ಹದಗೆಟ್ಟ ಹೆದ್ದಾರಿ: ಸಂಚಾರಕ್ಕೆ ಕಿರಿಕಿರಿ
ಸವಾರರಿಂದ ಅಧಿಕಾರಿಗಳಿಗೆ ಹಿಡಿಶಾಪ
Team Udayavani, Nov 3, 2020, 6:46 PM IST
ದೇವದುರ್ಗ: ಪಟ್ಟಣದಲ್ಲಿ ಹಾಯ್ದು ಹೋದ ರಾಜ್ಯ ಹೆದ್ದಾರಿ ಜಹಿರುದ್ದೀನ್ ವೃತ್ತದ ನಡು ರಸ್ತೆ ಮಧ್ಯೆ ತೆಗ್ಗು ಬಿದ್ದ ಪರಿಣಾಮ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಎರಡು ತಿಂಗಳಾದರೂ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲೇ ಸಂಚಾರ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿದ್ದಾರೆ.
ನಿತ್ಯ ನೂರಾರು ವಾಹನಗಳ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲೇಸಂಚರಿಸಬೇಕಾಗಿದೆ. ರಸ್ತೆಯಲ್ಲಿ ಬಿದ್ದಿರುವ ತೆಗ್ಗು ತೆರವು ರಸ್ತೆಯಾಗಿರುವ ಕಾರಣ ಆಗಾಗ ಬೈಕ್ ಸವಾರರು ಬಿದ್ದು, ಸಣ್ಣಪುಟ್ಟ ಗಾಯಗಳಾಗಿರುವ ಘಟನೆಗಳು ಜರುಗಿವೆ. ರಸ್ತೆ ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಒಬ್ಬರ ಮೇಲೆ ಮತ್ತೂಬ್ಬರುಬೊಟ್ಟು ತೋರಿಸುವ ಮೂಲಕ ಅಪಾಯದಲ್ಲಿ ಸಂಚಾರಿಸಬೇಕಾಗಿದೆ.
ಈ ರಸ್ತೆ ಮಾರ್ಗವೇ ಅಧಿಕಾರಿಗಳು ಚುನಾಯಿತ ಜನಪತ್ರಿನಿಧಿಗಳು ಸಂಚಾರ ಮಾಡುತ್ತಿದ್ದರು. ಮರಂ ಹಾಕಿ ದುರಸ್ತಿ ಕೈಗೊಳ್ಳದೇ ಮೌನಕ್ಕೆ ಶರಣಾಗಿದ್ದಾರೆ. ರಾಜ್ಯ ಹೆದ್ದಾರಿ ರಸ್ತೆ ನಿತ್ಯ ನೂರಾರು ವಾಹನಗಳು, ಬೈಕ್ ಸವಾರರು ಸಂಚಾರ ಮಾಡಲಾಗುತ್ತಿದೆ.
ಕಿತ್ತು ಹೋದ ವಿಭಜಕ: ರಾಜ್ಯ ಹೆದ್ದಾರಿ ಗೌರಂಪೇಟೆ ವಾಲ್ಮೀಕಿ ವೃತ್ತದಿಂದ ಜಾಲಹಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗದ ಎಸ್‌ಬಿಐ ಬ್ಯಾಂಕ್ ವರೆಗೆ ರಸ್ತೆ ಮಧ್ಯೆ ಕಬ್ಬಿಣದ ವಿಭಜಕ ಮುರಿದು ಹೋಗಿದೆ. ದುರಸ್ತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗುತ್ತಿಲ್ಲ. ರಾತ್ರಿ ವೇಳೆ ಸಂಚಾರ ಕಷ್ಟವಾಗಿ ಪರಿಣಮಿಸಿದೆ.
ನಿರ್ವಹಣೆ ಕೊರತೆ: ಕೋಟ್ಯಂತರ ರೂ. ವೆಚ್ಚದಲ್ಲಿ ಕಲ್ಮಲದಿಂದ ತಿಂಥಿಣಿ ಬ್ರಿಜ್‌ವರೆಗೆ ರಾಜ್ಯ ಹೆದ್ದಾರಿ ರಸ್ತೆ ನಿರ್ಮಿಸಲಾಗಿದೆ. ಮಸರಕಲ್, ಸುಂಕೇಶ್ವರಹಾಳ, ಜಾಲಹಳ್ಳಿ, ಚಿಕ್ಕಹೊನ್ನಕುಣಿ, ನಿವೀಲಗುಡ್ಡ, ಅಮರಾಪೂರು ಸೇರಿ ಇತರೆ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಬಿರುಕು ಬಿಟ್ಟಿರುವ ರಸ್ತೆ ದುರಸ್ತಿ ನಿರ್ವಹಣೆ ಕೊರತೆ ಎದುರಾಗಿದೆ.
ನಿರ್ವಹಣೆಗೆ ಅನುದಾನ ಮೀಸಲಿದ್ದು, ದುರಸ್ತಿಗೆ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಗೊಳ್ಳುತ್ತಿಲ್ಲ. ದಿನೇ ದಿನೇ ಹೆದ್ದಾರಿ ಹಾಳಾಗುತ್ತಿದ್ದು, ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ರಸ್ತೆ ಮಧ್ಯೆ ಬಿದ್ದ ತೆಗ್ಗು, ವಿಭಜಕ ದುರಸ್ತಿಗೆ ಅಧಿಕಾರಿಗಳು ಮುಂದಾಗದೇ ಇದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಕರವೇ ತಾಲೂಕಾಧ್ಯಕ್ಷ ಬಸವರಾಜ ಗೋಪಾಳಪುರು ಆಗ್ರಹಿಸಿದರು.
ರಸ್ತೆ ಮಧ್ಯೆ ಹಾಕಿರುವ ವಿಭಜಕ ಮುರಿದಿದ್ದು, ರಸ್ತೆಯಲ್ಲಿ ತೆಗ್ಗು ಬಿದ್ದಿರುವುದು ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಜೆಇ ಅವರಿಗೆ ದುರಸ್ತಿ ಮಾಡಿಸಲು ಸೂಚನೆ ನೀಡುತ್ತೇನೆ. -ನೂಸರತ್ ಅಲಿ, ಎಇಇ
ಜಹಿರುದ್ದೀನ್ ವೃತ್ತದ ರಸ್ತೆಯಲ್ಲಿ ಬಿದ್ದಿರುವ ತೆಗ್ಗು ಮುಚ್ಚಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪುರಸಭೆ ವ್ಯಾಪ್ತಿಗೆ ಬರುವಂತಹ ಸಮಸ್ಯೆಗಳು ಹಂತ ಹಂತವಾಗಿ ಬಗೆಹರಿಸಲಾಗುತ್ತದೆ. -ಹನುಮಗೌಡ ಶಂಕರಬಂಡಿ, ಪುರಸಭೆ ಅಧ್ಯಕ್ಷರು
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.