂಮಿ ಹುಣ್ಣಿಮೆ ಸಂಭ್ರಮ :

ಸಾಗರ: ವರದಪುರದ ಶ್ರೀಧರಾಶ್ರಮ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಶನಿವಾರ ಅಡಕೆ ತೋಟ, ಭತ್ತದ ಗದ್ದೆಗಳಲ್ಲಿ ರೈತ ವರ್ಗ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಭೂಮಿ ಹುಣ್ಣಿಮೆ ಆಚರಣೆ ಸಂಭ್ರಮದಿಂದ ನಡೆಯಿತು. ಕೃಷಿಕರು ಅಡಕೆ ತೋಟದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು

ಅಡಕೆ ಕೊನೆಗಳನ್ನು ಹೊಂದಿದ ಮರವನ್ನು ಅಲಂಕರಿಸಿ ಪೂಜೆ ಸಲ್ಲಿಸಿದರೆ ತೆನೆ ಹೊತ್ತ ಭತ್ತದ ಗದ್ದೆಗಳ ಬದುವಿನಲ್ಲಿ ರೈತರು ಬಾಳೆ ಗಿಡಗಳನ್ನು ನೆಟ್ಟು ಭೂ ಪೂಜೆ ಸಲ್ಲಿಸಿದರು. ಈ ಭಾಗದ ಈಡಿಗ ಜನಾಂಗದವರು ಭೂಮಣ್ಣಿ ಬುಟ್ಟಿ ಸಿದ್ಧಪಡಿಸಿಅದರಲ್ಲಿ ಭೂಮಿಗೆ ಸಲ್ಲುವ ಕಡುಬು, ವಿವಿಧ ಎಲೆಗಳ ಪಲ್ಯಗಳನ್ನು ತಯಾರಿಸಿ ಪೂಜಾ ಸ್ಥಳಕ್ಕೆ ಹೊತ್ತೂಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದೊಂದು ದಿನ ತೋಟದಲ್ಲಿಯೇ ಊಟ ಮಾಡುವುದು ಪರಂಪರೆ. ಏಳು ತೋಟಗಳಲ್ಲಿ ಊಟ ಮಾಡಬೇಕು ಎಂಬ ನಿಯಮವನ್ನು ಹಿಂದೆ ತೋಟದಿಂದ ತೋಟಕ್ಕೆ ತೆರಳಿ ಆಚರಿಸಲಾಗುತ್ತಿತ್ತಾದರೂ ಈಗೀಗ ಅದು ಮಾಯವಾಗುತ್ತಿದೆ. ಭೂಮಿ ಹುಣ್ಣಿಮೆಯಂದು ಭೂಮಿಗೆ ವಿವಿಧ ಭಕ್ಷ್ಯ ಭೋಜನವನ್ನು ಒಳಗೊಂಡ ಚರಗ ಚೆಲ್ಲುವುದು, ಭೂಮಿತಾಯಿಯ ಬಯಕೆಯನ್ನು ತೀರಿಸುವ 9 ವಿಧದ ಆಹಾರವನ್ನು ನೈವೇದ್ಯವಾಗಿ ಇರಿಸಲಾಗುತ್ತದೆ. ನೈವೇದ್ಯಕ್ಕೆ ಇರಿಸಿದನ್ನು ಭೂಮಿಯಲ್ಲಿ ಬಲೀಂದ್ರನಿಗೆ ಬಚ್ಚಿಟ್ಟು ಬಲಿಪಾಡ್ಯಮಿ ದಿನ ಅದನ್ನು ಭೂಮಿಗೆ ಬೀರಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಲವು ಕೃಷಿಕರ ಮನೆ ಮಕ್ಕಳು ಉದ್ಯೋಗ ನಿಮಿತ್ತ ನಗರ ಸೇರಿದ್ದರಿಂದ ಭೂಮಿ ಹುಣ್ಣಿಮೆಯ ಉತ್ಸಾಹ ಕುಂದಿತ್ತು. ಈ ಬಾರಿ ಹಲವರು ಕೋವಿಡ್‌ ಕಾರಣದಿಂದ ಹಳ್ಳಿಯ ತಮ್ಮ ಮನೆಯಲ್ಲಿಯೇ ಉದ್ಯೋಗದ ಕೆಲಸ ಮಾಡುತ್ತಿರುವರಾಗಿದ್ದು, ರಜೆಯ ದಿನವಾದ ಶನಿವಾರವೇ ಹಬ್ಬ ಬಂದಿದ್ದರಿಂದ ಅವರೆಲ್ಲ ಪಾಲ್ಗೊಂಡು ಹಬ್ಬಕ್ಕೆ ಮೆರುಗು ನೀಡಿದರು ಎಂದು ಕೆಲವು ಹಿರಿಯ ಕೃಷಿಕರು ಸಂತಸಪಟ್ಟರು.

ಟಾಪ್ ನ್ಯೂಸ್

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

B.-Y.-Raghavendra

B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

madhu-bangara

Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.