ವಿಯೆನ್ನಾದಲ್ಲಿ ಭಯೋತ್ಪಾದಕ ದಾಳಿ-ಐಸಿಸ್ ಹೊಣೆ?; ನಾಲ್ವರು ಸಾವು, ಹಲವಾರು ಮಂದಿಗೆ ಗಾಯ
ಆರು ಸ್ಥಳಗಳಲ್ಲಿ ಶಂಕಿತ ಉಗ್ರರು ದಾಳಿ ನಡೆಸಿರುವುದಾಗಿ ವಿಯೆನ್ನಾ ಪೊಲೀಸರು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
Team Udayavani, Nov 3, 2020, 2:42 PM IST
ಆಸ್ಟ್ರಿಯಾ(ವಿಯೆನ್ನಾ): ಶಸ್ತ್ರಧಾರಿ ದಾಳಿಕೋರರು ಮಧ್ಯ ವಿಯೆನ್ನಾದ ಹಲವು ಪ್ರದೇಶಗಳಲ್ಲಿ ಸರಣಿ ಭಯೋತ್ಪಾದಕ ದಾಳಿ ನಡೆಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವಾರು ಮಂದಿ ಸಾವನ್ನಪ್ಪಿರುವ ಘಟನೆ ವಿಯೆನ್ನಾದಲ್ಲಿ ಮಂಗಳವಾರ ನಡೆದಿರುವುದಾಗಿ ಆಸ್ಟ್ರೀಯಾ ಚಾನ್ಸೆಲರ್ ಸೆಬಾಸ್ಟೀಯನ್ ಕುರ್ಝ್ ತಿಳಿಸಿದ್ದು, ಇದೊಂದು ಭಯೋತ್ಪಾದಕ ಕೃತ್ಯ ಎಂದು ಹೇಳಿದ್ದಾರೆ.
ಓರ್ವ ಗನ್ ಮ್ಯಾನ್ ನನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದು, ಈತ ಐಸಿಸ್ ಉಗ್ರಗಾಮಿ ಸಂಘಟನೆ ಪರ ಒಲವು ಹೊಂದಿದ್ದು, ಮತ್ತೊಬ್ಬ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.
ಶಂಕಿತ ವ್ಯಕ್ತಿಗಳು ರಫಲ್ಸ್ ಅನ್ನು ಹೊಂದಿದ್ದು, ಆಸ್ಟ್ರೀಯಾ ಸರ್ಕಾರ ಕೋವಿಡ್ ತಡೆಗಟ್ಟುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ ಡೌನ್ ಘೋಷಿಸುವ ಮೊದಲು ಈ ಶೂಟೌಟ್ ನಡೆದಿರುವುದಾಗಿ ವರದಿ ವಿವರಿಸಿದೆ. ಆರು ಸ್ಥಳಗಳಲ್ಲಿ ಶಂಕಿತ ಉಗ್ರರು ದಾಳಿ ನಡೆಸಿರುವುದಾಗಿ ವಿಯೆನ್ನಾ ಪೊಲೀಸರು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವಿಯೆನ್ನಾ ಮೇಯರ್ ಲುಡ್ವಿಂಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.