ಜಿಲ್ಲಾಧಿಕಾರಿ ನೇತೃತ್ವದಲ್ಲಿ ದಾಳಿ ಅಕ್ರಮವಾಗಿ ಶೇಖರಿಸಿಟ್ಟ 600 ಕ್ವಿಂಟಲ್ ಪಡಿತರ ವಶ
Team Udayavani, Nov 2, 2020, 7:56 PM IST
ಕೋಟ : ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 600ಕ್ವಿಂಟಾಲ್ ಗೂ ಹೆಚ್ಚಿನ ಪಡಿತರ ಅಕ್ಕಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಸೋಮವಾರ ವಶಕ್ಕೆ ಪಡೆದುಕೊಂಡರು.
ಶಿರಿಯಾರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮಾಹಿತಿಯನ್ನು ಪಡೆದ ಅಧಿಕಾರಿಗಳ ತಂಡ ದಾಳಿ ನಡೆಸಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದೆ.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಜಿಲ್ಲೆಯಲ್ಲಿ ಅಕ್ರಮ ಪಡಿತರ ಮಾರಾಟ ಮಾಡುವ ಜಾಲ ಪತ್ತೆಯಾಗುತ್ತಿದ್ದು ಕೆಲವು ದಿನಗ ಹಿಂದೆ ಕುಂದಾಪುರದಲ್ಲಿ 600ಕ್ವಿಂಟಲ್ ಗೂ ಅಧಿಕ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿದ್ದ ಪ್ರದೇಶಕ್ಕೆ ದಾಳಿ ನಡೆಸಿದ್ದೇವೆ ಎಂದರು. ಅಲ್ಲದೆ ಬಡವರಿಗೆ ತಲುಪಬೇಕಾದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ತಂಡ ಸಕ್ರೀಯವಾಗಿದ್ದು ಅಂತಹ ತಂಡಗಳನ್ನು ಮಟ್ಟ ಹಾಕಲು ತಂಡ ಸಿದ್ಧವಾಗಿದೆ ಎಂದು ಹೇಳಿದ್ದಾರೆ.