ದಶಕದಲ್ಲೇ ಉತ್ಪಾದನ ಚಟುವಟಿಕೆ ಭಾರೀ ಹೆಚ್ಚಳ
Team Udayavani, Nov 3, 2020, 2:34 AM IST
ಹೊಸದಿಲ್ಲಿ: ಸತತ 3ನೇ ತಿಂಗಳು ಭಾರತದ ಉತ್ಪಾದನಾ ವಲಯದ ಚಟುವಟಿಕೆ ಸೂಚ್ಯಂಕ (ಪಿಎಂಐ) ಹೆಚ್ಚಳ ಕಂಡಿದೆ. ಮಾರಾಟ ಪ್ರಮಾಣ ಹೆಚ್ಚಳವಾದ ಕಾರಣ ದಶಕದಲ್ಲೇ ಮೊದಲ ಬಾರಿಗೆ ಪಿಎಂಐ ಏರಿಕೆ ಕಂಡಿದೆ ಎಂದು ಐಎಚ್‌ಎಸ್ ಮಾರ್ಕಿಟ್ ಸಂಸ್ಥೆ ಬಿಡುಗಡೆ ಮಾಡಿದ ವರದಿ ಹೇಳಿದೆ. ಅದ ರಂತೆ, ಸೆಪ್ಟಂಬರ್‌ನಲ್ಲಿ ಪಿಎಂಐ 56.8 ರಷ್ಟಿತ್ತು. ಅಕ್ಟೋಬರ್‌ನಲ್ಲಿ 58. 9ಕ್ಕೆ ಏರಿದೆ. ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯಿಂದಾಗಿ ದೇಶ ದಲ್ಲಿನ ಉತ್ಪಾದನಾ ಚಟುವಟಿಕೆ ಸದೃಢ ಪ್ರಗತಿ ಹೊಂದುತ್ತಿರು ವುದನ್ನು ಇದು ಸೂಚಿಸಿದೆ. ಕೊರೊನಾ ಆರ್ಥಿಕ ಆಘಾತದಿಂದಾಗಿ ಏಪ್ರಿಲ್‌ನಲ್ಲಿ ಉತ್ಪಾದನಾ ಚಟುವಟಿಕೆ ಮುಗ್ಗರಿಸಿಬಿದ್ದಿತ್ತು. ನಂತರ ತಿಂಗಳುಗಳಲ್ಲಿ ಸೂಚ್ಯಂಕ 50ರ ಮೇಲೆ ಸಾಗುತ್ತಲೇ ಬಂದಿದೆ ಎಂದು ಐಎಚ್‌ಎಸ್‌ನ ಆರ್ಥಿಕ ಸಹಾಯಕ ನಿರ್ದೇಶಕ ಪೊಲ್ಯನ್ನ ದಿ ಲಿಮಾ ತಿಳಿಸಿದ್ದಾರೆ. “ಕಂಪನಿಗಳ ಮಾರಾಟ ಚಟುವಟಿಕೆ ಕೂಡ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳ ಕಾಣಲಿದೆ’ ಎಂದು ಹೇಳಿದ್ದಾರೆ.
ಡೀಸೆಲ್ ಮಾರಾಟವೂ ಹೆಚ್ಚಳ: ಲಾಕ್‌ಡೌನ್ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಡೀಸೆಲ್ ಮಾರಾಟ ಪ್ರಮಾಣವು ಕೊರೊನಾಪೂರ್ವ ಮಟ್ಟಕ್ಕೆ ತಲುಪಿದೆ. ಇದು ದೇಶದ ಆರ್ಥಿಕತೆಯು ಹಳಿಗೆ ಮರಳುತ್ತಿರುವು ದನ್ನು ಸೂಚಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಪ್ರಸಕ್ತ ಅಕ್ಟೋಬರ್‌ನಲ್ಲಿ ತೈಲದ ಬಳಕೆಯು ಶೇ.6.6ಕ್ಕೇರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.