ಆಲೂ ದರ ಶೇ.92, ಈರುಳ್ಳಿ ಶೇ.44 ಹೆಚ್ಚಳ
ಒಂದು ವರ್ಷದಲ್ಲಿ ಏರಿಕೆಯ ಹಾದಿ
Team Udayavani, Nov 2, 2020, 5:55 AM IST
ಸಾಂದರ್ಭಿಕ ಚಿತ್ರ
ಕಳೆದ ಒಂದು ವರ್ಷದಲ್ಲಿ ಗೋದಿ ಹೊರತುಪಡಿಸಿ ಇತರೆ ಎಲ್ಲ ಅತ್ಯಗತ್ಯ ಆಹಾರ ವಸ್ತುಗಳ ದರವು ಏರಿಕೆಯಾಗಿದೆ. ಅದರಲ್ಲೂ, ಆಲೂಗಡ್ಡೆ ಮತ್ತು ಈರುಳ್ಳಿಯದ್ದು ಸಿಂಹಪಾಲು. ಒಂದು ವರ್ಷದಲ್ಲಿ ಆಲೂಗಡ್ಡೆ ಚಿಲ್ಲರೆ ದರ ಶೇ.92ರಷ್ಟು ಹೆಚ್ಚಳವಾಗಿದ್ದರೆ, ಈರುಳ್ಳಿ ಚಿಲ್ಲರೆ ದರ ಶೇ.44ರಷ್ಟು ಏರಿಕೆಯಾಗಿದೆ. ಇದಕ್ಕೆಲ್ಲ ಆಹಾರ ಹಣದುಬ್ಬರದ ಹೆಚ್ಚಳವೇ ಕಾರಣ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.
ಅಧಿಕಾರಿಗಳು ಹೇಳ್ಳೋದೇನು?
ಆಲೂಗಡ್ಡೆ-ಈರುಳ್ಳಿ ಎರಡರ ದರದಲ್ಲೂ ಹೆಚ್ಚಳವಾಗಿದೆ. ಆದರೆ, ಇವರೆಡರ ನಡುವೆಯೂ ಭಾರೀ ವ್ಯತ್ಯಾಸವಿದೆ. ಅದೇನೆಂದರೆ, ಈರುಳ್ಳಿಯ ಲಭ್ಯತೆ ಹೆಚ್ಚಿದ್ದು, ಮಾರುಕಟ್ಟೆಗೆ ಬಂದೊಡನೆ ದರವೂ ಇಳಿಕೆಯಾಗಲಿದೆ. ಆದರೆ ಆಲೂಗಡ್ಡೆ ವಿಚಾರದಲ್ಲಿ ಹೀಗಾಗಲ್ಲ. ಆಲೂಗಡ್ಡೆಯ ಇಳುವರಿಯೇ ಕುಂಠಿತವಾಗಿರುವುದರಿಂದ ದರ ಇಳಿಕೆ ಅಷ್ಟು ಸುಲಭವಿಲ್ಲ. ಆದರೂ ಸರಕಾರ ದರ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದಿದ್ದಾರೆ ಸಚಿವಾಲಯದ ಅಧಿಕಾರಿಗಳು.
ಆಲೂಗಡ್ಡೆ ಇಳುವರಿ ಇಳಿಕೆ
ಈ ವರ್ಷ ಆಲೂಗಡ್ಡೆ ಇಳುವರಿಯೂ ಗಣನೀಯ ಇಳಿಕೆ ಕಂಡಿದೆ. ಅತೀಹೆಚ್ಚು ಆಲೂ ಬೆಳೆಯುವ ರಾಜ್ಯವಾದ ಉತ್ತರಪ್ರದೇಶದಲ್ಲಿ ಪ್ರಸಕ್ತ ವರ್ಷ ಕೇವಲ 1.24 ಕೋಟಿ ಟನ್ ಆಲೂಗಡ್ಡೆ ಬೆಳೆಯಲಾಗಿದೆ. ಕಳೆದ ವರ್ಷ ಇದು 1.55 ಕೋಟಿ ಟನ್ ಆಗಿತ್ತು. ಅದೇ ರೀತಿ ಪಶ್ಚಿಮ ಬಂಗಾಳ ದಲ್ಲೂ ಕಳೆದ ವರ್ಷಕ್ಕೆ ಹೋಲಿಸಿ¨ ರೆ (1.10 ಕೋಟಿ ಟನ್) ಈ ಬಾರಿ 90 ಲಕ್ಷ ಟನ್ ಆಲೂಗಡ್ಡೆ ಬೆಳೆಯ ಲಾಗಿದೆ.
ಒಂದು ವರ್ಷದಲ್ಲಿ ಆಲೂಗಡ್ಡೆ ಸಗಟು ದರದಲ್ಲಾದ ಹೆಚ್ಚಳ- ಶೇ.108
ಕ್ವಿಂಟಲ್‌ಗೆ 1,739 ರೂ. ಇದ್ದಿದ್ದು ಈಗ 3,633 ರೂ.ಗೆ ಏರಿಕೆ
ಈರುಳ್ಳಿಯ ಸಗಟು ಮಾರಾಟ ದರದಲ್ಲಾದ ಏರಿಕೆ- ಶೇ.47
ಕ್ವಿಂಟಲ್‌ಗೆ 1,739 ರೂ.ಗಳಿಂದ ಈಗ 5,645 ರೂ.ಗೆ ಹೆಚ್ಚಳ
5 ವರ್ಷಗಳಲ್ಲಿ ಆಲೂಗಡ್ಡೆ ದರದಲ್ಲಾದ ಏರಿಕೆ- ಶೇ.158
5 ವರ್ಷದ ಹಿಂದೆ ಕೆಜಿ ಆಲೂಗಡ್ಡೆಗೆ 16.70 ರೂ, ಈಗ 43 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.