ಬೆಂಗಳೂರಿಗೆ ಕಾದಿದೆ ಜಲ ಕೊರತೆ ಸ್ಥಿತಿ
ಜಗತ್ತಿನ 100 ನಗರಗಳಲ್ಲಿ 30ನೇ ಸ್ಥಾನ: ಡಬ್ಲ್ಯುಡಬ್ಲ್ಯುಎಫ್
Team Udayavani, Nov 3, 2020, 5:35 AM IST
ಹೊಸದಿಲ್ಲಿ: ಬೆಂಗಳೂರಿಗರೇ ನೀರಿನ ಬಳಕೆಯಲ್ಲಿ ಎಚ್ಚರಿಕೆ ವಹಿಸಿ…! ಮುಂದಿನ ದಿನಗಳಲ್ಲಿ ಉದ್ಯಾನ ನಗರಿಯಲ್ಲಿ ಜೀವ ಜಲಕ್ಕೆ ಭಾರೀ ಕೊರತೆ ಉಂಟಾಗಬಹುದು.
ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ನಡೆಸಿರುವ ಅಧ್ಯಯನ ಪ್ರಕಾರ ಬೆಂಗಳೂರು ಸಹಿತ ದೇಶದ 30 ನಗರಗಳಲ್ಲಿ ನೀರಿನ ಕೊರತೆ ಉಂಟಾಗ ಲಿದೆ. ಪಟ್ಟಿಯಲ್ಲಿ ಬೆಂಗಳೂರಿಗೆ ಮೂವತ್ತನೇ ಸ್ಥಾನ.
ಕಲ್ಲಿಕೋಟೆ, ವಿಶಾಖ ಪಟ್ಟಣ, ಜೈಪುರ, ಇಂದೋರ್, ಅಮೃತಸರ, ಪುಣೆ, ಮುಂಬಯಿ ಜಗತ್ತಿನಲ್ಲಿ ನೀರಿನ ಭಾರೀ ಕೊರತೆ ಅನುಭವಿಸಲಿರುವ 100 ಪಟ್ಟಣ/ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಅಧ್ಯಯನದ ಬಗ್ಗೆ ಮಾಹಿತಿ ನೀಡಿದ ಡಬ್ಲ್ಯುಡಬ್ಲ್ಯುಎಫ್ ಇಂಡಿಯಾದ ಡಾ| ಸೀಜಲ್ ವೋರಾ, 2050ರ ಒಳಗಾಗಿ ದೇಶದಲ್ಲಿ ನಗರ ಮತ್ತು ಪಟ್ಟಣಗಳ ಜನಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಲಿದೆ. ನೀರಿನ ಬಳಕೆಯೂ ವೃದ್ಧಿಸಲಿದೆ. ಭಾರತ ದಲ್ಲಿಯೇ 35 ಕೋಟಿ ಜನರು ನೀರಿನ ಕೊರತೆ ಎದುರಿಸುವಂತಾಗಲಿದೆ ಎಂದಿದ್ದಾರೆ.
ಜಗತ್ತಿನಲ್ಲಿ ಎಲ್ಲಿ ಸಮಸ್ಯೆ?
ಚೀನ ರಾಜಧಾನಿ ಬೀಜಿಂಗ್, ಇಂಡೋನೇಶ್ಯಾದ ಜಕಾರ್ತಾ, ಟರ್ಕಿಯ ಇಸ್ತಾಂಬುಲ್, ಹಾಂಕಾಂಗ್, ಮೆಕ್ಕಾ ಮತ್ತು ರಿಯೋ ಡಿ ಜನೈರೋಗಳಲ್ಲಿ ಭಾರೀ ಪ್ರಮಾಣದಲ್ಲಿ ಜೀವ ಜಲದ ಕೊರತೆ ಉಂಟಾಗಲಿದೆ ಎಂದು ಅಧ್ಯಯನದಿಂದ ಗೊತ್ತಾಗಿದೆ.
ಪರಿಹಾರವೇನು?
ಈಗಾಗಲೇ ನೀರಿನ ಕೊರತೆ ಹಲವು ನಗರಗಳಲ್ಲಿ ಉಂಟಾಗಿದೆ. ಕೆಲವೆಡೆ ಅದನ್ನು ಪರಿಹರಿಸುವ ಕ್ರಮಗಳ ಚಿಂತನೆಯೂ ನಡೆದಿದೆ.
– ಜಲಮೂಲಗಳನ್ನು ಕಾಪಿಟ್ಟುಕೊಳ್ಳುವ ಕೆಲಸ ಜರೂರಾಗಿ ನಡೆಯಬೇಕು.
– ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ ಏಕೀಕೃತ ನಗರ ನೀರು ನಿರ್ವಹಣೆ ಸಮರ್ಪಕವಾಗಿ ಜಾರಿ.
– ಅದರಲ್ಲಿ ನಗರ ಯೋಜನೆ, ಪರಿಸರ ವ್ಯವಸ್ಥೆ ಪುನರ್‌ಸ್ಥಾಪನೆ ಕ್ರಮ.
– ನೆರೆ ನಿಯಂತ್ರಣ, ಜೀವ ವೈವಿಧ್ಯ ರಕ್ಷಣೆಗೆ ಆದ್ಯತೆ.
– ಕೆಲವು ಹಂತಗಳಲ್ಲಿ ಸರಕಾರದ ವತಿಯಿಂದ ಜಲಮೂಲ ರಕ್ಷಣೆಗೆ ಹೂಡಿಕೆ.
– ಖಾಸಗಿ, ವಿತ್ತೀಯ ಸಂಸ್ಥೆಗಳು ನೀರಿನ ಒತ್ತಡ ನಿರ್ವಹಣೆಯಲ್ಲಿ ಪಾತ್ರ ವಹಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.