ಅಲ್ಪ ತೀವ್ರತೆ ಸೋಂಕಿಗೆ ಆಯುರ್ವೇದ ಪರಿಣಾಮಕಾರಿ
ಕೇವಲ ಆರೇ ದಿನಗಳಲ್ಲಿ "ನೆಗೆಟಿವ್' ದೃಢಪಟ್ಟಿದೆ ಎಂದು ಎಐಎಎ ಮುಖವಾಣಿ ವರದಿ ಮಾಡಿದೆ.
Team Udayavani, Nov 2, 2020, 11:22 AM IST
ನವದೆಹಲಿ: ಸೌಮ್ಯ ಮತ್ತು ಅಲ್ಪ ತೀವ್ರತೆಯ ಕೋವಿಡ್ ಸೋಂಕನ್ನು ನಿಯಂತ್ರಿಸಲು ಆಯುರ್ವೇದ ಪರಿಣಾಮಕಾರಿ ಆಗಬಲ್ಲದು ಎಂದು ಆಯುಷ್ ಸಚಿವಾಲಯದ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ) ದೃಢಪಡಿಸಿದೆ.
ಆಯುಷ್ ಕ್ವಾತಾ, ಸಂಶಮನಿ ವಟಿ, ಪಿಫಟ್ರೋಲ್ ಗುಳಿಗೆ ಮತ್ತು ಲಕ್ಷ್ಮಿ ವಿಲಾಸ ರಸ- ಈ ನಾಲ್ಕು ಔಷಧ ಕ್ರಮ ಅನುಸರಿಸಿದ ಸೋಂಕಿತರ ಆರೋಗ್ಯ ಸುಧಾರಿಸಿದ್ದಲ್ಲದೆ, ಕೇವಲ ಆರೇ ದಿನಗಳಲ್ಲಿ “ನೆಗೆಟಿವ್’ ದೃಢಪಟ್ಟಿದೆ ಎಂದು ಎಐಎಎ ಮುಖವಾಣಿ ವರದಿ ಮಾಡಿದೆ.
ಅಲ್ಪ ತೀವ್ರತೆಯ ಸೋಂಕಿಗೆ ತುತ್ತಾಗಿದ್ದ ದೆಹಲಿ ಮೂಲದ ವ್ಯಕ್ತಿ ಹೋಂ ಕ್ವಾರಂಟೈನ್‌ನಲ್ಲಿದ್ದೇ ಆಯುಷ್ ಕ್ವಾತಾ, ಸಂಶಮನಿ ವಟಿ, ಪಿಫಟ್ರೋಲ್ ಗುಳಿಗೆ ಮತ್ತು ಲಕ್ಷ್ಮಿ ವಿಲಾಸ ರಸಗಳನ್ನೊಳಗೊಂಡ ಸಂಶಮಾನಾ ಚಿಕಿತ್ಸೆ ಪಡೆದಿದ್ದರು. ಒಂದೇ ವಾರದಲ್ಲಿ ಅವರು ಸೋಂಕಿನಿಂದ ಚೇತರಿಸಿ ಕೊಂಡರು.
ಜ್ವರ, ಆಯಾಸ, ನೆಗಡಿ, ಉಸಿರಾಟ ಸಮಸ್ಯೆ, ವಾಸನೆ ಗುರುತಿಸದಿರುವಿಕೆ- ಈ ಎಲ್ಲ ಸಮಸ್ಯೆಗಳನ್ನೂ ಆಯುರ್ವೇದ ಔಷಧಗಳು ನಿವಾರಿಸಲು ಸಫಲವಾಗಿವೆ ಎಂದು ವರದಿ ಹೇಳಿದೆ.
ಸೋಂಕಿಗೆ ತಮಿಳುನಾಡು ಕೃಷಿ ಸಚಿವ ದೊರೈಕಣ್ಣು ಬಲಿ
ಕೋವಿಡ್ ಸೋಂಕು ದೃಢಪಟ್ಟಿದ್ದ ತಮಿಳುನಾಡು ಕೃಷಿ ಸಚಿವ ಆರ್.ದೊರೈಕಣ್ಣು (72) ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಆರು ಮಕ್ಕಳನ್ನು ಅಗಲಿದ್ದಾರೆ. ಕಾವೇರಿ ಆಸ್ಪತ್ರೆಯಲ್ಲಿ ಸೋಂಕಿನ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದರು.
ತಮಿಳುನಾಡಿನಲ್ಲಿ ಸೋಂಕಿನಿಂದಾಗಿ ಅಸುನೀಗಿದ ಮೂರನೇ ಜನಪ್ರತಿನಿಧಿ ದೊರೈಕಣ್ಣು. ಡಿಎಂಕೆ ಶಾಸಕ ಜೆ.ಅನºಳಗನ್ ಮತ್ತು ಕನ್ಯಾಕುಮಾರಿ ಲೋಕಸಭಾ ಸದಸ್ಯ, ಕಾಂಗ್ರೆಸ್ ನಾಯಕ ಎಚ್.ವಸಂತಕುಮಾರ್ ಕೂಡ ಸೋಂಕಿಗೆ ಬಲಿಯಾಗಿದ್ದರು.
ದೊರೈಕಣ್ಣು ತಂಜಾವೂರು ಜಿಲ್ಲೆಯ ಪಾಪನಾಶನಮ್ ಕ್ಷೇತ್ರವನ್ನು 2006ರಿಂದ ಪ್ರತಿನಿಧಿಸುತ್ತಾ ಬಂದಿದ್ದರು. ಸಚಿವರ ನಿಧನಕ್ಕೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಸಿಎಂ ಕೆ.ಪಳನಿಸ್ವಾಮಿ, ಡಿಸಿಎಂ ಓ.ಪನ್ನೀರ್‌ಸೆಲ್ವಂ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಶೋಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ
Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.