IPL 2020: ರಾಜಸ್ಥಾನ್ ಔಟ್; 4ಕ್ಕೆ ನೆಗೆದ ಕೆಕೆಆರ್
Team Udayavani, Nov 1, 2020, 11:41 PM IST
ದುಬಾೖ: ರವಿವಾರ ರಾತ್ರಿಯ ಐಪಿಎಲ್ ಮುಖಾಮುಖೀಯಲ್ಲಿ ಕೋಲ್ಕತಾ ನೈಟ್‌ರೈಡರ್‌ಸ್‌ಗೆ 60 ರನ್ನುಗಳಿಂದ ಶರಣಾದ ರಾಜಸ್ಥಾನ್ ರಾಯಲ್ಸ್ ಕೂಟದಿಂದ ನಿರ್ಗಮಿಸಿದೆ. ಕೆಕೆಆರ್ 4ನೇ ಸ್ಥಾನಕ್ಕೆ ನೆಗೆದು ಪ್ಲೇ ಆಫ್ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ. ಮುಂದಿನ ಲೆಕ್ಕಾಚಾರವೆಲ್ಲ ರನ್‌ರೇಟ್ ಮೂಲಕ ನಡೆಯಲಿದೆ.
ನಾಯಕ ಇಯಾನ್ ಮಾರ್ಗನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಸಾಹಸದಿಂದ ಕೋಲ್ಕತಾ 7 ವಿಕೆಟಿಗೆ 191 ರನ್ ಪೇರಿಸಿದರೆ, ರಾಜಸ್ಥಾನ್ 9 ವಿಕೆಟಿಗೆ 131 ರನ್ ಮಾಡಿತು. 8ನೇ ಸೋಲುಂಡ ಸ್ಮಿತ್ ಬಳಗ ಅಂತಿಮ ಸ್ಥಾನಕ್ಕೆ ಕುಸಿದಿದೆ. ಘಾತಕ ವೇಗಿ ಪ್ಯಾಟ್ ಕಮಿನ್ಸ್ ಸರಿಯಾದ ಹೊತ್ತಿನಲ್ಲೇ ಸಿಡಿದು ನಿಂತು ರಾಜಸ್ಥಾನ್ ಹಾದಿಗೆ ಕಂಟಕವಾಗಿ ಪರಿಣಮಿಸಿದರು (34ಕ್ಕೆ 4). ವರುಣ್ ಚಕ್ರವರ್ತಿ, ಶಿವಂ ಮಾವಿ ತಲಾ 2 ವಿಕೆಟ್ ಉಡಾಯಿಸಿದರು. 35 ರನ್ ಮಾಡಿದ ಬಟ್ಲರ್ ಅವರದೇ ರಾಜಸ್ಥಾನ್ ಸರದಿಯ ಗರಿಷ್ಠ ಗಳಿಕೆ.
ಮಾರ್ಗನ್ ಬ್ಯಾಟಿಂಗ್ ಅಬ್ಬರ
ಕೆಕೆಆರ್ ನಾಯಕ ಮಾರ್ಗನ್ ಆಟ ಅತ್ಯಂತ ಸ್ಫೋಟಕವಾಗಿತ್ತು. ಶ್ರೇಯಸ್ ಗೋಪಾಲ್ ಅವರ ಓವರ್ ಒಂದರಲ್ಲಿ 21 ರನ್, ಬಳಿಕ ಬೆನ್ ಸ್ಟೋಕ್ಸ್ ಅವರ ಓವರಿನಲ್ಲಿ 24 ರನ್ ಸಿಡಿಸಿ ರಾಜಸ್ಥಾನ್ ಮೇಲೆರಗಿ ಹೋದರು. 35 ಎಸೆತಗಳಿಂದ ಅಜೇಯ 68 ರನ್ ಬಾರಿಸಿದರು. ಈ ಬಿರುಸಿನ ಆಟದ ವೇಳೆ 6 ಸಿಕ್ಸರ್, 5 ಬೌಂಡರಿ ಸಿಡಿಯಲ್ಪಟ್ಟಿತು. ಕೋಲ್ಕತಾ ಮೊದಲ ಓವರಿನಲ್ಲೇ ನಿತೀಶ್ ರಾಣಾ ಅವರನ್ನು ಕಳೆದುಕೊಂಡಿತು. ಗಿಲ್ (36)-ತ್ರಿಪಾಠಿ (39) ಜೋಡಿ ಯಿಂದ ದ್ವಿತೀಯ ವಿಕೆಟಿಗೆ 72 ರನ್ ಹರಿದು ಬಂತು. 12 ಓವರ್‌ಗಳಲ್ಲಿ ತಂಡದ ಮೊತ್ತ ನೂರರ ಗಡಿ ಮುಟ್ಟಿತು. ನಾಯಕ ಮಾರ್ಗನ್-ರಸೆಲ್ ಒಟ್ಟುಗೂಡಿದ ಬಳಿಕ ಕೆಕೆಆರ್ ರನ್‌ಗತಿ ಏರತೊಡಗಿತು.
ಸ್ಕೋರ್ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಶುಭಮನ್ ಗಿಲ್ ಸಿ ಬಟ್ಲರ್ ಬಿ ತೆವಾತಿಯಾ 36
ನಿತೀಶ್ ರಾಣಾ ಸಿ ಸಂಜು ಬಿ ಆರ್ಚರ್ 0
ರಾಹುಲ್ ತ್ರಿಪಾಠಿ ಸಿ ಉತ್ತಪ್ಪ ಬಿ ಶ್ರೇಯಸ್ 39
ನಾರಾಯಣ್ ಸಿ ಸ್ಟೋಕ್ಸ್ ಬಿ ತೆವಾತಿಯಾ 0
ಇಯಾನ್ ಮಾರ್ಗನ್ ಔಟಾಗದೆ 68
ದಿನೇಶ್ ಕಾರ್ತಿಕ್ ಸಿ ಸ್ಮಿತ್ ಬಿ ತೆವಾತಿಯಾ 0
ಆ್ಯಂಡ್ರೆ ರಸೆಲ್ ಸಿ ಮಿಲ್ಲರ್ ಬಿ ತ್ಯಾಗಿ 25
ಪ್ಯಾಟ್ ಕಮಿನ್ಸ್ ಸಿ ಸಂಜು ಬಿ ತ್ಯಾಗಿ 15
ನಾಗರ್‌ಕೋಟಿ ಔಟಾಗದೆ 1
ಇತರ 7
ಒಟ್ಟು(20 ಓವರ್‌ಗಳಲ್ಲಿ 7 ವಿಕೆಟಿಗೆ) 191
ವಿಕೆಟ್ ಪತನ: 1-1, 2-73, 3-73, 4-94, 5-99, 6-144, 7-184.
ಬೌಲಿಂಗ್:
ಜೋಫ್ರ ಆರ್ಚರ್ 4-0-19-1
ವರುಣ್ ಆರನ್ 2-0-22-0
ಶ್ರೇಯಸ್ ಗೋಪಾಲ್ 3-0-44-1
ಬೆನ್ ಸ್ಟೋಕ್ಸ್ 3-0-40-0
ರಾಹುಲ್ ತೆವಾತಿಯಾ 4-0-25-3
ಕಾರ್ತಿಕ್ ತ್ಯಾಗಿ 4-0-36-2
ರಾಜಸ್ಥಾನ್ ರಾಯಲ್ಸ್
ರಾಬಿನ್ ಉತ್ತಪ್ಪ ಸಿ ನಾಗರ್‌ಕೋಟಿ ಬಿ ಕಮಿನ್ಸ್ 6
ಬೆನ್ ಸ್ಟೋಕ್ಸ್ ಸಿ ಕಾರ್ತಿಕ್ ಬಿ ಕಮಿನ್ಸ್ 18
ಸ್ಟೀವನ್ ಸ್ಮಿತ್ ಬಿ ಕಮಿನ್ಸ್ 4
ಸಂಜು ಸ್ಯಾಮ್ಸನ್ ಬಿ ಕಾರ್ತಿಕ್ ಬಿ ಮಾವಿ 1
ಜಾಸ್ ಬಟ್ಲರ್ ಸಿ ಕಮಿನ್ಸ್ ಬಿ ಚಕ್ರವರ್ತಿ 35
ರಿಯಾನ್ ಪರಾಗ್ ಸಿ ಕಾರ್ತಿಕ್ ಬಿ ಕಮಿನ್ಸ್ 0
ರಾಹುಲ್ ತೆವಾತಿಯಾ ಸಿ ಕಾರ್ತಿಕ್ ಬಿ ಚಕ್ರವರ್ತಿ 31
ಶ್ರೇಯಸ್ ಗೋಪಾಲ್ ಔಟಾಗದೆ 23
ಜೋಫ್ರ ಆರ್ಚರ್ ಸಿ ಮಾವಿ ಬಿ ನಾಗರ್‌ಕೋಟಿ 6
ಕಾರ್ತಿಕ್ ತ್ಯಾಗಿ ಸಿ ಮತ್ತು ಬಿ ಮಾವಿ 2
ವರಣ್ ಆರನ್ ಔಟಾಗದೆ 0
ಇತರ 5
ಒಟ್ಟು( 20 ಓವರ್‌ಗಳಲ್ಲಿ 9 ವಿಕೆಟಿಗೆ) 131
ವಿಕೆಟ್ ಪತನ: 1-19, 2-27, 3-32, 4-32, 5-37, 6-80, 7-105, 8-125, 9-129.
ಬೌಲಿಂಗ್:
ಪ್ಯಾಟ್ ಕಮಿನ್ಸ್ 4-0-34-4
ಶಿವಂ ಮಾವಿ 4-1-15-2
ವರುಣ್ ಚಕ್ರವರ್ತಿ 4-0-20-2
ಸುನೀಲ್ ನಾರಾಯಣ್ 4-0-37-0
ಕಮಲೇಶ್ ನಾಗರ್‌ಕೋಟಿ 4-0-24-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.